

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಜೇಸಿ ಸಪ್ತಾಹ ಸುಧಾಮ ಸ್ನೇಹ ಸಾಧನೆ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ವಿವಿಧ ಕ್ರೀಡಾಕೂಟ, ಸ್ಪರ್ಧೆಗಳು ನಡೆಯಿತು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಕ್ರೀಡಾಕೂಟ ಉದ್ಘಾಟಿಸಿದರು.ಅಧ್ಯಕ್ಷ ರಂಜಿತ್ ಎಚ್.ಡಿ.ಅಧ್ಯಕ್ಷತೆ ವಹಿಸಿದ್ದರು.
ನಾಲ್ಕೂರು ಪ್ರಗತಿಪರ ಕೃಷಿಕ ತಿಮ್ಮಪ್ಪ ಪೂಜಾರಿ, ಮಡಂತ್ಯಾರು ಜೆಸಿಐ ಅಧ್ಯಕ್ಷ ವಿವೇಕ್ ಮಾನ್ಯ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್, ಬೆಳ್ತಂಗಡಿ ತಾಲೂಕು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಬೆಳ್ತಂಗಡಿ ಬಿ. ಸಿ. ಎಂ. ಹಾಸ್ಟೆಲ್ ನಿಲಯ ಪಾಲಕ ಚಂದ್ರಪ್ಪ ಡಿ., ಕರಂಬಾರು ಶ್ರೀ ಗುರುದತಾಂಜನೇಯ ಭಜನಾ ಸಮಿತಿ ಅಧ್ಯಕ್ಷ ಹರೀಶ್ ಕಲ್ಲಾಜೆ, ಕಾರ್ಯದರ್ಶಿ ಅನುದೀಪ್ ಜೈನ್, ಜೇಸಿ ಸಪ್ತಾಹ ಸಂಯೋಜಕಿ ಹೇಮಾವತಿ ಕೆ., ಸಹ ಸಂಯೋಜಕ ರಕ್ಷಿತ್ ಅಂಡಿಂಜೆ ಉಪಸ್ಥಿತರಿದ್ದರು.
ಬಳಿಕ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಾದ ಚಿತ್ರ ಬಿಡಿಸುವುದು, ಭಾವಗೀತೆ, ಸಮೂಹ ಜನಪದ ಗೀತೆ, ಕೇರಂ, ಚೆಸ್, ಚುಕ್ಕಿ ರಂಗೋಲಿ, ಸಂಗೀತ ಕುರ್ಚಿ, ಡ್ರೈ ಲೀಫ್ ಕ್ರಾಫ್ಟ್ ಮೊದಲಾದ ಸ್ಪರ್ಧೆಗಳು ನಡೆಯಿತು.