

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸೋಮವಾರ (ಅ.13) ಮುಂಜಾನೆ ಮುರಿಡ್ಕೆಯಲ್ಲಿ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್ಪಿ) ಬೆಂಬಲಿಗರ ವಿರುದ್ಧ ಪೊಲೀಸರು ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಿದಾಗ ಉದ್ವಿಗ್ನತೆ ಉಂಟಾಗಿದೆ ಎಂದು ವರದಿಯಾಗಿದೆ.
ಭಾರೀ ಶೆಲ್ ದಾಳಿ, ಗುಂಡಿನ ದಾಳಿ ಮತ್ತು ಬೀದಿ ಘರ್ಷಣೆಗಳಿಂದ ಕೂಡಿದ ಈ ದಮನ ಕಾರ್ಯಾಚರಣೆಯಲ್ಲಿ ಹಲವಾರು ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ವರದಿ ಉಲ್ಲೇಖಿಸಿದೆ.
ಸ್ಥಳೀಯ ಟಿಎಲ್ಪಿ ನಾಯಕರು ಕನಿಷ್ಠ 13 ಜನರು ಮೃತಪಟ್ಟಿದ್ದಾರೆ. 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿಕೊಂಡರೆ, ಘರ್ಷಣೆಯಲ್ಲಿ ಸುಮಾರು 60 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಟಿಎಲ್ಪಿಗೆ ಸೇರಿದ ಹಲವಾರು ವಾಹನಗಳು ಮತ್ತು ಕಂಟೇನರ್ಗಳಿಗೆ ಬೆಂಕಿ ಹಚ್ಚಲಾಯಿತು, ಪ್ರತಿಭಟನಾಕಾರರು ಸ್ಥಳದಿಂದ ಪಲಾಯನ ಮಾಡುತ್ತಿರುವ ವರದಿಗಳ ನಡುವೆ ಭದ್ರತಾ ಪಡೆಗಳು ಪ್ರದೇಶವನ್ನು ವಶಪಡಿಸಿಕೊಂಡಿವೆ.(ಏಜೆನ್ಸೀಸ್)