ನಿರ್ಮಾಪಕ ಅನುರಾಗ್ ಕಶ್ಯಪ್ & ನಟಿ ತಾಪ್ಸಿ ಪನ್ನುಗೆ ಐಟಿ ಶಾಕ್! ದಾಳಿ ನಡೆಸಿದ ಅಧಿಕಾರಿಗಳು

IT
Published on

ಮುಂಬೈ: ಆದಾಯ ತೆರಿಗೆ ಇಲಾಖೆಯು ಬುಧವಾರ ಬೆಳಗ್ಗೆಯೇ ಬಾಲಿವುಡ್​ಗೆ ಒಂದು ಶಾಕ್​ ಕೊಟ್ಟಿದೆ. ನಿರ್ಮಾಪಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಮನೆ ಹಾಗೂ ಕಚೇರಿಯ ಮೇಲೆ ಐಟಿ ದಾಳಿ ನಡೆಸಲಾಗಿದೆ.

ಈ ಇಬ್ಬರು ಸೆಲೆಬ್ರಿಟಿಗಳು ಮುಂಬೈನಲ್ಲಿ ತಮ್ಮ ನಿವಾಸ ಹಾಗೂ ಕಚೇರಿ ಹೊಂದಿದ್ದು, ಅವುಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಶೋಧ ನಡೆಸಿರುವುದಾಗಿ ಹೇಳಲಾಗಿದೆ. ಅನುರಾಗ್​ ಹಾಗೂ ವಿಕಾಸ್​ ಅವರೊಂದಿಗೆ ಫ್ಯಾಂಟಮ್ ಫಿಲ್ಮ್ಸ್ ಪ್ರೊಡಕ್ಷನ್​ ಹೌಸ್​ನ ಸಹ ಮಾಲೀಕತ್ವವನ್ನು ನಿರ್ಮಾಪಕ ಮಧು ಮಂಟೆನಾ ಅವರೂ ಹೊಂದಿದ್ದು, ಅವರ ಮನೆಯ ಮೇಲೂ ಐಟಿ ದಾಳಿ ನಡೆಸಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net