ವೈಯಕ್ತಿಕ ಕಾರಣಗಳಿಂದ ತವರಿಗೆ ವಾಪಸ್ಸಾದ ವೇಗಿ ಬುಮ್ರಾ; ನೇಪಾಳ ವಿರುದ್ಧದ ಪಂದ್ಯದಿಂದ ಔಟ್​

Jasprit Bumrah
Published on

ಮುಂಬೈ: ವೈಯಕ್ತಿಕ ಕಾರಣಗಳಿಂದಾಗಿ ಟೀಂ ಇಂಡಿಯಾದ ಸ್ಟಾರ್​ ವೇಗಿ ತಂಡವನ್ನು ತೊರೆದು ತವರಿಗೆ ವಾಪಸ್​ ಆಗಿದ್ದಾರೆ. ಸೋಮವಾರ ನಡೆಯುವ ಭಾರತ ಹಾಗೂ ನೇಪಾಳ ನಡುವಿನ ಏಷ್ಯಾಕಪ್​ ಪಂದ್ಯದಿಂದ ಹೊರನಡೆದಿದ್ದಾರೆ.

ನೇಪಾಳ ವಿರುದ್ಧದ ಪಂದ್ಯದಿಂದ ಜಸ್ಪ್ರೀತ್​ ಬುಮ್ರಾ ಹೊರ ನಡೆದಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬುಮ್ರಾ ಕೊಲಂಬೋದಿಂದ ಮುಂಬೈಗೆ ವಾಪಸ್​ ಆಗಿದ್ದಾರೆ. ಬುಮ್ರಾ ಬದಲಿಗೆ ಶಮಿ ಆಡುವ ಸಾಧ್ಯತೆಗಳು ದಟ್ಟವಾಗಿದೆ.

ಸೂಪರ್​-4 ಸ್ಟೇಜ್​ ಪ್ರಾರಂಭವಾಗುವುದಕ್ಕೂ ಮುನ್ನ ಬುಮ್ರಾ ತಂಡವನ್ನು ಕೂಡಿಕೊಳ್ಳಲಿದ್ಧಾರೆ ಎಂದು ವರದಿಯಾಗಿದೆ. ಸಪ್ಟೆಂಬರ್ 6 ರಿಂದ ಪ್ರಾರಂಭವಾಗುವ ಸೂಪರ್‌-4 ಸುತ್ತಿಗೆ ಅರ್ಹತೆ ಪಡೆಯಲು ಭಾರತವು ನೇಪಾಳ ವಿರುದ್ಧ ಗೆಲ್ಲಬೇಕಿದೆ. ಇನ್ನು, ಪಾಕ್‌ ವಿರುದ್ಧ ಬುಮ್ರಾ 16 ರನ್‌ ಗಳಿಸುವ ಮೂಲಕ ಮಿಂಚಿದ್ದರು. ಆದರೆ, ಮಳೆ ಕಾರಣ ಪಂದ್ಯ ರದ್ದಾಯಿತು.

ಕಳೆದ ಕೆಲ ದಿನಗಳಿಂದ ಕೊಲಂಬೋದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಸ್ಥಳ ಬದಲಾಯಿಸುವ ಸಾಧ್ಯತೆ ದಟ್ಟವಾಗಿದೆ. ಡಂಬುಲ್ಲಾ ಅಥವಾ ಪಲ್ಲೀಕಲೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net