

Drink water : ಆಹಾರ ಸೇವಿಸಿದ ತಕ್ಷಣವೇ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಕುಗ್ಗಿಸಿ, ಟಾಕ್ಸಿನ್ಗಳನ್ನು ಉತ್ಪತ್ತಿಸಬಹುದು. ಇದರಿಂದ ದೇಹದಲ್ಲಿ ಹೃದಯದ ಬಡಿತ ಹೆಚ್ಚಾಗುವುದು, ಹೊಟ್ಟೆ ನೋವು, ಪೋಷಕಾಂಶಗಳ ಕೊರತೆಯಂತಹ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸಬೇಕಾಗುತ್ತದೆ. ತಜ್ಞರ ಪ್ರಕಾರ, ಆಹಾರ ಸೇವನೆಯ ನಂತರ ಕನಿಷ್ಟ 30 ನಿಮಿಷಗಳ ನಂತರ ನೀರನ್ನು ಸೇವಿಸುವುದು ಉತ್ತಮ ಎಂದು ತಿಳಿದುಬಂದಿದೆ. ಹಾಗಿದ್ದರೆ, ಆ ಆಹಾರಗಳು ಯಾವುವು ಎಂದು ತಿಳಿಯಿರಿ...
ಕಲ್ಲಂಗಡಿ ಹಣ್ಣು ಇದು ಎಲ್ಲರೂ ಇಷ್ಟಪಡುವಂತಹ ಹಣ್ಣಾಗಿದೆ. ಇದು ಸುಮಾರು ಶೇ.95ರಷ್ಟು ನೀರನ್ನು ಹೊಂದಿರುತ್ತದೆ. ಇದನ್ನು ಸೇವಿಸಿದ ನಂತರ ನೀರನ್ನು ಕುಡಿಯುವುದರಿಂದ ಇದು ಹೊಟ್ಟೆಯಲ್ಲಿರುವ ಜೀರ್ಣ ರಸಗಳನ್ನು ತೆರೆದುಹಾಕುತ್ತದೆ. ಇದರಿಂದ ದೇಹದಲ್ಲಿ ಜೀರ್ಣಕ್ರಿಯೆಯಲ್ಲಿ ತೊಂದರೆ, ವಿಟಮಿನ್ A, C ಮತ್ತು ಲೈಕೋಪೀನ್‌ನ ಪ್ರಯೋಜನ ಕಡಿಮೆಯಾಗುತ್ತದೆ. ಹಾಗಾಗಿ ಈ ಹಣ್ಣನ್ನು ಸೇವಿಸಿ 45 ನಿಮಿಷಗಳ ನಂತರ ನೀರನ್ನು ಕುಡಿಯುವುದು ಉತ್ತಮವಾಗಿದೆ.
ಬಾಳೆಹಣ್ಣು ಪೊಟ್ಯಾಷಿಯಂ, ಫೈಬರ್‌ನಿಂದ ಕೂಡಿದಂತಹ ಆಹಾರ ಪದಾರ್ಥವಾಗಿದೆ. ಇದನ್ನು ತಿಂದ ತಕ್ಷಣ ನೀರನ್ನು ಕುಡಿಯುವುದರಿಂದ ಜೀರ್ಣ ರಸಗಳನ್ನು ತೆಗೆದುಹಾಕುತ್ತದೆ. ಇದರಿಂದ ತಲೆ ತಿರುಗುವುದು, ಸುಸ್ತು ಇಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಈ ಹಣ್ಣನ್ನು ತಿಂದ 30 ನಿಮಿಷಗಳ ನಂತರ ನೀರನ್ನು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ.
ಈ ಹಣ್ಣುಗಳು ವಿಟಮಿನ್ C ಮತ್ತು ಫೈಬರ್‌ನಿಂದ ಕೂಡಿರುತ್ತವೆ. ಆದರಿಂದ ಇದನ್ನು ತಿಂದ ತಕ್ಷಣ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಆಮ್ಲತೆಯಲ್ಲಿ pH ಸಮತೋಲನದಲ್ಲಿ ಸಮಸ್ಯೆ ಉಂಟಾಗುತ್ತದೆ. ಜೀರ್ಣರಸಗಳು ಕಡಿಮೆಯಾಗಿ, ಹೃದಯದ ಬಡಿಯುವಿಕೆ, ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಈ ಹಣ್ಣುಗಳನ್ನು ಸೇವಿಸಿದ 30 ನಿಮಿಷಗಳ ನಂತರ ನೀರನ್ನು ಕುಡಿಯಿರಿ.
ಕಡಲೆಕಾಯಿ ತಿಂದ ನಂತರ ಪ್ರೋಟೀನ್ ಮತ್ತು ಫ್ಯಾಟ್‌ಗಳಿಂದ ದೇಹದಲ್ಲಿ ತಾಪಮಾನ ಹೆಚ್ಚಾಗುತ್ತದೆ. ಆದರಿಂದ ತಕ್ಷಣವೇ ನೀರನ್ನು ಕುಡಿಯುವುದರಿಂದ ಜೀರ್ಣ ಪ್ರಕ್ರಿಯೆಯು ನಿಧಾನಗತಿಯಲ್ಲಿ ಸಾಗುತ್ತದೆ. ಇದರಿಂದ ಹೊಟ್ಟೆ ಭಾರ ಮತ್ತು ಅಸಮಾನ ಜೀರ್ಣ ಕ್ರಿಯೆ ಉಂಟಾಗುತ್ತದೆ. ಮಕ್ಕಳಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ. ಆದರಿಂದ 20-30 ನಿಮಿಷಗಳ ಬಿಟ್ಟು ಕುಡಿಯಿರಿ.
ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಅಂಶ ಅಧಿಕವಾಗಿರುತ್ತದೆ. ಇದನ್ನು ಕುಡಿದ ತಕ್ಷಣವೇ ನೀರು ಕುಡಿಯುವುದರಿಂದ ಜೀರ್ಣ ರಸಗಳಿಗೆ ತೊಂದರೆ ಉಂಟಾಗಿ, ದೇಹದಲ್ಲಿ ಆಮ್ಲತೆ ಹೆಚ್ಚಾಗುತ್ತದೆ. ಇದರಿಂದ ಅಸಮಾನ ಜೀರ್ಣಕ್ರಿಯೆ, ಅಸ್ವಸ್ಥತೆ, ಹೊಟ್ಟೆನೋವನ್ನು ಅನುಭವಿಸಬೇಕಾಗುತ್ತದೆ. ಆದರಿಂದ ಹಾಲು ಕುಡಿದ ನಂತರ ಕನಿಷ್ಟ 30 ನಿಮಿಷಗಳ ಕಾಲ ಬಿಟ್ಟು ನೀರು ಕುಡಿಯಿರಿ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.