ಪರಶುರಾಮ ಥೀಂ ಪಾರ್ಕ್​ಗೆ ಬಾಕಿ ಅನುದಾನ ಬಿಡುಗಡೆಗೆ ಆಗ್ರಹ

udp-6-sunil protest
Published on

ಉಡುಪಿ: ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದ್ದ ಬೈಲೂರು ಪರಶುರಾಮ ಥೀಮ್​ ಪಾರ್ಕ್​ ರಾಜಕೀಯ ಕಾರಣದಿಂದ ಸಂಪೂರ್ಣ ರ್ನಿಲಕ್ಷ$್ಯಕ್ಕೆ ಒಳಗಾಗಿದ್ದು, ಕಟ್ಟಡಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಕಾಮಗಾರಿಗಳಿಗೆ ಅನುದಾನವನ್ನು ತಡೆಹಿಡಿಯಲಾಗಿದ್ದು, ಬಾಕಿ ಉಳಿದಿರುವ 4.33 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಬೇಕು ಎಂದು ಕಾರ್ಕಳ ಶಾಸಕ ವಿ.ಸುನೀಲ್​ ಕುಮಾರ್​ ಆಗ್ರಹಿಸಿದ್ದಾರೆ.

ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೈಲೂರು ಪರಶುರಾಮ ಥೀಮ್​ ಪಾರ್ಕ್​ ಕಾಮಗಾರಿ ಪ್ರಾರಂಭಕ್ಕೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. 2023ರಲ್ಲಿ ಪರಶುರಾಮ ಮೂರ್ತಿಯ ಮರುವಿನ್ಯಾಸಕ್ಕಾಗಿ ಶಿಲ್ಪಿ ನಿರ್ಮಿತಿ ಕೇಂದ್ರಕ್ಕೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದರು. ನಂತರ ಉದಯ್​ ಶೆಟ್ಟಿ ಮತ್ತು ಬೆಣಬಲಿಗರು ಬಾಕಿ ಕಾಮಗಾರಿಗಳನ್ನು ನಡೆಸಲು ಬಿಡದೆ ಮೂರ್ತಿ ನೈಜತೆ ಬಗ್ಗೆ ಗೊಂದಲ ಉಂಟುಮಾಡಿ ತಡೆಯೊಡ್ಡಿದ್ದಾರೆ. ಪ್ರಸ್ತುತ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದು, ಮೂರ್ತಿ ೈಬರ್​ನದ್ದು ಅಲ್ಲ. ಹಿತ್ತಾಳೆಯದ್ದು ಎಂಬುದಾಗಿ ವರದಿ ನೀಡಿದ್ದಾರೆ. ಸುಳ್ಳುಗಳ ಮೆರವಣಿಗೆ ನಿಂತು ಹೋಗಿದ್ದು, ಸತ್ಯದ ವಿಜಯೋತ್ಸವ ನಡೆದಿದೆ. ಕಾರ್ಕಳದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಹಳ್ಳ ಹಿಡಿಸುವ ಪ್ರಯತ್ನ ನಿರಂತರ ನಡೆಯುತ್ತಿದೆ ಎಂದರು.

ಮೊದಲ ಕೇಸ್​ ದಾಖಲು

ಕಾಮಗಾರಿಗೆ ತಡೆಕೋರಿ ಕೋರ್ಟ್​ಗೆ ಹೋದವರೆ ಇಂದು ಮೂರ್ತಿ ಸ್ಥಾಪನೆ ಮಾಡಬೇಕು ಎಂಬುದಾಗಿ ಪಿಐಎಲ್​ ಹಾಕಿದ್ದಾರೆ. ಪರಶುರಾಮ ಥೀಮ್​ ಪಾರ್ಕ್​ ಪಾಳುಬೀಳು ಕಾಂಗ್ರೆಸ್​ ನೇರ ಕಾರಣವಾಗಿದೆ. ಈ ಬಾರಿ ಅಧಿವೇಶನದಲ್ಲಿ ಸರ್ಕಾರ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕ್ಕೆ ಕಾನೂನು ತರುತ್ತಿದೆ. ಮೊದಲ ಕೇಸ್​ ಉದಯ್​ ಶೆಟ್ಟಿ ಅವರ ವಿರುದ್ಧ ದಾಖಲಿಸಬಹುದು ಎಂದು ಹೇಳಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ಕಾರ್ಕಳ ಮಂಡಲ ಅಧ್ಯಕ್ಷ ನವೀನ್​ ನಾಯ್ಕ, ಮಹಿಳಾ ಮೋರ್ಚಾ ಅಧ್ಯೆ ಸಂಧ್ಯಾ ರಮೇಶ್​, ಪ್ರಮುಖರಾದ ಮುಟ್ಲುಪಾಡಿ ಸತೀಶ್​ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಮಹಾವೀರ ಜೈನ್​, ಸುಮಿತ್​ ಶೆಟ್ಟಿ, ರಾಕೇಶ್​ ಶೆಟ್ಟಿ ಸಚ್ಚಿದಾನಂದ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಕಳದಿಂದ ಮಣಿಪಾಲ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಸಕ ಸುನೀಲ್​ ಕುಮಾರ್​ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ವಾಹನ ಜಾಥಾ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net