ಇಟಲಿಯಲ್ಲಿ ಕರೊನಾ ಅಟ್ಟಹಾಸ; ಒಂದೇ ದಿನದಲ್ಲಿ 475 ಸಾವು

corona 9 March 20
Published on

ರೋಮ್​: ಚೀನಾದಲ್ಲಿ ತನ್ನ ಯಮರೂಪ ದರ್ಶನ ಮಾಡಿಸಿ ವಿಶ್ವದ ಬೇರೆ ಬೇರೆ ದೇಶಗಳಿಗೂ ಹರಡಿಕೊಂಡಿರುವ ಕರೊನಾ ವೈರಸ್​ ಇಟಲಿಯಲ್ಲಿ ಭಾರೀ ಪರಿಣಾಮವನ್ನು ಬೀರಲಾರಂಭಿಸಿದೆ. ದೇಶದಲ್ಲಿ ಒಂದೇ ದಿನದಲ್ಲಿ 475 ಜನರು ವೈರಸ್​ ಸೋಂಕಿಗೆ ಬಲಿಯಾಗಿರುವುದು ವರದಿಯಾಗಿದೆ.

ಬುಧವಾರದಂದು ಇಟಲಿಯಲ್ಲಿ ಕರೊನಾ ವೈರಸ್​ ದಾಳಿಗೆ 475 ಜನರು ಮೃತರಾಗಿದ್ದಾರೆ. ಇದುವರೆಗಿನ ಅತಿ ಹೆಚ್ಚು ಸಂಖ್ಯೆ ಇದಾಗಿದೆ. ದೇಶದಲ್ಲಿ ಒಟ್ಟಾರೆಯಾಗಿ 35,000 ಜನರಲ್ಲಿ ವೈರಸ್ ಇರುವುದು ಧೃವಾಗಿದ್ದು ಅದರಲ್ಲಿ 2500 ಜನರು ಮೃತರಾಗಿರುವುದಾಗಿ ಅಲ್ಲಿನ ಸರ್ಕಾರ ತಿಳಿಸಿದೆ.

ಚೀನಾದ ನಂತರ ಕರೊನಾ ವೈರಸ್​ ಅತಿ ಹೆಚ್ಚು ಸಮಸ್ಯೆಯಾಗಿ ಕಾಡುತ್ತಿರುವುದು ಯುರೋಪಿಯನ್​ ದೇಶಗಳಿಗೆ. ಇಟಲಿ, ಇರಾನ್​ ಸ್ಪೇನ್​, ಅಮೆರಿಕ, ನ್ಯೂಯಾರ್ಕ್​ ಸೇರಿದಂತೆ ಅನೇಕ ದೇಶಗಳಲ್ಲಿ ಕರೊನಾ ದಾಳಿ ನಡೆಸುತ್ತಿದೆ. ನ್ಯೂಯಾರ್ಕ್​ನಲ್ಲಿ ಒಂದೇ ದಿನದಲ್ಲಿ 1008 ನೂತನ ಪ್ರಕರಣಗಳು ಪತ್ತೆಯಾಗಿದ್ದು ಈವರೆಗೆ ಒಟ್ಟು 2382 ಜನರಲ್ಲಿ ಸೋಂಕಿರುವುದು ಧೃಡವಾಗಿದೆ. ಅಮೆರಿಕದ ಅನೇಕ ಸ್ಥಳಗಳಲ್ಲಿ ವೈರಸ್​ ಹರಡಿಕೊಂಡಿದ್ದು ಅದರ ಭಯದಲ್ಲಿರುವ ದೇಶ ಕೆಲವು ದೇಶಗಳ ವೀಸಾ ರದ್ದು ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net