ಆ ಗಾಯಕಿಯೇ ಜಯಂ ರವಿ ಡಿವೋರ್ಸ್​ಗೆ ಕಾರಣ? ಗೋವಾ ರಹಸ್ಯ ಬಯಲು, ಗಂಡನ ಮೇಲೆ ಆರತಿ ಆಕ್ರೋಶ

Jayam Ravi

ಚೆನ್ನೈ: ಕಾಲಿವುಡ್ ಸ್ಟಾರ್ ನಟ ಜಯಂ ರವಿ ಅವರು ತಮ್ಮ ಪತ್ನಿ ಆರತಿಗೆ ವಿಚ್ಛೇದನ ನೀಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸುದ್ದಿ ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ ಬೇರ್ಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜಯಂ ರವಿ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಡಿವೋರ್ಸ್​ ಖಚಿತಪಡಿಸಿದರು. ಇದರ ಬೆನ್ನಲ್ಲೇ ಆರತಿ ಕೂಡ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ರವಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಏಕಪಕ್ಷೀಯವಾಗಿ ಡಿವೋರ್ಸ್​ ಘೋಷಣೆ ಮಾಡಿದ್ದಾರೆ. ಇದರಿಂದ ನನಗೂ ಮತ್ತು ನನ್ನ ಮಕ್ಕಳಿಗೂ ಅನ್ಯಾಯವಾಗಿದೆ ಎಂದು ಧ್ವನಿ ಎತ್ತಿದರು.

ನಾನು ನನ್ನ ಪತಿಯೊಂದಿಗೆ ನೇರವಾಗಿ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದೆ. ದುರದೃಷ್ಟವಶಾತ್ ನನಗೆ ಆ ಅವಕಾಶ ಸಿಗಲಿಲ್ಲ. ಇದೀಗ ಈ ಡಿಢೀರ್​ ಡಿವೋರ್ಸ್​ ಪ್ರಕಟಣೆಯಿಂದ ನನ್ನ ಮಕ್ಕಳು ಮತ್ತು ನಾನು ಆಘಾತಕ್ಕೆ ಒಳಗಾಗಿದ್ದೇವೆ. ನಮ್ಮ ಮದುವೆಯನ್ನು ವಿಸರ್ಜಿಸುವ ಮತ್ತು ಪ್ರತ್ಯೇಕಗೊಳ್ಳುವ ನಿರ್ಧಾರವು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ಇದರಿಂದ ನಮ್ಮ ಕುಟುಂಬಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯು ನಮಗೆ ಅತೀವ ದುಃಖವನ್ನುಂಟುಮಾಡಿದ್ದರೂ, ನಾನು ಗೌರವದಿಂದ ವರ್ತಿಸಬೇಕೆಂದು ಭಾವಿಸುತ್ತೇನೆ. ಈ ಕಾರಣಕ್ಕೆ ನಾನು ಈವರೆಗೂ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ ಎಂದು ಆರತಿ ಹೇಳಿದ್ದಾರೆ.

ಆರತಿ ಹೇಳಿದ ಮಾತಿನಲ್ಲಿ ಸತ್ಯವಿದೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜಯಂ ರವಿ ನಡೆಯನ್ನು ಪ್ರಶ್ನಿಸಿದ್ದಾರೆ. ನಟ ಜಯಂ ರವಿ ವಿಚ್ಛೇದನದ ಘೋಷಣೆಯ ನಂತರ ಇದುವರೆಗೆ ಯಾವುದೇ ಮಾತುಗಳನ್ನು ಆಡಿಲ್ಲ. ಆರತಿಯ ಪತ್ರಕ್ಕೆ ಉತ್ತರ ನೀಡುವ ಪ್ರಯತ್ನವನ್ನು ಮಾಡಿಲ್ಲ. ಇದರ ನಡುವೆ ಕಾಲಿವುಡ್​ ಅಂಗಳದಲ್ಲಿ ಸಂಚಲನಾತ್ಮಕ ಸುದ್ದಿಯೊಂದು ಹರಿದಾಡುತ್ತಿದೆ. ಅದೇನೆಂದರೆ, ಗಾಯಕಿ ಕೆನಿಶಾ ಜೊತೆಗಿನ ಸಂಬಂಧವೇ ವಿಚ್ಛೇದನಕ್ಕೆ ಕಾರಣ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ನಟ ಜಯಂ ರವಿ ಇತ್ತೀಚೆಗೆ ಗೋವಾದಲ್ಲಿ ರಜೆಯಲ್ಲಿದ್ದರು. ಜೂನ್ 4 ಜಯಂ ರವಿ ಮತ್ತು ಆರತಿ ಮದುವೆಯ ದಿನ. ಕಳೆದ 14 ವರ್ಷಗಳಿಂದ ಮದುವೆಯ ದಿನದಂದು ಯಾವುದೇ ಶೂಟಿಂಗ್ ಇದ್ದರೂ ಅದಕ್ಕೆ ಬ್ರೇಕ್​ ಹಾಕಿ ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಇರುತ್ತಿದ್ದ ಜಯಂ ರವಿ, ಈ ವರ್ಷ ಶೂಟಿಂಗ್ ಇದೆ ಎಂದು ಹೇಳಿ ತಪ್ಪಿಸಿಕೊಂಡಿದ್ದರು.

ಆಘಾತಕಾರಿ ವಿಷಯವೆಂದರೆ ಜಯಂ ರವಿ ಖರೀದಿಸಿದ ಕಾರಿಗೆ ನಿಷೇಧಿತ ಕಪ್ಪು ಸನ್ ಫಿಲ್ಟರ್ ಪೇಪರ್ ಅಂಟಿಸಿದ್ದಕ್ಕಾಗಿ ಪೊಲೀಸರು ಜೂನ್​ ತಿಂಗಳಲ್ಲೇ ದಂಡ ವಿಧಿಸಿದ್ದರು. ಆರತಿ ಹೆಸರಲ್ಲಿ ಖರೀದಿಸಿದ ಕಾರು ಆಗಿದ್ದರಿಂದ ನೇರವಾಗಿ ಆರತಿ ಅವರಿಗೆ ಎಸ್​ಎಂಎಸ್ ಹೋಗಿತ್ತು. ಇದನ್ನು ನೋಡಿದ ಆರತಿ ಗಾಬರಿಯಾದರು. ಶೂಟಿಂಗ್ ಎಂದು ಹೇಳಿ ಗೋವಾಕ್ಕೆ ಯಾಕೆ ಹೋದರು ಎಂದು ಜಗಳ ಆಡಿದ್ದರು. ಆಗ ಜಯಂ ರವಿ ಯಾರ ಜೊತೆ ಇದ್ದಾರೆ ಎಂದು ಅವರ ಆಪ್ತ ಸ್ನೇಹಿತರ ಮೂಲಕ ವಿಚಾರಿಸಿದಾಗ ಗಾಯಕಿ ಕೆನಿಶಾ ಹೆಸರು ಹೊರಬೀಳುತ್ತದೆ. ಅಂದು ಕೆನಿಶಾ ಒಬ್ಬಳೇ ಇರಲಿಲ್ಲ, ಅಲ್ಲಿ ತುಂಬಾ ಗೆಳೆಯರಿದ್ದರು. ಹೀಗಾಗಿ ಅಂದು ಆರತಿ ಸುಮ್ಮನಾದರು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

View this post on Instagram

A post shared by KENEESHAA (@kenishaafrancis)

ಇದಾದ ಕೆಲ ದಿನಗಳ ನಂತರ ಮತ್ತೊಂದು ಸಮಸ್ಯೆ ವರದಿಯಾಯಿತು. ಜೂನ್ 24 ರಂದು ಆರತಿ ಅವರ ಸೆಲ್​ಫೋನ್‌ಗೆ ಮತ್ತೊಂದು ಎಸ್‌ಎಂಎಸ್ ಬಂದಿತು. ಜಯಂ ರವಿ ಅವರ ಕಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ ಮತ್ತು ಅತಿವೇಗವಾಗಿ ಚಾಲನೆ ಮಾಡಿದೆ ಎಂದು ಎಸ್​ಎಂಎಸ್​ನಲ್ಲಿತ್ತು. ಬಳಿಕ ಆರತಿ ಅವರು ನೇರವಾಗಿ ಗೋವಾಕ್ಕೆ ಹೋಗಿ ವಿಚಾರಿಸಿದಾಗ, ಜಯಂ ರವಿ ಯಾವಾಗಲೂ ಗೋವಾಕ್ಕೆ ಬರುತ್ತಾರೆ ಮತ್ತು ಅವರು ಸಾಮಾನ್ಯವಾಗಿ ಉಳಿದುಕೊಳ್ಳುವ ಹೋಟೆಲ್‌ನಲ್ಲಿ ಉಳಿದುಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಯಿತು. ಅದೇ ರೀತಿ ಜಯಂ ರವಿ ಅವರು ಐಷಾರಾಮಿ ಬಂಗಲೆ ಖರೀದಿಸಿ ಗಾಯಕಿ ಕೆನೀಶಾ ಅವರ ಜೊತೆ ಅಲ್ಲಿಯೇ ವಾಸವಾಗಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇಲ್ಲಿಯವರೆಗೂ ಯಾವುದೇ ವರದಿಗಳು ದೃಢಪಟ್ಟಿಲ್ಲ. ಸದ್ಯ ಊಹಾಪೋಹಗಳು ಹರಿದಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜಯಂ ರವಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

View this post on Instagram

A post shared by KENEESHAA (@kenishaafrancis)

ಆರತಿ ಬರೆದ ಪತ್ರದಲ್ಲಿ ಏನಿತ್ತು?
ನನ್ನ ಗಮನಕ್ಕೆ ತರದೆ ಅಥವಾ ಒಪ್ಪಿಗೆಯಿಲ್ಲದೆ ನಮ್ಮ ವೈವಾಹಿಕ ಜೀವನದ ಬಗ್ಗೆ ಇತ್ತೀಚಿಗೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆಯಿಂದ ನಾನು ಆಘಾತಕ್ಕೆ ತೀವ್ರ ಒಳಗಾಗಿದ್ದೇನೆ ಮತ್ತು ದುಃಖಿತಳಾಗಿದ್ದೇನೆ. 18 ವರ್ಷಗಳ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಮಹತ್ವದ ವಿಷಯವನ್ನು ತುಂಬಾ ಗೌರವಯುತವಾಗಿ ಮತ್ತು ಗೌಪ್ಯತೆಯಿಂದ ನಿರ್ವಹಿಸಬೇಕೆಂದು ನಾನು ನಂಬುತ್ತೇನೆ. ನಾನು ನನ್ನ ಪತಿಯೊಂದಿಗೆ ನೇರವಾಗಿ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದೆ. ದುರದೃಷ್ಟವಶಾತ್, ನನಗೆ ಆ ಅವಕಾಶ ಸಿಗಲಿಲ್ಲ. ಇದೀಗ ಈ ಡಿಢೀರ್​ ಡಿವೋರ್ಸ್​ ಪ್ರಕಟಣೆಯಿಂದ ನನ್ನ ಮಕ್ಕಳು ಮತ್ತು ನಾನು ಆಘಾತಕ್ಕೆ ಒಳಗಾಗಿದ್ದೇವೆ. ನಮ್ಮ ಮದುವೆಯನ್ನು ವಿಸರ್ಜಿಸುವ ಮತ್ತು ಪ್ರತ್ಯೇಕಗೊಳ್ಳುವ ನಿರ್ಧಾರವು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ಇದರಿಂದ ನಮ್ಮ ಕುಟುಂಬಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯು ನಮಗೆ ಅತೀವ ದುಃಖವನ್ನುಂಟುಮಾಡಿದ್ದರೂ, ನಾನು ಗೌರವದಿಂದ ವರ್ತಿಸಬೇಕೆಂದು ಭಾವಿಸುತ್ತೇನೆ. ಈ ಕಾರಣಕ್ಕೆ ನಾನು ಈವರೆಗೂ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಇನ್ನು ಈ ಪ್ರಕರಣದಲ್ಲಿ ನನ್ನನ್ನು ದೂಷಿಸುವ ಮತ್ತು ನನ್ನ ಪಾತ್ರವನ್ನು ತಪ್ಪಾಗಿ ನಿರೂಪಿಸುವ ಸುದ್ದಿಯಿಂದ ನಾನು ತೀವ್ರವಾಗಿ ನೋಂದಿದ್ದೇನೆ. ತಾಯಿಯಾಗಿ ನನ್ನ ಮೊದಲ ಆದ್ಯತೆ ಯಾವಾಗಲೂ ನನ್ನ ಮಕ್ಕಳ ಯೋಗಕ್ಷೇಮವಾಗಿದೆ. ಈ ಘಟನೆ ನನ್ನ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಹೆದರುತ್ತೇನೆ. ನಮ್ಮ ಮಕ್ಕಳ ಯೋಗಕ್ಷೇಮದ ಮೇಲೆ ನನ್ನ ಗಮನವಿದೆ ಮತ್ತು ಈ ಕಷ್ಟದ ಸಮಯದಲ್ಲಿ ನಾನು ಅವರನ್ನು ರಕ್ಷಿಸುತ್ತೇನೆ. ನಾನು ಪತ್ರಿಕೆಗಳು, ಮಾಧ್ಯಮಗಳು ಮತ್ತು ನಮ್ಮ ಆತ್ಮೀಯ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ, ಏಕೆಂದರೆ, ಸಮಯಕ್ಕೆ ಸತ್ಯವು ಹೊರಬರುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ದಯೆ ಮತ್ತು ಪ್ರೀತಿ ನಮ್ಮ ಶಕ್ತಿ. ನಮ್ಮ ಜೀವನದ ಈ ಅಧ್ಯಾಯದಲ್ಲಿ ನಿಮ್ಮ ಗೌಪ್ಯತೆಯನ್ನು ಕೋರುತ್ತೇನೆ ಎಂದಿದ್ದಾರೆ.

View this post on Instagram

A post shared by Aarti Ravi (@aarti.ravi)

ಜಯಂ ರವಿ ಪತ್ರದಲ್ಲೇನಿತ್ತು?
ಹೆಚ್ಚು ಯೋಚಿಸಿದ ನಂತರ ಆರತಿಯೊಂದಿಗೆ ನನ್ನ ವೈವಾಹಿಕ ಜೀವನದಿಂದ ದೂರವಿರಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ಆತುರವಾಗಿ ತೆಗೆದುಕೊಂಡಿಲ್ಲ, ಕೆಲವು ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ. ಈ ಸಮಯದಲ್ಲಿ ನನ್ನ ಖಾಸಗಿತನ ಮತ್ತು ನನಗೆ ಹತ್ತಿರವಿರುವವರ ಗೌಪ್ಯತೆಯನ್ನು ಗೌರವಿಸಲು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಈ ನಿರ್ಧಾರವು ನನ್ನ ಸ್ವಂತ ನಿರ್ಧಾರವಾಗಿದೆ ಮತ್ತು ಈ ವಿಷಯವು ನನ್ನ ವೈಯಕ್ತಿಕ ವಿಷಯವಾಗಿ ಉಳಿಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಅಭಿನಯದ ಮೂಲಕ ನನ್ನ ಅಭಿಮಾನಿಗಳು ಮತ್ತು ಜನರಲ್ಲಿ ಸಂತೋಷ ಮತ್ತು ತೃಪ್ತಿಯನ್ನು ತರುವುದು ನನ್ನ ಆದ್ಯತೆಯಾಗಿದೆ. ನಾನು ಎಂದೆಂದಿಗೂ ನಿಮ್ಮ ಜಯಂ ರವಿಯಾಗಿರಲು ಬಯಸುತ್ತೇನೆ. ನೀವು ನನಗೆ ನೀಡುತ್ತಿರುವ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ನಿರಂತರ ಬೆಂಬಲಕ್ಕೆ ಧನ್ಯವಾದಗಳು ಎಂದು ಜಯಂ ರವಿ ಹೇಳಿದ್ದಾರೆ.

ಅಂದಹಾಗೆ ಜಯಂ ರವಿ ಅವರು 2009ರಲ್ಲಿ ಆರತಿಯನ್ನು ವಿವಾಹವಾದರು. ಆರತಿ, ತಮಿಳಿನ ಖ್ಯಾತ ನಿರ್ಮಾಪಕಿ ಸುಜಾತಾ ವಿಜಯ್ ಕುಮಾರ್ ಅವರ ಮಗಳು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಆರವ್ ಇತ್ತೀಚೆಗೆ ಟಿಕ್ ಟಿಕ್ ಟಿಕ್ ಚಿತ್ರದಲ್ಲಿ ನಟಿಸಿದ್ದರು. ರವಿ ಮತ್ತು ಆರತಿ ಜೋಡಿ ಕಾಲಿವುಡ್ ಇಂಡಸ್ಟ್ರಿಯಲ್ಲಿ ಮುದ್ದಾದ ಜೋಡಿ ಎಂದೇ ಹೆಸರುವಾಸಿಯಾಗಿತ್ತು. ಆದರೆ ಕೆಲವು ವರ್ಷಗಳಿಂದ ಭಿನ್ನಾಭಿಪ್ರಾಯಗಳಿದ್ದು, ಕೆಲ ದಿನಗಳಿಂದ ಇಬ್ಬರೂ ದೂರ ಉಳಿದಿದ್ದರು. ಇದೀಗ ಡಿವೋರ್ಸ್​ ಆಗಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. (ಏಜೆನ್ಸೀಸ್​)

ಡಿವೋರ್ಸ್​ ಘೋಷಣೆ ಮಾಡಿದ ಬೆನ್ನಲ್ಲೇ ಜಯಂ ರವಿ ವಿರುದ್ಧ ಆಕ್ರೋಶ ಹೊರಹಾಕಿದ ಪತ್ನಿ ಆರತಿ!

ಬ್ಯಾಟಿಂಗ್​ ವೇಳೆ ವಿರಾಟ್​ ಕೊಹ್ಲಿ ಹೇಳುವ ಮಂತ್ರವನ್ನು ಬಹಿರಂಗಪಡಿಸಿದ ಗೌತಮ್​ ಗಂಭೀರ್​!

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…