ವಿಶ್ರಾಂತಿಗೆ ಹೋದ ಬುಮ್ರಾ, ಕೆಲಸಕ್ಕೆ ಹಾಜರಾದ ಪತ್ನಿ ಸಂಜನಾ!

sanjana bumra web
Published on

ಬೆಂಗಳೂರು: ಸತತ ಕ್ರಿಕೆಟ್​ನಿಂದ ಬಳಲಿದ ಟೀಮ್​ ಇಂಡಿಯಾದ ವೇಗಿ ಜಸ್​ಪ್ರೀತ್​ ಬುಮ್ರಾ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ನಡುವೆ 4ನೇ ಪಂದ್ಯದಿಂದ ಬಿಡುವು ಪಡೆದು ಮನೆಗೆ ಮರಳಿದ್ದಾರೆ. ಇದೇ ಸಮಯದಲ್ಲಿ ಅವರ ಪತ್ನಿ ಹಾಗೂ ಜನಪ್ರಿಯ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್​ ಬೆಂಗಳೂರಿನಲ್ಲಿ ವುಮೆನ್ಸ್​ ಪ್ರೀಮಿಯರ್​ ಲೀಗ್​ ಪಂದ್ಯಗಳ ವೇಳೆ ಪ್ರಸಾರವಾಹಿನಿಯ ಕೆಲಸಕ್ಕೆ ಹಾಜರಾಗಿದ್ದಾರೆ.

2021ರಲ್ಲಿ ಬುಮ್ರಾರನ್ನು ವಿವಾಹವಾಗಿದ್ದ ಸಂಜನಾ, 2023ರ ಸೆಪ್ಟೆಂಬರ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಂತರ ತಾಯ್ತನದ ಬಿಡುವಿನಲ್ಲಿದ್ದ ಸಂಜನಾ, ಈಗ ಡಬ್ಲ್ಯುಪಿಎಲ್​ ಮೂಲಕ ಕೆಲಸಕ್ಕೆ ಮರಳಿರುವುದನ್ನು ಪತಿ ಜಸ್​ಪ್ರೀತ್​ ಬುಮ್ರಾ ಇನ್​ಸ್ಟಾಗ್ರಾಂ ಪೋಸ್ಟ್​ ಮೂಲಕ ಶ್ಲಾಘಿಸಿದ್ದಾರೆ.

"ತುಂಬ ಚೆನ್ನಾಗಿದೆ ಸಂಜನಾ. ವಿಶ್ವದ ಅತ್ಯುತ್ತಮವಾದವಳು ಕೆಲಸಕ್ಕೆ ಮರಳಿದ್ದಾಳೆ' ಎಂದು ಬುಮ್ರಾ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಮುನ್ನ ದಪ್ಪಗಾಗಿರುವ ಬಗ್ಗೆ ಅಭಿಮಾನಿಯೊಬ್ಬ ಇನ್​ಸ್ಟಾಗ್ರಾಂ ಪೋಸ್ಟ್​ಗೆ ಕಾಮೆಂಟ್​ ಹಾಕಿದಾಗ ಸಂಜನಾ ಆತನಿಗೆ ಚಾಟಿ ಬೀಸಿ ಸುದ್ದಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net