

ಮುಂಬೈ: ಸಾಲು ಸಾಲು ಸಿನಿಮಾ ಘೋಷಣೆ ಮಾಡಿಕೊಂಡು ಶೂಟಿಂಗ್ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಈಗಾಗಲೇ ಲಾಕ್ಡೌನ್ ಅವಧಿಯಲ್ಲಿಯೇ ಬೆಲ್ಬಾಟಂ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಅಷ್ಟೇ ಅಲ್ಲ ಪೃಥ್ವಿರಾಜ್ ಚೌಹಾಣ್ ಸಿನಿಮಾ ಕೆಲಸವೂ ನಡೆಯುತ್ತಿದೆ. ಇದೀಗ ಬಚ್ಚನ್ ಪಾಂಡೆ ಸಿನಿಮಾ ಸೆಟ್ಗೆ ಅಕ್ಷಯ್ ತೆರಳುತ್ತಿದ್ದಾರೆ. ಅಂದರೆ, ಜನವರಿ 6ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.
ಇದನ್ನೂ ಓದಿ: ದ್ವಿಪಾತ್ರಗಳಲ್ಲಿ ರವಿಚಂದ್ರನ್
ಅಷ್ಟೇ ಅಲ್ಲ ಅಕ್ಷಯ್ ಜತೆಗೆ ನಟಿಮಣಿಯರಾದ ಜಾಕ್ಲೀನ್ ಫರ್ನಾಂಡೀಸ್ ಮತ್ತು ಕೃತಿ ಸನೋನ್ ಸಹ ಹಾಜರಾಗಲಿದ್ದಾರೆ. ಈ ಮೊದಲು ಈ ಚಿತ್ರದಲ್ಲಿ ಕೇವಲ ಕೃತಿ ಮಾತ್ರ ಹೀರೋಯಿನ್ ಎನ್ನಲಾಗಿತ್ತು. ಇದೀಗ ಜಾಕ್ಲೀನ್ ಸಹ ಸೇರಿಕೊಂಡಿದ್ದಾರೆ. ಈ ಮೂಲಕ ಚಿತ್ರದ ನಿರ್ಮಾಪಕ ಸಾಜಿದ್ ನಾದಿಯಾದ್ವಾಲಾ ಅವರ ಎಂಟು ಪ್ರಾಜೆಕ್ಟ್ಗಳಲ್ಲಿ ಜಾಕ್ಲೀನ್ ನಟಿಸಿಸದಂತಾಗುತ್ತದೆ.
ಇದನ್ನೂ ಓದಿ: ಪ್ರಭಾಸ್ ಚಿತ್ರಕ್ಕೆ ಪ್ರಶಾಂತ್ ನಿರ್ದೇಶನ?
ಇತ್ತೀಚೆಗಷ್ಟೇ ಇದೇ ಚಿತ್ರಕ್ಕೆ ಅರ್ಷದ್ ವಾರ್ಸಿ ಸಹ ಎಂಟ್ರಿಕೊಟ್ಟಿದ್ದು, ಈ ಹಿಂದೆ ಬಾಲಿವುಡ್ನಲ್ಲಿ ತೆರೆಕಂಡಿದ್ದ ಜಾಲಿ ಎಲ್ಎಲ್ಬಿ ಚಿತ್ರದ ಫ್ರಾಂಚೈಸಿಯಲ್ಲಿ ಈ ಇಬ್ಬರೂ ಬೇರೆ ಬೇರೆ ಭಾಗಗಳಲ್ಲಿ ನಟಿಸಿದ್ದರು. ಇದೀಗ ಮೊದಲ ಬಾರಿಗೆ ಬಚ್ಚನ್ ಪಾಂಡೆ ಸಿನಿಮಾ ಮೂಲಕ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ ಪಾತ್ರ ಎಂಥದ್ದು, ಸದ್ಯಕ್ಕೆ ಆ ಬಗ್ಗೆ ಮಾಹಿತಿ ನೀಡದ ತಂಡ, ಇನ್ನೇನು ಶೀಘ್ರದಲ್ಲಿ ಅವರ ಲುಕ್ ಅನ್ನೂ ಬಿಡುಗಡೆ ಮಾಡಲಿದೆ. (ಏಜೆನ್ಸೀಸ್)