ಪ್ರಭಾಸ್ ಚಿತ್ರಕ್ಕೆ ಪ್ರಶಾಂತ್ ನಿರ್ದೇಶನ?

prabhas
Published on

ಬೆಂಗಳೂರು: ಒಂದು ಕಡೆ ‘ಕೆಜಿಎಫ್ 2’ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೊಂದು ಕಡೆ ‘ಯುವರತ್ನ’ ಚಿತ್ರವು ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಈ ಮಧ್ಯೆ, ಹೊಂಬಾಳೆ ಫಿಲಂಸ್ ಸಂಸ್ಥೆಯು ಇನ್ನೊಂದು ಚಿತ್ರ ನಿರ್ವಿುಸುವುದಕ್ಕೆ ಸಜ್ಜಾಗಿದೆ.

ನಾಳೆ ಬುಧವಾರ (ಡಿ.2) ಮಧ್ಯಾಹ್ನ ಎರಡು ಗಂಟೆ ಒಂಬತ್ತು ನಿಮಿಷಕ್ಕೆ ಸೋಷಿಯಲ್ ಮೀಡಿಯಾ ಮೂಲಕ ಇನ್ನೊಂದು ಹೊಸ ಚಿತ್ರವನ್ನು ಹೊಂಬಾಳೆ ಫಿಲಂಸ್ ಸಂಸ್ಥೆಯು ಘೋಷಿಸಲಿದೆ. ಇದೊಂದು ಇಂಡಿಯನ್ ಫಿಲಂ ಆಗಿರಲಿದೆ ಎಂದು ಹೇಳುವ ಮೂಲಕ, ಈ ಚಿತ್ರ ಸಹ ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರ ಆಗುವ ಸೂಚನೆ ಕೊಟ್ಟಿದೆ.

ಯಾವಾಗ ಹೊಸ ಚಿತ್ರದ ಘೋಷಣೆಯಾಯಿತೋ, ಆಗ ಈ ಚಿತ್ರದಲ್ಲಿ ಯಾರು ನಟಿಸಬಹುದು, ಯಾರು ನಿರ್ದೇಶಿಸಬಹುದು ಎಂಬ ಊಹಾಪೋಹಗಳು ಎದ್ದಿವೆ. ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ನಟ ಪ್ರಭಾಸ್ ಭೇಟಿಯಾಗಿ ಹೊಸ ಚಿತ್ರದ ಬಗ್ಗೆ ಮಾತುಕತೆ ಮಾಡಿದ್ದಾರೆ ಎಂಬ ಸುದ್ದಿ ಹರಡಿದ್ದು, ಹೊಂಬಾಳೆ ಫಿಲಂಸ್ ನಿರ್ವಿುಸುತ್ತಿರುವ ಹೊಸ ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ ಮತ್ತು ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲ, ಈ ಹಿಂದೆ ಪುನೀತ್ ರಾಜಕುಮಾರ್ ಅಭಿನಯದ ಇನ್ನೊಂದು ಚಿತ್ರವನ್ನು ನಿರ್ವಿುಸುವುದಾಗಿ ನಿರ್ವಪಕ ವಿಜಯಕುಮಾರ್ ಕಿರಗಂದೂರು ಹೇಳಿಕೊಂಡಿದ್ದರು. ಬಹುಶಃ ಆ ಚಿತ್ರ ಇದ್ದರೂ ಇರಬಹುದು ಎಂಬುದು ಒಂದು ಕಡೆಯಾದರೆ, ‘ಕೆಜಿಎಫ್ 2’ ನಂತರ ಯಶ್ ಅಭಿನಯದಲ್ಲಿ ಹೊಂಬಾಳೆ ಫಿಲಂಸ್ ಇನ್ನೊಂದು ಚಿತ್ರ ನಿರ್ವಿುಸುವ ಸಾಧ್ಯತೆ ಇದೆ ಎಂಬ ಗುಸುಗುಸು ಇದೆ.

ಆದರೆ, ನಿರ್ಮಾಣ ಸಂಸ್ಥೆಯ ಕಡೆಯಿಂದ ಈ ಗಾಳಿಮಾತುಗಳಿಗೆ ಯಾವುದೇ ಉತ್ತರ ಸಿಕ್ಕಿಲ್ಲ. ಹೊಂಬಾಳೆ ಫಿಲಂಸ್ ನಿರ್ವಣದ ಹೊಸ ಚಿತ್ರದಲ್ಲಿ ಪ್ರಭಾಸ್, ಪುನೀತ್ ಅಥವಾ ಯಶ್ ನಡುವೆ ಯಾರು ನಟಿಸಬಹುದು ಅಥವಾ ಈ ಊಹಾಪೋಹಗಳನ್ನೆಲ್ಲ ಬಿಟ್ಟು, ಸಂಸ್ಥೆಯು ಬೇರೆಯದೇ ಇನ್ನೊಂದು ಚಿತ್ರದ ಪ್ಲಾನ್ ಮಾಡಿದೆಯಾ ಎಂಬುದು ಗೊತ್ತಾಗುವುದಕ್ಕೆ ಬುಧವಾರ ಮಧ್ಯಾಹ್ನದವರೆಗೂ ಕಾಯಲೇಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net