

ಬ್ರಹ್ಮಾವರ: ಅದೆಷ್ಟೋ ತ್ಯಾಗ ಬಲಿದಾನದಿಂದ ಗಳಿಸಿರುವ ಸ್ವಾತಂತ್ರೃವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಬ್ರಹ್ಮಾವರದ ಹೋರಾಟಗಾರ ಅಂತಯ್ಯಶೆಟ್ಟಿ ಅವರ ಹೆಸರನ್ನು ಶಾಶ್ವತವಾಗಿ ನೆನಪಿಸುವಂತಹ ಕಾರ್ಯ ವಾಡಬೇಕಾಗಿದೆ ಎಂದು ಉಪನ್ಯಾಸಕ ಡಾ.ರಾಮದಾಸ್ ಪ್ರಭು ಹೇಳಿದರು.
ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಬ್ರಹ್ಮಾವರ ತಾಲೂಕು ಆಡಳಿತದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ಧ್ವಜವಂದನೆ ಸ್ವೀಕರಿಸಿದರು.
ತಾಲೂಕು ಆಡಳಿತಕ್ಕೆ ಉದ್ಯಮಿ ಚೇತನ ಕುವಾರ್ ಶೆಟ್ಟಿ ಕೊಡವಾಡಿದ 10 ಲೈಫ್ ಜಾಕೆಟ್‌ನ್ನು ಹಸ್ತಾಂತರಿಸಲಾಯಿತು. ತಾಲೂಕಿನ 3 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.
ತಾಪಂ ಇಒ ಎಚ್.ವಿ.ಇಬ್ರಾಹಿಂಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್, ಗ್ಯಾರಂಟಿ ಸಮಿತಿಯ ಡಾ.ಸುನೀತಾ ಶೆಟ್ಟಿ, ಹಂದಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಪೂಜಾರಿ, ಪೊಲೀಸ್ ಅಧಿಕಾರಿಗಲಾದ ಅಶೋಕ್ ಮಳಬಾಗಿ, ಪುನೀತ ಹಿರಿಯಡ್ಕ, ಪ್ರವೀಣಕುವಾರ್, ವಿಠಲ್ ಮಳವಾಡ್ಕರ್, ಕಂದಾಯ ನಿರೀಕ್ಷಕ ರಾಜು ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.