More

    ಜಟಕಾ ಬಂಡಿ ನಿಲ್ದಾಣಕ್ಕೆ ಮಾತ್ರ ಜಾಗ ಬಳಕೆಯಾಗಲಿ

    ಹಾಸನ: ನಗರದ ಹಳೇ ಬಸ್ ನಿಲ್ದಾಣ ಬಳಿ ಇರುವ ಜಟಕಾ ಗಾಡಿ ಶೆಡ್ ನಿರ್ಮಾಣದ ಉದ್ದೇಶಿತ ಜಾಗವನ್ನು ಅದಕ್ಕಾಗಿ ಮಾತ್ರ ಅವಕಾಶ ನೀಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಡಾ. ರಾಜಕುಮಾರ್, ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ನಗರದ ಹೃದಯ ಭಾಗ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಜಾಗದಲ್ಲಿ ಜಟಕಾ ಗಾಡಿ ಶೆಡ್ ನಿರ್ಮಿಸಲು ಮಾತ್ರ ಅವಕಾಶ ನೀಡಬೇಕು. ಆದರೆ ಈ ಜಾಗದಲ್ಲಿ ಈಗ ವಾಣಿಜ್ಯ ಮಳಿಗೆ ನಿರ್ಮಾಣದ ಕಾಮಗಾರಿ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ. ಈ ಜಾಗದಲ್ಲಿ ಜಟಕಾ ಸ್ಟ್ಯಾಂಡ್ ಮಾಡಲು ಮಾತ್ರ ಅನುಮತಿ ನೀಡಬೇಕೇ ಹೊರತು ಬೇರೆ ಉದ್ದೇಶಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.
    ಕಳೆದ 40, 50 ವರ್ಷಗಳಿಂದಲೂ ಈ ನಗರಸಭೆ ಜಾಗದಲ್ಲಿ ಜಟಕಾ ಗಾಡಿ ನಿಲ್ಲಿಸಲೆಂದೇ ಮೀಸಲಿಡಲಾಗಿದೆ. ಆದರೆ ಈಗ ಇದೆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಯಾವುದೇ ಕಾರಣಕ್ಕೂ ಈ ಕಾಂಪ್ಲೆಕ್ಸ್‌ಗೆ ಅನುಮತಿ ನೀಡಬಾರದು. ನಡೆಯುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ಕೋರಿದರು.
    ಇದೆ ವೇಳೆ ಸಮಾಜಸೇವಕ ಎಚ್.ಆರ್. ನಾಗೇಶ್, ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್. ರತೀಶ್ ಕುಮಾರ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts