ಮಲ್ಲಿಗೆ ಗಿಡ ರಕ್ಷಣೆ ಸವಾಲು : ಸರಳ ವೈಜ್ಞಾನಿಕ ಕೃಷಿ ಪದ್ಧತಿಯಿಂದ ಅನುಕೂಲ; ನೀರು ನಿಲ್ಲದಂತೆ ಆರೈಕೆ ಅಗತ್ಯ

blank

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕರಾವಳಿ ಭಾಗದ ಬಡ ಹಾಗೂ ಮಧ್ಯಮ ವರ್ಗದ ಬಹುತೇಕ ಕುಟುಂಬಗಳು ಮಲ್ಲಿಗೆ ಕೃಷಿಯಿಂದಲೇ ಜೀವನ ನಡೆಸುತ್ತಿದ್ದು, ಕಾರ್ಕಳ ಹಾಗೂ ಕಾಪು ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಮಲ್ಲಿಗೆ ಕೃಷಿಯನ್ನೇ ಅವಲಂಬಿತ ಸಾಕಷ್ಟು ಕುಟುಂಬಗಳಿವೆ. ಅದರಲ್ಲೂ ಉಡುಪಿಯ ಶಂಕರಪುರ ಮಲ್ಲಿಗೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ವರ್ಷಪೂರ್ತಿ ಜೀವನಕ್ಕೆ ಆಧಾರವಾಗಿರುವ ಮಲ್ಲಿಗೆ ಕೃಷಿಯನ್ನು ಮಳೆಗಾಲದಲ್ಲಿ ನಿರಂತರವಾಗಿ ಸುರಿಯುವ ಮಳೆ ಸಂದರ್ಭ ಉಳಿಸುವುದೇ ಕೃಷಿಕರಿಗೆ ದೊಡ್ಡ ಸವಾಲಾಗಿದೆ.

ಗಾಳಿ ಮಳೆಗೆ ಹಾನಿ: ಜಿಲ್ಲಾದ್ಯಂತ ಸುರಿಯುವ ಗಾಳಿ ಮಳೆಗೆ ಬಹುತೇಕ ಮಲ್ಲಿಗೆ ಕೃಷಿಗೆ ಹಾನಿಯಾಗುವುದು ಮಾಮೂಲು. ಇನ್ನೂ ಹಲವು ಕಡೆಗಳಲ್ಲಿ ಹಳೇ ಪದ್ಧತಿಯನ್ನೇ ಮುಂದುವರಿಸುತ್ತಿರುವುದರಿಂದ ಗಿಡಗಳು ಹಾಳಾಗುತ್ತವೆ. ಮಳೆಗಾಲದಲ್ಲಿ ಬಿಸಿಲು ಕಡಿಮೆಯಾಗಿ ನೀರು ಹೆಚ್ಚಾಗಿರುವ ಪರಿಣಾಮ ವಿವಿಧ ಕೀಟ, ರೋಗಾಣುಗಳ ಪ್ರಭಾವದಿಂದ ಗಿಡಗಳ ಬೇರುಗಳು ಕೊಳೆತು ಎಲೆ ಉದುರುವುದು, ಗಿಡದ ಗಂಟಿಗಳು ಸಾಯುವುದಲ್ಲದೆ ಪೂರ್ತಿ ಗಿಡವೇ ನಾಶವಾಗುವ ಸ್ಥಿತಿಯೂ ನಿರ್ಮಾಣವಾಗುತ್ತದೆ.

ಹಳೆಯ ಅವೈಜ್ಞಾನಿಕ ಕೃಷಿ ಪದ್ಧತಿಯನ್ನೇ ಮಾಡುತ್ತಿರುವ ಅನೇಕ ಕೃಷಿಕರು ಗಿಡಗಳಿಗೆ ಮಣ್ಣನ್ನು ಹಾಕಿ ಮುಚ್ಚುವುದರಿಂದ, ನೆಲವನ್ನು ಅಗೆಯುವುದರಿಂದ ಬೇರುಗಳಿಗೆ ಗಾಳಿ ಸಿಗದೆ ಕೊಳೆಯುತ್ತವೆ. ಮಳೆಗಾಲದಲ್ಲಿ ಗೊಬ್ಬರ, ನೆಲಗಡಲೆ ಹಿಂಡಿ, ಕೀಟನಾಶಕಗಳ ಬಳಕೆ ಮಾಡುವುದರಿಂದ ಗಿಡಗಳು ಸಂಪೂರ್ಣ ಹಾಳಾಗುತ್ತವೆ. ಎರೆಹುಳುಗಳು ನಾಶವಾಗುತ್ತವೆ. ಮಲ್ಲಿಗೆ ತೋಟದಲ್ಲಿ ಸಾಧ್ಯವಾದಷ್ಟು ಇಳಿಜಾರು ನಿರ್ಮಿಸಿ ಎಲ್ಲಿಯೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು ಅಗತ್ಯ. ಹುಲ್ಲು ಬೆಳೆಯದಂತೆ ನೆಲಕ್ಕೆ ಪ್ಲಾಸ್ಟಿಕ್ ಹಾಸು (ಮಲ್ಚಿಂಗ್) ಅಳವಡಿಸುವುದರಿಂದ ನೀರು ಸಹ ಹರಿದು ಹೋಗಲು ಅನುಕೂಲವಾಗುತ್ತದೆ. ಹೀಗೆ ವೈಜ್ಞಾನಿಕ ವ್ಯವಸ್ಥೆಗಳನ್ನು ಅಳವಡಿಸುವ ಮೂಲಕ ಮಲ್ಲಿಗೆ ಗಿಡಗಳನ್ನು ಆರೈಕೆ ಮಾಡಿಕೊಳ್ಳಬಹುದು.

ಪ್ಲಾಸ್ಟಿಕ್ ಚೀಲಗಳಲ್ಲಿ ಕೃಷಿ

ನರ್ಸರಿಗಳು ಪ್ರಾರಂಭ ಅದಂದಿನಿಂದಲೇ ಕುಂಡಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಮಲ್ಲಿಗೆ ಗಿಡಗಳನ್ನು ಬೆಳೆಸುವ ಕ್ರಮ ಪ್ರಾರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಮನೆಯಂಗಳದಲ್ಲಿ, ಕಾಂಕ್ರೀಟ್ ಮಾಡಿನ ಮೇಲೆಯೂ ಕುಂಡಗಳಲ್ಲಿ ಮಲ್ಲಿಗೆ ಗಿಡಗಳನ್ನು ಬೆಳೆಸಿ ಅಧಿಕ ಪ್ರಮಾಣದಲ್ಲಿ ಇಳುವರಿ ಪಡೆದ ನಿರ್ದಶನಗಳಿವೆ. ಪ್ಲಾಸ್ಟಿಕ್ ಚೀಲಗಳ ಮಲ್ಲಿಗೆ ಕೃಷಿಯಲ್ಲಿ ಅನುಕೂಲತೆಗಳೇ ಜಾಸ್ತಿ. ಲಕೋಟೆಗಳು ಹಗುರ ಮತ್ತು ಅಗ್ಗ. ಇದರಿಂದ ವರ್ಷದ ಎಲ್ಲ ಕಾಲದಲ್ಲೂ ಇಳುವರಿ ಪಡೆಯಬಹುದು. ಕಳೆಗಳ ಸಮಸ್ಯೆ ಇಲ್ಲ. ಸ್ಥಳ ಬದಲಾವಣೆ ಸಾಧ್ಯ. ಗಿಡಗಳಿಗೆ ಹಾಕಿದ ಗೊಬ್ಬರ ಪೂರ್ತಿಯಾಗಿ ಗಿಡಗಳಿಗೆ ಸಿಗುತ್ತದೆ. ರೋಗ, ಕೀಟಗಳು ಕಡಿಮೆ. ಗಿಡಗಳು ಎತ್ತರದಲ್ಲಿ ಇರುವುದರಿಂದ ಹೂವು ಕೊಯ್ಯಲು ಕೂಡ ಅನುಕೂಲವಾಗುತ್ತದೆ. ಮರಗಳ ನೆರಳು ಬೀಳುವ ಜಾಗದಲ್ಲಿದ್ದರೆ ಸ್ಥಳ ಬದಲವಣೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು.

ಗಿಡಗಳ ಆರೈಕೆ ಹೇಗೆ?

ಮಳೆಗಾಲ ಸಮೀಪಿಸುತ್ತಿದ್ದಂತೆ ಜೂನ್ ಜುಲೈ ಆರಂಭದಲ್ಲಿ ಗಿಡಗಳ ಬುಡಕ್ಕೆ ಸುಣ್ಣದ ಜತೆಗೆ ಹುಡಿಗೊಬ್ಬರ, ಕಹಿಬೇವು ಹಿಂಡಿ ನಿರ್ದಿಷ್ಟ ಪ್ರಮಾಣದಲ್ಲಿ ಹಾಕುವುದು ಉತ್ತಮ. ನವೆಂಬರ್ ತಿಂಗಳಲ್ಲಿ ಗಿಡಗಳ ಪ್ರೋನಿಂಗ್, ನಂತರ ಗಿಡಗಳ ಬುಡಕ್ಕೆ ಒತ್ತಿಕೊಳ್ಳದಂತೆ ಸ್ವಲ್ಪ ಜಾಗ ಬಿಟ್ಟು, ದೂರದಿಂದಲೇ ಗೊಬ್ಬರ ಹಾಕುವುದರಿಂದ ಗಿಡಗಳು ಆರೋಗ್ಯಪೂರ್ಣಾಗಿ ಬೆಳೆಯುತ್ತವೆ.

ಮಳೆಗಾಲ ಸಮೀಪಿಸುತ್ತಿದ್ದಂತೆ ಆರಂಭದಲ್ಲಿ ಗಿಡಗಳ ಬುಡಕ್ಕೆ ಸುಣ್ಣದ ಜತೆಗೆ ಹುಡಿಗೊಬ್ಬರ, ಕಹಿಬೇವು ಹಿಂಡಿ ನಿರ್ದಿಷ್ಟ ಪ್ರಮಾಣದಲ್ಲಿ ಹಾಕುವುದು ಉತ್ತಮ. ದೂರದಿಂದಲೇ ಗೊಬ್ಬರ ಹಾಕುವುದರಿಂದ ಗಿಡಗಳು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಗಿಡಗಳಿಗೆ ಪೈಪ್ ಮೂಲಕ ನೇರವಾಗಿ ನೀರು ಬಿಡುವುದು ಒಳ್ಳೆಯದಲ್ಲ.
-ನಿತ್ಯಾನಂದ ನಾಯಕ್ ಪಾಲಮೆ, ಪ್ರಗತಿಪರ ಮಲ್ಲಿಗೆ ಕೃಷಿಕ

ಮಳೆಗಾಲದಲ್ಲಿ ಮಲ್ಲಿಗೆ ಗಿಡಗಳು ಹಾಳಾಗಲು ನಾವು ಮಾಡುವ ತಪ್ಪುಗಳೇ ಕಾರಣ. ಗಿಡಕ್ಕೆ ಕಾಂಪೋಸ್ಟ್ ಆಗದ ಗೊಬ್ಬರ ಹಾಕುವುದು, ಕ್ರಿಮಿನಾಶಕಗಳ ಬಳಕೆ, ಮಣ್ಣು ಅಗೆಯುವುದು, ದ್ರವರೂಪದ ಗೊಬ್ಬರ ನೀಡುವುದೇ ಆಗಿದೆ. ಇದರೊಂದಿಗೆ ಪ್ರಾಕೃತಿಕ ಕಾರಣವೂ ಇದೆ. ಅತಿಯಾದ ಮಳೆ, ಹಲವು ದಿನಗಳ ಕಾಲ ನಿರಂತರ ಮಳೆ, ಸೂರ್ಯನ ಬಿಸಿಲು ಇಲ್ಲದಿರುವುದು, ರೋಗ ಮತ್ತು ಕೀಟಗಳ ಹರಡುವಿಕೆ ಪ್ರಮುಖ ಕಾರಣಗಳಾಗಿವೆ. ಇದಕ್ಕೆ ಸಮಗ್ರವಾದ ಸರಿಯಾದ ನಿರ್ವಹಣೆ ಮಾಡುವುದೇ ಸೂಕ್ತ ಪರಿಹಾರವಾಗಿದೆ.
-ಬಂಟಕಲ್ಲು ರಾಮಕೃಷ್ಣ ಶರ್ಮ, ಜಿಲ್ಲಾಧ್ಯಕ್ಷ, ಉಡುಪಿ ಜಿಲ್ಲಾ ಕೃಷಿಕ ಸಂಘ (ಮಲ್ಲಿಗೆ ಕೃಷಿ ವಿಜ್ಞಾನಿ)

Share This Article

ನಿಮ್ಮ ನೆಚ್ಚಿನ ಹಣ್ಣುನ್ನು ಆಯ್ಕೆ ಮಾಡಿ.. ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!.. Personality Test

Personality Test : ಒಬ್ಬ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ವ್ಯಕ್ತಿಯ ವ್ಯಕ್ತಿತ್ವವನ್ನು…

ಚಾಣಕ್ಯ ನೀತಿಯಲ್ಲಿನ ಈ 4 ವಿಷಯಗಳನ್ನು ನೆನಪಿನಲ್ಲಿಡಿ; ಸಂಬಂಧದಲ್ಲಿ ಮೋಸ ಹೋದ ನೋವನ್ನು ನೀವು ಅನುಭವಿಸಬೇಕಿಲ್ಲ.. | Chanakya Niti

ಕಾಲಾನಂತರದಲ್ಲಿ ಜನರ ಬದಲಾಗುತ್ತಿರುವ ಆಲೋಚನೆಗಳಲ್ಲಿ ನಿಜವಾದ ಪ್ರೀತಿ ಕಳೆದುಹೋಗುತ್ತಿದೆ. ಈ ಜಗತ್ತಿನಲ್ಲಿ ನಿಮ್ಮನ್ನು ಉತ್ಸಾಹದಿಂದ ಪ್ರೀತಿಸುವ…

ಹರಳೆಣ್ಣೆ ನೀರಿನಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ| Health Tips

ಹರಳೆಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಬಳಸಲಾಗುತ್ತದೆ ಎಂಬುದು ತಿಳಿದಿದೆಯೇ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮ…