

ಶಿರ್ವ: ಆಟಿ ತಿಂಗಳ ವಿಶೇಷತೆಯನ್ನು ಸಂಭ್ರಮದ ದಿನವಾಗಿ ಆಚರಿಸುವುದರ ಜತೆಗೆ ತುಳುನಾಡಿನ, ತುಳುವರ ಭಾಷೆ, ಸಂಸ್ಕೃತಿಯ ಸೊಬಗನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಆಟಿಟೊಂಜಿ ದಿನದಂತಹ ಕಾರ್ಯಕ್ರಮಗಳು ಅಗತ್ಯ ಎಂದು ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಹೇಳಿದರು.
ಮೂಡುಬೆಳ್ಳೆ ಲಯನ್ಸ್ ಸೇವಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಲಯನ್ಸ್ 317 ಸಿ. ಜಿಲ್ಲಾ ಉಪ ಗವರ್ನರ್ ಹರಿಪ್ರಸಾದ್ ರೈ ಉದ್ಘಾಟಿಸಿದರು.
ಲಯನ್ಸ್ ವೈಸ್ ಡಿಜಿ ಹರಿಪ್ರಸಾದ್ ರೈ, ಸಂಪನ್ಮೂಲ ವ್ಯಕ್ತಿ ಡಾ.ಪ್ರಜ್ಞಾ ಮಾರ್ಪಳ್ಳಿ ಅವರನ್ನು ಜೋರ್ಜ್ ಥಾಮಸ್ ಡಿಸೋಜ ಸನ್ಮಾನಿಸಿದರು.
ಮೂಡುಬೆಳ್ಳೆ ಲಯನ್ಸ್ ಅಧ್ಯಕ್ಷೆ ಲವಿನಾ ಬರ್ಬೋಜ ಅಧ್ಯಕ್ಷತೆ ವಹಿಸಿದ್ದರು. ಜೋನ್ ಚೆರ‌್ಮನ್ ವಲೇರಿಯನ್ ನೊರೋನ್ಹಾ, ಕಾಪು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಕೋಶಾಧಿಕಾರಿ ತೆರೆಜಾ ಲೋಬೊ, ಲಿಯೊ ಪ್ರಿನ್ಸನ್ ಉಪಸ್ಥಿತರಿದ್ದರು. ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಸಂಯೋಜಿಸಿದರು. ಅವನಿ ಪಟೇಲ್ ವಂದಿಸಿದರು. ಐವನ್ ಮಿನೇಜಸ್ ಸಹಕರಿಸಿದರು.