More

    ಜೈಲರ್​​ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

    ಚೆನ್ನೈ: ಸೂಪರ್​ಸ್ಟಾರ್​ ರಜನಿಕಾಂತ್​ ಅಭಿನಯದ ಜೈಲರ್​ ಚಿತ್ರವು ಬಿಡುಗಡೆಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಸಿನಿರಸಿಕರ ಗಮನ ಸೆಳೆಯುತ್ತಿದ್ದು, ಈವರೆಗೂ ಒಟ್ಟು 500 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ.

    ಈಗಾಗಲೇ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿರುವ ಜೈಲರ್​ ಚಿತ್ರ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರವು ಸೆಪ್ಟೆಂಬರ್​ 7ರಂದು ಅಮೆಜಾನ್​ ಪ್ರೈಮ್​ನಲ್ಲಿ ವೀಕ್ಷಿಸಬಹುದಾಗಿದೆ. ಆಗಸ್ಟ್​ 10ರಂದು ಚಿತ್ರ ವಿಶ್ವದಾದ್ಯಂತ ತೆರೆಕಂಡಿತ್ತು.

    ಇದನ್ನೂ ಓದಿ: ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆಗೆ ನಾನು ಬದ್ದ: ಉದಯನಿಧಿ ಸ್ಟಾಲಿನ್

    ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಜೈಲರ್ ನನ್ನ ವೃತ್ತಿ ಬದುಕಿನಲ್ಲಿ ಅತ್ಯುತ್ತಮ ಚಿತ್ರವಾಗಿದೆ. ಸೂಪರ್​​ಸ್ಟಾರ್​ ರಜನಿಕಾಂತ್​ ಅವರು ಈ ಚಿತ್ರವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಭಾರತ ಚಿತ್ರರಂಗದ ಸೂಪರ್​ಸ್ಟಾರ್​​ಗಳಾದ ಶಿವರಾಜ್​ಕುಮಾರ್​, ಮೋಹನ್​ ಲಾಲ್​ ಹಾಗೂ ಜಾಕಿ ಶ್ರಾಫ್​ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇದೀಗ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದು, ವಿಶ್ವದಾದ್ಯಂತ ಪ್ರೇಕ್ಷಕರು ತಮ್ಮ ಮನೆಯಿಂದಲ್ಲೇ ಸಿನಿಮಾವನ್ನು ವೀಕ್ಷಿಸಬಹುದಾಗಿದೆ ಎಂದು ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ತಿಳಿಸಿದ್ದಾರೆ.

    ಚಿತ್ರಮಂದಿರಗಳಲ್ಲಿ ಜೈಲರ್ ಚಿತ್ರವು ಈಗಾಗಲೇ ಅಗಾಧ ಯಶಸ್ಸನ್ನು ಪಡೆದಿದ್ದು, ನೆಲ್ಸನ್​ ಹಾಗೂ ಅವರ ತಂಡದ ಕಠಿಣ ಪರಿಶ್ರಮದಿಂದ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಚಿತ್ರ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಉತ್ಸುಕರಾಗಿದ್ದೇವೆ ಎಂದು ಸನ್​ ಪಿಕ್ಚರ್ಸ್​ ಸಿಇಒ ಸೆಂಬಿಯನ್​ ಶಿವಕುಮಾರ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts