MS ಧೋನಿ ಆಟ ನೋಡಲು ಕಷ್ಟವಾಗುತ್ತಿದೆ.. CSK ತಂಡ ಬಿಡೋದು ಒಳ್ಳೆಯದು ಎಂದ ಮಾಜಿ ಆಟಗಾರ!

dk-2025-04-07t155829285-67f3a8d4b46d8
Published on

CSK:ಇಂಡಿಯನ್​ ಪ್ರೀಮಿಯರ್​ ಲೀಗ್​ 2025(IPL)ರ 18ನೇ ಆವೃತ್ತಿಯಲ್ಲಿ 4 ಪಂದ್ಯಗಳನ್ನು ಆಡಿರುವ ಚೈನ್ನೈ ಸೂಪರ್​ ಕಿಂಗ್ಸ್​(ಸಿಎಸ್​ಕೆ) ತಂಡ 1 ಪಂದ್ಯವನ್ನು ಗೆದ್ದಿದೆ. ಅಲ್ಲದೆ, ಉಳಿದ ಮೂರು ಪಂದ್ಯಗಳಲ್ಲಿ ಸೋತಿದ್ದು, 2 ಪಂದ್ಯಗಳಲ್ಲಿ ತನ್ನ ತವರು ಕ್ರೀಡಾಂಗಣ ಚೆಕಾಪ್​ನಲ್ಲಿ ಮುಖಭಂಗ ಅನುಭವಿಸಿದೆ.

ಈ ಸೋಲುಗಳ ಸಾಮಾನ್ಯ ಲಕ್ಷಣವೆಂದರೆ ಸಿಎಸ್‌ಕೆ ತಂಡದ ಗುರಿಗಳನ್ನು ಬೆನ್ನಟ್ಟುವಲ್ಲಿ ವಿಫಲವಾಗಿದೆ. ಮುಂಬೈ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಗೆದ್ದರೂ, ಆರ್‌ಸಿಬಿ ವಿರುದ್ಧ 50 ರನ್‌ಗಳಿಂದ, ಆರ್‌ಆರ್ ವಿರುದ್ಧ 6 ರನ್‌ಗಳಿಂದ ಮತ್ತು ನಂತರ ಡಿಸಿ ವಿರುದ್ಧ 25 ರನ್‌ಗಳಿಂದ ಸೋತಿದೆ. ಅಗ್ರ ಕ್ರಮಾಂಕವೂ ಕಳಪೆ ಪ್ರದರ್ಶನ ನೀಡಿದೆ.

ಇದೀಗ ಈ ಕಳಪೆ ಪ್ರದರ್ಶನದಿಂದ IPL 2025ರ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ. ಅಲ್ಲದೆ, ಸಿಎಸ್​ಕೆ ಸ್ಟಾರ್​ ಆಟಗಾರ ಮಹೇಂದ್ರ ಸಿಂಗ್​ ಧೋನಿ ಕಳಪೆ ಬ್ಯಾಟಿಂಗ್​ನಿಂದ ಹಲವು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಭಾರತೀಯ ಆಟಗಾರರ ಕೂಡ ನೇರವಾಗಿ ಮತ್ತು ಪರೋಕ್ಷವಾಗಿ ಕ್ಯಾಪ್ಟನ್​ ಕೂಲ್​ ಬಗ್ಗೆ ಟೀಕಿಸುತ್ತಿದ್ದಾರೆ. ಇದೀಗ ಭಾರತೀಯ ಮಾಜಿ ಆಟಗಾರೊಬ್ಬರು ಯುವ ಆಟಗಾರರಿಗೆ ದಾರಿ ಮಾಡಿ ಕೊಡುವ ಮೂಲಕ ನಿರ್ಗಮಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಮಾಜಿ ಆಟಗಾರ ವಾಸಿಮ್​ ಜಾಫರ್​ ಹೇಳಿದ್ದೇನು..?

ಸಿಎಸ್​ಕೆ ತಂಡದ ಬ್ಯಾಟಿಂಗ್​ ವೈಫಲ್ಯದ ಬಗ್ಗೆ ಮಾತನಾಡಿರುವ ಭಾರತೀಯ ಮಾಜಿ ಆಟಗಾರ ವಾಸಿಮ್​ ಜಾಫರ್​ ,'' ಧೋನಿ ಫ್ರಾಂಚೈಸಿಯನ್ನು ಮುನ್ನಡೆಸದಿದ್ದರೆ ಮತ್ತು ಇದೇ ರೀತಿ ಬ್ಯಾಟಿಂಗ್ ಮುಂದುವರಿಸಿದರೆ, ಈಗ ಯುವ ಆಟಗಾರನಿಗೆ ದಾರಿ ಮಾಡಿಕೊಡಬೇಕು ಎಂದು ಭಾವಿಸಿತ್ತೇನೆ'' ಎಂದು ಹೇಳಿದ್ದಾರೆ.

''ಹೌದು, ಅವರು ಈ ರೀತಿ ಬ್ಯಾಟಿಂಗ್​ ಮುಂದುವರೆಸಿದರೆ ಅವರ ಬ್ಯಾಟಿಂಗ್​ ನೋಡುವುದು ಸಲ್ಪ ಕಷ್ಟ ಮತ್ತು ನೋವುಂಟು ಮಾಡುತ್ತದೆ'' ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net