ಮಾ.1ಕ್ಕೆ ಅಂತರಂಗ ತಂಡದ ಹುತ್ತದಲ್ಲಿ ಹುತ್ತ ನಾಟಕ ಪ್ರದರ್ಶನ

drama
Published on

ಬೆಂಗಳೂರು : ನಗರದ ಪ್ರಸಿದ್ಧ ರಂಗತಂಡ ಅಂತರಂಗ ಪ್ರಸ್ತುತಿಪಡಿಸುತ್ತಿರುವ ಹುತ್ತದಲ್ಲಿ ಹುತ್ತ ನಾಟಕ ಪ್ರದರ್ಶನವು ಮಾ.1 ಮತ್ತು 2ಕ್ಕೆ ನಡೆಯಲಿದೆ.

ಹಿರಿಯ ರಂಗಕರ್ಮಿ ಟಿ.ಪಿ.ಕೈಲಾಸಂ ಅವರ ರಚನೆಯ ಹುತ್ತದಲ್ಲಿ ಹುತ್ತ ನಾಟಕವನ್ನು ಈವರೆಗೆ 57 ಪ್ರದರ್ಶನಗಳನ್ನು ನೀಡಿರುವ ಅಂತರಂಗ ತಂಡದ 58, 59ನೇ ಪ್ರದರ್ಶನವು ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಮಾ.1 ಶನಿವಾರದಂದು ಸಂಜೆ 4.15 ಮತ್ತು 7.15 ಕ್ಕೆ ನಡೆಯಲಿದೆ. 60ನೇ ಪ್ರದರ್ಶನವು ಮಾ.2 ಭಾನುವಾರದಂದು ಸಂಜೆ 7.15ಕ್ಕೆ ಜೆ.ಪಿ.ನಗರದ ವ್ಯೋಮ ರಂಗಮಂದಿರದಲ್ಲಿ ನಡೆಯಲಿದೆ. ಬುಕ್ ಮೈ ಶೋನಲ್ಲಿ ಟಿಕೆಟ್‌ಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ಅಂಕಲ್ ಶ್ಯಾಮ್ ದೂ: 9880914509 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net