

Jaundice: ಇತ್ತೀಚೆಗಷ್ಟೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ನಟ ಸಂತೋಷ್ ಬಾಲರಾಜ್ ಕೊನೆಯುಸಿರೆಳೆದರು. ಜಾಂಡೀಸ್ ಕಾಯಿಲೆಗೆ ತುತ್ತಾಗಿದ್ದ ಸಂತೋಷ್, ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಆದರೆ, ಜಾಂಡೀಸ್ ವಿಪರೀತಗೊಂಡು ದೇಹವನ್ನು ಹರಡಿದ ಬೆನ್ನಲ್ಲೇ ಅವರು ಕೋಮಾಗೆ ಜಾರಿದ್ದರು. ಇದು ಅವರ ಪ್ರಾಣವನ್ನೇ ಕಸಿದಿದ್ದು ನಿಜಕ್ಕೂ ದುರಂತ. ಜಾಂಡೀಸ್ ಅಪಾಯಕಾರಿಯಲ್ಲ ಎಂಬ ಭಾವನೆ ಕೆಲವರಲ್ಲಿದೆ. ಹೀಗಾಗಿ ಆರಂಭದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಹಾಗಾದ್ರೆ, ಜಾಂಡೀಸ್ ಅಪಾಯಕಾರಿಯಲ್ಲವೇ? ಈ ಕಾಯಿಲೆ ಬಂದರೆ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ? ಗುರುತಿಸುವುದು ಹೇಗೆ? ಈ ರೋಗ ಬರಲು ಕಾರಣಗಳೇನು? ಎಂಬುದರ ಉಪಯುಕ್ತ ಮಾಹಿತಿ ಇಲ್ಲಿದೆ ತಿಳಿಯಿರಿ.
ಜಾಂಡೀಸ್ (ಕಾಮಾಲೆ) ಎಂಬುದು ಒಂದು ಭಯಾನಕ ಕಾಯಿಲೆಯೇ. ಇದು ರಕ್ತದಲ್ಲಿ ಬಿಲಿರುಬಿನ್ (bilirubin) ಮಟ್ಟ ಹೆಚ್ಚಾಗುವುದರಿಂದ ಕಾಡುತ್ತದೆ. ಚರ್ಮ, ಕಣ್ಣಿನ ಸ್ಕ್ಲೆರಾ (ಕಣ್ಣಿನ ಬಿಳಿ ಭಾಗ) ಮತ್ತು ಒಸಡುಗಳಲ್ಲಿ ಹಳದಿ ಬಣ್ಣವನ್ನು ತೋರಿಸುತ್ತದೆ. ಜಾಂಡೀಸ್ಗೆ ಇಂತಹದ್ದೇ ಕಾರಣ ಎಂದೇನಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ಬಿಲಿರುಬಿನ್ ಎಂಬ ರಾಸಾಯನಿಕ ಬಣ್ಣದಲ್ಲಿ ಹಳದಿಯಾಗಿದ್ದು, ರಕ್ತದ ಹರಿವಿನಲ್ಲಿ ಹೆಚ್ಚಾದರೆ ಸೋಂಕು ವೇಗವಾಗಿ ಹರಡುತ್ತದೆ. ಇದು ಕಣ್ಣು, ಚರ್ಮ ಮತ್ತು ಬಾಯಿಯ ಒಳ ಭಾಗವನ್ನು ಹಳದಿ ಬಣ್ಣಕ್ಕೆ ತಿರುಗಿಸುತ್ತದೆ.
ಮೇಲ್ಕಂಡ ಯಾವುದೇ ಸೋಂಕುಗಳು ಅಥವಾ ರೋಗ-ಲಕ್ಷಣಗಳು ಕಾಣಿಸಿಕೊಂಡರೆ, ಹೆಚ್ಚು ಸಮಯ ವ್ಯರ್ಥ ಮಾಡದೆ ವೈದ್ಯರ ಬಳಿ ತೋರಿಸಿಕೊಳ್ಳಿ. ಇದರಿಂದ ಉಲ್ಬಣಿಸುವ ಸಮಸ್ಯೆಯನ್ನು ಶೀಘ್ರವೇ ಅಪಾಯ ಹಂತದಿಂದ ಬಚಾವ್ ಮಾಡಬಹುದು. ಇದಕ್ಕೆ ಆರಂಭಿಕ ಹಂತದಲ್ಲಿ ಅವಕಾಶಗಳು ಹೆಚ್ಚು. ವೈದ್ಯರು, ಜಾಂಡೀಸ್ಗೆ ಸೂಕ್ತ ಕಾರಣವನ್ನು ಗುರುತಿಸಿ ಚಿಕಿತ್ಸೆ ಕೊಡಲಾಗುತ್ತದೆ.
ಹೊರಗಿನ ಆಹಾರಗಳು ಅಂದರೆ ರಸ್ತೆಬದಿಯಲ್ಲಿ ಸಿಗುವ ಚಾಟ್ಸ್ಗಳನ್ನು ಆದಷ್ಟು ಕಡಿತಗೊಳಿಸಿ. ಶುಚಿಯಾಗಿ ನೀಡುವಲ್ಲಿ ಸೇವಿಸುವುದು ಉತ್ತಮ. ನೀರಿನಿಂದ ತಯಾರಿಸಲ್ಪಟ್ಟ ಆಹಾರಗಳ ಬಗ್ಗೆ ಹೆಚ್ಚು ಜಾಗೃತೆ. ತರಕಾರಿ, ಹಣ್ಣುಗಳನ್ನು ಸರಿಯಾಗಿ ತೊಳೆದು, ಆ ನಂತರ ಬಳಕೆ ಮಾಡುವುದು ಉತ್ತಮ. ಮುಖ್ಯವಾಗಿ ಇದು ಲಿವರ್ಗೆ ಸಂಬಂಧಿಸಿದ ಕಾಯಿಲೆ ಆದ ಕಾರಣ, ಮದ್ಯಪಾನ ತ್ಯಜಿಸುವುದು ಒಳಿತು ಮತ್ತು ವೈದ್ಯರ ಸಲಹೆ ಪಡೆಯುವುದು ಉತ್ತಮ,(ಏಜೆನ್ಸೀಸ್).