'ಮಕ್ಕಳಿಲ್ಲದವರು'..ವ್ಯಾನ್ಸ್ ಆರೋಪಕ್ಕೆ ಖ್ಯಾತ ನಟಿ ಜೆನ್ನಿಫರ್ ತಿರುಗೇಟು

jennifer
Published on

ವಾಷಿಂಗ್ಟನ್​: ಮಕ್ಕಳಿಲ್ಲದವರು ಆಡಳಿತ ನಡೆಸಲು ಅಸಮರ್ಥರು ಎಂದು ಅಮೆರಿಕಾದ ಉಪಾಧ್ಯಕ್ಷ ಅಭ್ಯರ್ಥಿ ಜೆ.ಡಿ.ವ್ಯಾನ್ಸ್ (ರಿಪಬ್ಲಿಕನ್​ ಪಾರ್ಟಿ) ಹೇಳಿದ ಮಾತುಗಳು ವೈರಲ್ ಆಗುತ್ತಿವೆ.

ಜೆ.ಡಿ.ವ್ಯಾನ್ಸ್​ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಕುರಿತಾಗಿ ಈ ಮಾತುಗಳನ್ನಾಡಿದ್ದು, ಅವರನ್ನು ಅವಮಾನಿಸಲಾಗಿದೆ ಎಂದು ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಅಮೆರಿಕಾದ ಖ್ಯಾತ ನಟಿ ಜೆನ್ನಿಫರ್ ಅನಿಸ್ಟನ್ ಸಹ ಈ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದಾರೆ.

ಮಕ್ಕಳಿಲ್ಲದ ಮಹಿಳೆಯರು ಶೋಚನೀಯ ಸ್ಥಿತಿಯಲ್ಲಿ ದೈನಂದಿನ ಜೀವನವನ್ನು ನಡೆಸುತ್ತಿರುತ್ತಾರೆ. ಅವರು ದೇಶವನ್ನು ಸಹ ಶೋಚನೀಯವಾಗಿಸಲು ಬಯಸುತ್ತಾರೆ. ಪ್ರಜಾಪ್ರಭುತ್ವವಾದಿಗಳ ಭವಿಷ್ಯವು ಮಕ್ಕಳಿಲ್ಲದ ಜನರಿಂದ ನಿಯಂತ್ರಿಸಲ್ಪಡುತ್ತದೆ. ಇದು ಅರ್ಥಪೂರ್ಣವಾಗಿದೆ. ದೇಶದಲ್ಲಿ ನೇರ ಪಾಲನ್ನು ಹೊಂದಿರದ ಜನರ ಕೈಯಲ್ಲಿ ಅಧಿಕಾರವನ್ನು ಇಡುವುದು ಬೇಡ ಎಂದು ವ್ಯಾನ್ಸ್ ಇದು ಕಮಲಾ ಹ್ಯಾರಿಸ್ ಕುರಿತು ಸಂದರ್ಶನವೊಂದರಲ್ಲಿ ಹೇಳಿದ್ದರು.

ವ್ಯಾನ್ಸ್ ಆರೋಪ ಕ್ಕೆ ಹಲವರು ಟೀಕಿಸಿದ್ದಾರೆ. ಮಕ್ಕಳ ಕೊರತೆಯ ಬಗ್ಗೆ ಮುಕ್ತವಾಗಿ ಮಾತನಾಡಿರುವ ನಟಿ ಜೆನ್ನಿಫರ್ ಮಕ್ಕಳಿಗಾಗಿ ತಾನು ಐವಿಎಫ್ ಮೊರೆ ಹೋದರೂ ಮಗು ಆಗಲಿಲ್ಲ. ಈ ರೀತಿ ನಿಮ್ಮ ಮಗಳಿಗೆ ಐವಿಎಫ್ ಅಗತ್ಯ ಬರುವುದಿಲ್ಲ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net