ಜೈಗಣೇಶ್ ಸಂಘಕ್ಕೆ 95 ಲಕ್ಷ ರೂ. ಲಾಭ

jaiganesh
ಸಾಬ್ರಕಟ್ಟೆ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಮಹಾಸಭೆಯಲ್ಲಿ ಸ್ಥಳೀಯ ಮೆಸ್ಕಾಂ ಸಾಬ್ರಕಟ್ಟೆ ಘಟಕದ ಸೇವೆ ಪರಿಗಣಿಸಿ ಘಟಕದ ಪ್ರಮುಖ ವೈಭವ ಶೆಟ್ಟಿ, ಎಲ್ಲಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಸಾಬ್ರಕಟ್ಟೆ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ 18ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಅಶೋಕ್ ಪ್ರಭು ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು.
ಆಡಳಿತ ಮಂಡಳಿ ಉಪಾಧ್ಯಕ್ಷ ಎಚ್.ನಾರಾಯಣ ಶೆಣೈ ಗಾವಳಿ, ನಿರ್ದೇಶಕರಾದ ಶಿರಿಯಾರ ಪ್ರಭಾಕರ ನಾಯಕ್, ಮಾಧವ ಹೆಗ್ಡೆ ಮಧುವನ, ಎಂ.ರವೀಂದ್ರನಾಥ ಕಿಣಿ ಸಾಬ್ರಕಟ್ಟೆ, ರಾಘವೇಂದ್ರ ಹೆಗ್ಡೆ ಸಾಬ್ರಕಟ್ಟೆ, ಎಸ್.ವೆಂಕಟೇಶ ಪೈ ಸಾಸ್ತಾನ, ಪಲ್ಲವಿ ವೈ.ನಾಯಕ್, ಯು.ಪ್ರಸಾದ ಭಟ್, ವೈ.ರಾಘವೇಂದ್ರ ಪ್ರಭು, ಜಗದೀಶ ಹೆಗ್ಡೆ ಸಾಬ್ರಕಟ್ಟೆ, ಸುನೀತಾ ಹೆಗ್ಡೆ ಎತ್ತಿನಟ್ಟಿ, ಸಿಬ್ಬಂದಿ ಉಪಸ್ಥಿತರಿದ್ದರು.

ಸಂಸ್ಥೆ ಸ್ಥಾಪಕ ಅಧ್ಯಕ್ಷ ಶಿರಿಯಾರ ಪ್ರಭಾಕರ ನಾಯಕ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಶ್ಯಾನುಭಾಗ್ ವರದಿ ವಾಚಿಸಿದರು. ಮಧುವನ ಗಣೇಶ್ ನಾಯಕ್ ನಿರೂಪಿಸಿದರು. ಮಧುವನ ಮಾಧವ ಹೆಗ್ಡೆ ವರದಿ ಮಂಡಿಸಿದರು. ರವೀಂದ್ರನಾಥ್ ಕಿಣಿ ವಂದಿಸಿದರು.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

2023-24ನೇ ಸಾಲಿನಲ್ಲಿ 95.21 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಶೇ.13 ಡಿವಿಡೆಂಡ್ ನೀಡಲು ನಿರ್ಣಯಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಗಳಿಸಿದ 20 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಅನಾರೋಗ್ಯ ಪೀಡಿತ 8 ಸದಸ್ಯರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ಡಾಕ್ಟರೇಟ್ ಪದವಿ ಪಡೆದ ಸಂಸ್ಥೆ ಸದಸ್ಯ ಗಿರೀಶ್ ಶ್ಯಾನುಭಾಗ್, ಸಂದೇಶ್ ಹೆಗ್ಡೆ, ಬಿ.ಕಾಂ.ನಲ್ಲಿ ಚಿನ್ನದ ಪದಕ ಗಳಿಸಿದ ನಂದಿತಾ ಹೆಗ್ಡೆ, ಸಂಸ್ಕೃತದಲ್ಲಿ ಚಿನ್ನದ ಪದಕ ಗಳಿಸಿದ ಅರವಿಂದ ಭಟ್ ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಮೆಸ್ಕಾಂ ಸಾಬ್ರಕಟ್ಟೆ ಘಟಕದ ಸೇವೆ ಪರಿಗಣಿಸಿ ಘಟಕದ ಪ್ರಮುಖ ವೈಭವ ಶೆಟ್ಟಿ, ಎಲ್ಲಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಮಧುವನ ಗಣೇಶ್ ನಾಯಕ್ ಅವರ ಸಮಾಜಸೇವೆ ಗುರುತಿಸಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net