ವಸತಿ ರಹಿತ ಬೀದಿ ಮಕ್ಕಳ ಕಲ್ಯಾಣಕ್ಕೆ ಜವಾಹರ್ ಬಾಲ ಮಂಚ್ ಕಾರ್ಯಕ್ರಮ

Jawahar
Published on

ಬೆಂಗಳೂರು : ದೇಶದಲ್ಲಿ ವಸತಿ ರಹಿತ, ಬೀದಿ ಮಕ್ಕಳ ಕಲ್ಯಾಣಕ್ಕಾಗಿ ನ.14ರಂದು ಆಯೋಜಿಸಲು ಉದ್ದೇಶಿಸಿರುವ ಜವಾಹರ್ ಬಾಲಮಂಚ್ ಯೋಜನೆಯ ಪೂರ್ವಭಾವಿ ಸಭೆಯು ಸೋಮವಾರ ನಡೆಯಿತು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಇ. ಸುಧೀಂದ್ರ ಸಭೆಯಲ್ಲಿ ಪಾಲ್ಗೊಂಡು ಜವಾಹರ್ ಬಾಲ ಮಂಚ್ ವಸತಿ ರಹಿತ, ಬೀದಿ ಮಕ್ಕಳ ಕಲ್ಯಾಣಕ್ಕೆ ಯೋಜನೆಯು ನಾಂದಿಯಾಗಲಿದ್ದು, ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂದರು.

ನೆಹರು ಜನ್ಮದಿನವನ್ನು ಮಕ್ಕಳ ದಿನಾಚರಣೆ ಹೆಸರಲ್ಲಿ ಆಚರಿಸಲಾಗುತದೆ. ಅಂದು ಯೋಜನೆಗೆ ರೂಪು ರೇಷೆ ಸಿದ್ಧಪಡಿಸಲಾಗಿದ್ದು, 7 ವರ್ಷ ದಿಂದ 17 ವರ್ಷದವರೆಗಿನ ಬೀದಿ ಮಕ್ಕಳ ಕಲ್ಯಾಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಜಗತ್ತಿನಾದ್ಯಂತ 80 ಮಿಲಿಯನ್ ವಸತಿ ರಹಿತ ಮಕ್ಕಳಿದ್ದು, ಬೆಂಗಳೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಬೀದಿ ಮಕ್ಕಳಿರುವ ಬಗ್ಗೆ ಅಂದಾಜಿದೆ. ಆ ಮಕ್ಕಳಿಗೆ ಈ ಯೋಜನೆಯಿಂದ ಉಪಯೋಗವಾಗಲಿದೆ.

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಸುಧಾಕರ್, ಡಾ.ಜಿ.ವಿ.ಹರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್, ಜೈ ಕುಮಾರ್ ಪಿಳ್ಳೆ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net