

ಚೆನ್ನೈ: ಒಂದು ಕಾಲದಲ್ಲಿ ಸಿನಿ ಇಂಡಸ್ಟ್ರಿಯ ಬಹುಬೇಡಿಕೆ ನಟಿಯಾಗಿದ್ದ ಸದಾ ಇದೀಗ ಸಿನಿ ರಂಗದಿಂದ ದೂರ ಉಳಿದಿದ್ದಾರೆ. ತೆಲುಗಿನ ಜಯಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸದಾ, ಮೊದಲ ಚಿತ್ರದಲ್ಲಿ ಬ್ಲಾಕ್ಬಸ್ಟರ್ ಹಿಟ್ ಕೊಟ್ಟರು. ಅಲ್ಲಿಂದಾಚೆಗೆ ತೆಲುಗು ಮತ್ತು ತಮಿಳಿನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಅಲ್ಲದೆ, ಕನ್ನಡದಲ್ಲೂ ಮೊನಾಲಿಸಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸದಾ ನಟನೆ ಮಾಡಿದ್ದು, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಸದಾ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದರೂ ಕ್ರಮೇಣವಾಗಿ ಸಾಲು ಸಾಲು ಸೋಲುಗಳಿಂದ ಸಿನಿಮಾ ಅವಕಾಶಗಳು ಕೈತಪ್ಪಿ ತೆರೆಮರೆಗೆ ಸರಿದರು. ಆದರೆ, ಇತ್ತೀಚೆಗೆ ಕಿರುತೆರೆಗೆ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಬಿಬಿ ಜೋಡಿ ಮತ್ತು ಡ್ಯಾನ್ಸ್ ವಿಥ್ ಯು ಹೆಸರಿನ ಟಿವಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸದಾ ಅವರಿಗೆ 39 ವರ್ಷ ವಯಸ್ಸಾಗಿದ್ದರೂ ಇನ್ನು ಮದುವೆ ಮಾಡಿ ಮಾಡಿಕೊಳ್ಳದೇ ಒಂಟಿ ಜೀವನ ಮುಂದುವರಿಸಿದ್ದಾರೆ.
ಇದೀಗ ಸದಾ ಅವರ ಕುರಿತು ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರು ಕೆಲವೊಂದಿಷ್ಟು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ, ರಂಗನಾಥನ್ ಅವರ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ಏಕೆಂದರೆ, ಇವರು ಸುದ್ದಿಯಾಗುವುದೇ ವಿವಾದಗಳಿಂದ. ಯೂಟ್ಯೂಬ್ ಚಾನೆಲ್ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿರುವುದಲ್ಲದೆ ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್ ವಿರುದ್ಧ ತಮ್ಮ ಧ್ವನಿ ಕೂಡ ಎತ್ತಿದ್ದಾರೆ. ಆದರೂ ನಟಿಯರ ಬಗ್ಗೆ ಮಾತನಾಡುವುದನ್ನು ರಂಗನಾಥನ್ ನಿಲ್ಲಿಸಿಲ್ಲ. ಇದೀಗ ಸದಾ ಅವರ ಬಗ್ಗೆ ಮಾತನಾಡಿದ್ದಾರೆ.
ಮಾದಕ ವ್ಯಸನಿ
ಸದಾ ಓರ್ವ ಮಾದಕ ವ್ಯಸನಿ. ಈ ಹವ್ಯಾಸವೇ ಆಕೆಯ ಸಿನಿಮಾ ಕೆರಿಯರ್ ಮೇಲೆ ಪರಿಣಾಮ ಬೀರಿತು. ಯಾವಾಗಲೂ ತುಂಬಾ ಸ್ಮೋಕ್ ಮಾಡುತ್ತಿದ್ದರು. ನಾನೂ ಕೂಡ ಖುದ್ದಾಗಿ ಅನೇಕ ಬಾರಿ ನೋಡಿದ್ದೇನೆ. ಮಾದಕ ವ್ಯಸನ ಕಾರಣದಿಂದಾಗಿ ಅನೇಕ ಸಿನಿಮಾಗಳಿಂದ ಆಕೆಯನ್ನು ತೆಗೆದು ಹಾಕಲಾಗಿದೆ. ಆಕೆ ಸಸ್ಯಹಾರಿಯಾಗಿದ್ದು, ಸದ್ಯ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದು, ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದಾರೆ. ಅಲ್ಲದೆ, ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ರಜಿನಿಕಾಂತ್ ಅಭಿನಯದ ಚಂದ್ರಮುಖಿ ಚಿತ್ರದಲ್ಲಿ ನಟಿ ಮಾಳವಿಕಾ ನಿರ್ವಹಿಸಿದ ಪಾತ್ರಕ್ಕೆ ಸದಾ ಅವರನ್ನು ಈ ಮೊದಲು ಪರಿಗಣಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದ ನಟಿ ಆಫರ್ ಅನ್ನು ತಿರಸ್ಕರಿಸಿದ್ದಾರೆ. ರಜಿನಿಕಾಂತ್, ಜ್ಯೋತಿಕಾ ಮುಂತಾದವರು ನಟಿಸಿದ್ದ ಈ ಚಿತ್ರ ಭಾರೀ ಹಿಟ್ ಆಗಿತ್ತು. ಸದಾ ಈ ಚಿತ್ರದಲ್ಲಿ ನಟಿಸಿದರೆ ಗ್ರ್ಯಾಂಡ್ ಕಮ್ ಬ್ಯಾಕ್ ಆಗುತ್ತಿತ್ತು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅದು ತಪ್ಪಿಹೋಯಿತು. ಆದರೆ, ಸದಾ ಅವರ ಗ್ರ್ಯಾಂಡ್ ಕಮ್‌ಬ್ಯಾಕ್‌ಗಾಗಿ ಅಭಿಮಾನಿಗಳು ಇನ್ನೂ ಕಾಯುತ್ತಿದ್ದಾರೆ. ಆದರೆ, ಸದಾ ಸದ್ಯ ಕಿರುತೆರೆ ಲೋಕದಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)