ಅಮಿತಾಭ್​ ಮನೆ ಹತ್ತಿರ ಮನೆ ಖರೀದಿಸಿದ ಜಾಹ್ನವಿ ... ಬೆಲೆ ಎಷ್ಟು ಗೊತ್ತಾ?

Jahnavi Kapoor - Final
Published on

ಮುಂಬೈ: ಶ್ರೀದೇವಿ ಮತ್ತು ಬೋನಿ ಕಪೂರ್​ ಅವರ ಮುದ್ದಿನ ಮಗಳು ಜಾಹ್ನವಿ ಕಪೂರ್​, ಚಿತ್ರರಂಗಕ್ಕೆ ಬಂದು ಮೂರು ವರ್ಷಗಳಾಗಿವೆ. ಈ ಮೂರು ವರ್ಷಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಜತೆಗೆ ಇನ್ನೆರೆಡು ಸಿನಿಮಾಗಳನ್ನು ಹೊಸದಾಗಿ ಒಪ್ಪಿಕೊಂಡಿದ್ದಾರೆ.

ಈ ಮಧ್ಯೆ, ಜಾಹ್ನವಿ, ಮುಂಬೈನಲ್ಲಿ ಬಹುಕೋಟಿ ವೆಚ್ಚದ ಮನೆಯೊಂದನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಅಮಿತಾಭ್​ ಬಚ್ಚನ್​, ಅಜಯ್​ ದೇವಗನ್​, ಏಕ್ತಾ ಕಪೂರ್​, ಅನಿಲ್​ ಕಪೂರ್​ ಮುಂತಾದವರ ನೆರೆಹೊರೆಯವರಾಗಲಿದ್ದಾರೆ.

ಹೌದು, ಮುಂಬೈನ ಜುಹು ವಿಲೆಪಾರ್ಲೆ ಸ್ಕೀಮ್​ನಲ್ಲಿ ಜಾಹ್ನವಿ ಇತ್ತೀಚೆಗೆ ಒಂದು ಪ್ರಾಪರ್ಟಿ ಕೊಂಡುಕೊಂಡಿರುವ ಸುದ್ದಿಯೊಂದು ಬಂದಿದೆ.

4,144 ಚದರಡಿ ಇರುವ ಈ ಫ್ಲಾಟ್​ಗಳು 14, 15 ಮತ್ತು 16ನೇ ಮಹಡಿಗಳಲ್ಲಿವೆಯಂತೆ. ಈ ಮನೆಗೆ ಜಾಹ್ನವಿ ಖರ್ಚು ಮಾಡಿದ ಮೊತ್ತವೆಷ್ಟು ಗೊತ್ತಾ? 39 ಕೋಟಿ ರೂ ಎಂದು ಹೇಳಲಾಗಿದೆ. ಡಿಸೆಂಬರ್​ 10ರಂದು ಈ ಮನೆಯ ರಿಜಿಸ್ಟ್ರೇಶನ್​ ಸಹ ಸದ್ದಿಲ್ಲದೆ ಆಗಿದೆ ಎಂದು ಹೇಳಲಾಗುತ್ತಿದೆ.

ಜಾಹ್ನವಿ ಕಪೂರ್​ ಸದ್ಯಕ್ಕೆ ಲೋಖಂಡ್​ವಾಲಾದ ತಮ್ಮ ಕುಟುಂಬದ ಮನೆಯಲ್ಲಿ ವಾಸವಿದ್ದಾರಂತೆ. ಮುಂದಿನ ದಿನಗಳಲ್ಲಿ ಅವರು ಜುಹುನಲ್ಲಿ ಖರೀದಿಸಿರುವ ಹೊಸ ಮನೆಗೆ ಶಿಫ್ಟ್​ ಆಗಲಿದ್ದಾರೆ ಎಂಬ ಸುದ್ದಿ ಇದೆ.

ಸದ್ಯ, 'ರೂಹಿ ಅಫ್ಜಾನಾ' ಮತ್ತು 'ದೋಸ್ತಾನಾ 2' ಚಿತ್ರಗಳಲ್ಲಿ ನಟಿಸುತ್ತಿರುವ ಜಾಹ್ನವಿ, ತಮಿಳೀನ 'ಕೊಲಮಾವು ಕೋಕಿಲ' ಚಿತ್ರದ ಹಿಂದಿ ರೀಮೇಕ್​ನಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ಆ ಚಿತ್ರದಲ್ಲಿ ನಟಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net