ಎಎಪಿ ಜಯಭೇರಿ! ಐದರಲ್ಲಿ ನಾಲ್ಕು ಸ್ಥಾನ ಎಎಪಿ ಪಾಲು; ಕಾಂಗ್ರೆಸ್​ಗೆ ಒಂದು ಸ್ಥಾನದಲ್ಲಿ ಗೆಲುವು

kejri
Published on

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಪುರಸಭೆ ಉಪಚುನಾವಣೆಯಲ್ಲಿ ಆಡಳಿತ ಪಕ್ಷವಾದ ಆಮ್​ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ಐದರಲ್ಲಿ ನಾಲ್ಕು ಸ್ಥಾನವನ್ನು ಪಕ್ಷ ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್​ ಒಂದು ಸ್ಥಾನದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದೆ.

ನವದೆಹಲಿ ಪುರಸಭೆಯ ಐದು ವಾರ್ಡ್​ಗಳಿಗೆ ಫೆಬ್ರವರಿ 28ರಂದು ಉಪಚುನಾವಣೆ ನಡೆದಿತ್ತು. ಶೇ. 50 ಮತದಾರರು ಮತ ಚಲಾಯಿಸಿದ್ದರು. ಆ ಮತಗಳ ಎಣಿಕೆ ಇಂದು ನಡೆದಿದ್ದು ಅದರಲ್ಲಿ ಶಾಲಿಮಾರ್ ಬಾಗ್ ನಾರ್ತ್, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ಗಳಲ್ಲಿ ಎಎಪಿ ಗೆಲುವಿನ ನಗೆ ಬೀರಿದೆ. ಶಾಲಿಮಾರ್ ಬಾಗ್ ನಾರ್ತ್​ನಲ್ಲಿ ಈ ಹಿಂದೆ ಬಿಜೆಪಿಯ ಕೌನ್ಸಿಲರ್​ ಇದ್ದು, ಇದೀಗ ಆ ಸ್ಥಾನವನ್ನು ಪಕ್ಷ ಎಎಪಿಗೆ ಬಿಟ್ಟುಕೊಟ್ಟಿದೆ. ಚೌಹಾಣ್ ಬಂಗಾರ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬೀಗಿದ್ದಾರೆ.

ದೆಹಲಿಯ ಜನರು ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಬಿಜೆಪಿಯಿಂದ ಬೇಸರಗೊಂಡಿದ್ದಾರೆ ಮತ್ತು ಈ ಚುನಾವಣೆಯು ಅದರ ಸೂಚನೆಯಾಗಿದೆ . 2022 ರ ದೆಹಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಳಿಸಿಹಾಕಲಾಗುವುದು ಎಂದು ಎಎಪಿ ಮುಖಂಡ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಂತಸ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net