More

    ‘ಸಲಾರ್​’ vs ‘ಡಂಕಿ’!: ಇಬ್ಬರು ಸ್ಟಾರ್​ ನಿರ್ದೇಶಕರ ಚಿತ್ರಕ್ಕೆ ಇದ್ಯಾ ಭರ್ಜರಿ ಪೈಪೋಟಿ? ಇಲ್ಲಿದೆ ಉತ್ತರ….

    ಬೆಂಗಳೂರು: ಸದ್ಯ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್​ ಇಂಡಿಯಾ ಸಿನಿಮಾಗಳು ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದು, ಎಲ್ಲಾ ಭಾಷೆಯ ಸಿನಿಪ್ರೇಕ್ಷಕರ ಮನವನ್ನು ಗೆಲ್ಲುವ ಉದ್ದೇಶದಲ್ಲಿ ಆಯಾ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು ಈ ರೀತಿಯ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವಲ್ಲಿ ಈಗ ಮುಂಚೂಣಿಯಲ್ಲಿದ್ದಾರೆ. ಈ ಪೈಕಿ ಕಳೆದ ಹಲವು ತಿಂಗಳಿಂದ ಭಾರೀ ಸದ್ದು ಮಾಡುತ್ತಿರುವ ‘ಸಲಾರ್’ ಮತ್ತು ‘ಡಂಕಿ’, 21 ಹಾಗೂ 22 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಹಣಾಹಣಿ ನಡೆಸಲಿದೆ.

    ಇದನ್ನೂ ಓದಿ: ಮಹಿಳೆಯ ಬೆತ್ತಲೆ ಮೆರವಣಿಗೆಗೆ ಬಿಜೆಪಿ ತೀವ್ರ ಖಂಡನೆ; ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಪಡೆ ಗುಡುಗು

    ಒಂದೆಡೆ ‘ಕೆಜಿಎಫ್’​ ಖ್ಯಾತಿಯ ಸ್ಟಾರ್​ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್​ನ ರೆಬೆಲ್ ಸ್ಟಾರ್​ ಪ್ರಭಾಸ್​ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಪ್ಯಾನ್ ಇಂಡಿಯಾ ‘ಸಲಾರ್’​ ಈಗಾಗಲೇ ಸಿನಿರಸಿಕರಲ್ಲಿ ಭಾರೀ ಕುತೂಹಲ, ನಿರೀಕ್ಷೆಗಳನ್ನು ಹೆಚ್ಚಿಸಿದರೆ, ಮತ್ತೊಂದೆಡೆ ಬಾಲಿವುಡ್​ನ ಖ್ಯಾತ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರ ನಿರ್ದೇಶನದಲ್ಲಿ ಶಾರುಖ್ ಖಾನ್​ ನಟಿಸಿರುವ ‘ಡಂಕಿ’ ಈಗಾಗಲೇ ಹೆಚ್ಚಿನ ಭರವಸೆಯೊಂದಿಗೆ ಬಾಕ್ಸ್​ ಆಫೀಸ್ ಧೂಳೆಬ್ಬಿಸಲಿದೆ ಎಂಬ ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ.

    ಈಗಾಗಲೇ ಕೆಲವು ರಾಜ್ಯಗಳಲ್ಲಿ ‘ಸಲಾರ್’​ ಚಿತ್ರಕ್ಕೆ ಮುಂಗಡ ಬುಕ್ಕಿಂಗ್​ ಆರಂಭಗೊಂಡಿದ್ದು, ತಮ್ಮ ನೆಚ್ಚಿನ ನಟನ ಸಿನಿಮಾ ವೀಕ್ಷಿಸಿಲು ಸೀಟ್​ ಕಾಯ್ದಿರಿಸುವಲ್ಲಿ ಸದ್ಯ ಪ್ರೇಕ್ಷಕರು ನಿರತರಾಗಿದ್ದಾರೆ. ಈ ಮಧ್ಯೆ ಹೊಸ ಮಾಹಿತಿಯೊಂದು ದೊರಕಿದ್ದು, ಸಲಾರ್​ನ ಅಧಿಕೃತ ಟ್ರೇಲರ್​ ಭಾನುವಾರ (ಡಿ.17) ಬಿಡುಗಡೆಯಾಗಲಿದೆ ಎಂದು ಸಿನಿ ಮೂಲಗಳು ತಿಳಿಸಿವೆ. ಸದ್ಯ ಈ ಸಂಗತಿ ಇದೀಗ ಪ್ರಭಾಸ್​ ಅಭಿಮಾನಿಗಳಲ್ಲಿದ್ದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

    ಇದನ್ನೂ ಓದಿ:  ಜಟಕಾ ಬಂಡಿ ನಿಲ್ದಾಣಕ್ಕೆ ಮಾತ್ರ ಜಾಗ ಬಳಕೆಯಾಗಲಿ

    ಒಟ್ಟಾರೆ ಶಾರುಖ್ ಖಾನ್​ ಅಭಿನಯದ ‘ಡಂಕಿ’ ಮತ್ತು ಪ್ರಭಾಸ್​ ನಟನೆಯ ‘ಸಲಾರ್’ ಸಿನಿಮಾಗಳು​ ರಿಲೀಸ್​ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ ಸೃಷ್ಟಿಸಲಿದ್ದು, ಸಿನಿಪ್ರೇಕ್ಷಕರ ಗಮನ ಸೆಳೆಯುವುದರ ಜತೆಗೆ ಹೇಗೆಲ್ಲಾ ಕಮಾಲ್ ಮಾಡಲಿದೆ, ಯಾವೆಲ್ಲಾ ದಾಖಲೆಗಳನ್ನು ಉಡೀಸ್​ ಮಾಡಿ, ಹೊಸ ಇತಿಹಾಸ ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

    https://www.vijayavani.net/parliament-security-breach-sixth-accused-mahesh-arrested

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts