

Abhishek Bachchan : 'ಐ ವಾಂಟ್ ಟು ಟಾಕ್' ಗಾಗಿ ತಮ್ಮ ಮೊದಲ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದ ಅಭಿಷೇಕ್ ಬಚ್ಚನ್ ವೇದಿಕೆಯೊಂದರಲ್ಲಿ ಭಾನುವಾರ ಭಾವುಕರದರು.
ಹೌದು, ಅಭಿಷೇಕ್ ಬಚ್ಚನ್ ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಕೆಲವು ಅದ್ಭುತ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇನ್ನೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿಲ್ಲ. ಇದೀಗ, ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ನಟ ಪಡೆದಿದ್ದಾರೆ. ಹೀಗಾಗಿ, ಅವರು ವೇದಿಕೆ ಮೇಲೆ ಭಾವನಾತ್ಮಕ ಭಾಷಣ ಮಾಡಿದರು.
"ನಾನು ಈ ವರ್ಷ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸುತ್ತಿಸದ್ದೇನೆ. ಈ ಪ್ರಶಸ್ತಿಗಾಗಿ ನಾನು ಎಷ್ಟು ಬಾರಿ ಭಾಷಣವನ್ನು ಅಭ್ಯಾಸ ಮಾಡಿದ್ದೇನೆಂದು ನನಗೆ ನೆನಪಿಲ್ಲ. ಇದು ಒಂದು ಕನಸಾಗಿತ್ತು, ಮತ್ತು ನಾನು ತುಂಬಾ ಸ್ಪರ್ಶಿಸಲ್ಪಟ್ಟಿದ್ದೇನೆ ಮತ್ತು ವಿನಮ್ರನಾಗಿದ್ದೇನೆ. ನನ್ನ ಕುಟುಂಬದ ಮುಂದೆ ಇದನ್ನು ಸ್ವೀಕರಿಸುವುದು ಅದನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ'' ಎಂದರು.
ನಾನು ಧನ್ಯವಾದ ಹೇಳಬೇಕಾದ ಜನರಿದ್ದಾರೆ, ಆದ್ದರಿಂದ ದಯವಿಟ್ಟು... ಕಾರ್ತಿಕ್ (ಆರ್ಯನ್), ಥೇರ್ ಜಾವೋ ತುಮ್ ಅಭಿ, ತುಮ್ ಸಂಭಾಲ್ ಜಾವೋ ತಬ್ ತಕ್. ಕಾರ್ತಿಕ್ ತುಂಬಾ ಭಾವುಕನಾಗಿ ನನ್ನನ್ನು ಮಾತನಾಡುವಂತೆ ಮಾಡಿದ್ದಾರೆ ಎಂದು ಅಭಿಷೇಕ್ ಹೇಳಿದರು.
"ಐಶ್ವರ್ಯ ಮತ್ತು ಆರಾಧ್ಯ ಅವರಿಗೆ, ನನ್ನ ಕನಸುಗಳನ್ನು ಅನುಸರಿಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು'' ಎಂದು ಈ ವೇಳೆ ಅಭಿಷೇಕ್ ತಮ್ಮ ಪತ್ನಿ ಮತ್ತು ಮಗಳನ್ನು ನೆನೆದರು.(ಏಜೆನ್ಸೀಸ್)