ರಿಯಲ್​ ಲೈಫ್​ನಲ್ಲಿ ಮಾವ-ಸೊಸೆ; ರೀಲ್​ ಲೈಫ್​ನಲ್ಲಿ ಮಾತ್ರ ಅಣ್ಣ-ತಂಗಿ

Jackie Shroff - Disha Patani
Published on

ಮುಂಬೈ: ಹಿರಿಯ ನಟ ಜಾಕಿ ಶ್ರಾಫ್​ ಅವರಿಗೂ, ಕಿರಿಯ ನಟಿ ದಿಶಾ ಪಠಾಣಿಗೂ ಏನು ಸಂಬಂಧ ಎಂಬ ಪ್ರಶ್ನೆಯನ್ನು ಬಾಲಿವುಡ್​ನಲ್ಲಿ ಯಾರನ್ನು ಬೇಕಾದರೂ ಕೇಳಿ ನೋಡಿ, ಮಾವ-ಸೊಸೆ ಎಂಬ ಉತ್ತರ ಬರುತ್ತದೆ. ಏಕೆಂದರೆ, ಜಾಕಿ ಶ್ರಾಫ್​ ಅವರ ಮಗ ಟೈಗರ್ ಶ್ರಾಫ್​ ಅವರನ್ನು ದಿಶಾ ಪಠಾಣಿ ಡೇಟಿಂಗ್​ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರಿಬ್ಬರೂ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೆ.

ಹೀಗೆ ರಿಯಲ್​ ಲೈಫ್​ನಲ್ಲಿ ಮಾವ-ಸೊಸೆಯಾಗುತ್ತಿರುವ ಜಾಕಿ ಮತ್ತು ದಿಶಾ, ರಿಯಲ್​ ಲೈಫ್​ನಲ್ಲಿ ಅಣ್ಣ-ತಂಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಹಾಗೊಂದು ಸುದ್ದಿ ಬಾಲಿವುಡ್​ ಅಂಗಳದಿಂದ ಕೇಳಿಬಂದಿದೆ. ಆ ಚಿತ್ರ ಯಾವುದು ಗೊತ್ತಾ? 'ರಾಧೆ - ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​'.

ಸಲ್ಮಾನ್​ ಖಾನ್​ ಅಭಿನಯದ ಚಿತ್ರ, 'ರಾಧೆ'. ಈ ಚಿತ್ರದಲ್ಲಿ ಜಾಕಿ ಶ್ರಾಫ್​ ಇನ್​ಸ್ಪೆಕ್ಟರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ತಂಗಿಯಾಗಿ ದಿಶಾ ಪಠಾಣಿ ನಟಿಸಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಸಲ್ಮಾನ್​ಗೆ ದಿಶಾ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಚಿತ್ರೀಕರಣ ಮುಗಿದಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಈ ವರ್ಷದ ಈದ್​ ಮಿಲಾಸ್​ ಸಮಯದಲ್ಲಿ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ಇನ್ನು, 'ರಾಧೆ - ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​' ಚಿತ್ರವು ಹೊಸ ದಾಖಲೆ ಮಾಡಿದೆ. ಈ ಚಿತ್ರದ ಸ್ಯಾಟಿಲೈಟ್​, ಡಿಜಿಟಲ್​ ಮತ್ತು ಮ್ಯೂಸಿಕ್​ ಹಕ್ಕುಗಳನ್ನು ದಾಖಲೆಯ 230 ಕೋಟಿ ರೂಗಳಿಗೆ ಮಾರಾಟ ಮಾಡಲಾಗಿದೆಯಂತೆ. ಜೀ ಸ್ಟುಡಿಯೋಸ್​ ಸಂಸ್ಥೆಯು ಇಷ್ಟೊಂದು ದುಬಾರಿ ಮೊತ್ತ ಕೊಟ್ಟು ಖರೀದಿಸಿದ್ದು, ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net