ಬೆಳ್ವೆ: ವಿದ್ಯಾರ್ಥಿಗಳಿಗೆ ದೃಢವಾದ ಆತ್ಮಸ್ಥೈರ್ಯ, ಕಲಿಕೆ ಬಗ್ಗೆ ಛಲ, ಗುರಿಯೊಂದಿಗೆ ಹೆಚ್ಚಿನ ಆಸಕ್ತಿ ಹೊಂದಿದಾಗ ಉತ್ತಮ ಅಂಕ ಪಡೆದು ಯಶಸ್ಸು ಗಳಿಸಲು ಸಾಧ್ಯ ಎಂದು ಬೆಳ್ವೆ ಟೀಮ್ ಮಲೆನಾಡು ಹ್ಯುಮಾನಿಟೇರಿಯನ್ ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಹೇಳಿದರು. ಬೆಳ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳ್ವೆ ಟೀಮ್ ಮಲೆನಾಡು ಹ್ಯುಮಾನಿಟೇರಿಯನ್ ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಪ್ರಾಯೋಜಕತ್ವದಲ್ಲಿ ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.
ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ಕಾರ್ಯದರ್ಶಿ ವೈ ಪಟ್ಟಾಭಿರಾಮ್ ಭಟ್ ಮರೂರು, ನಿಕಟಪೂರ್ವ ಕೋಶಾಧಿಕಾರಿ ಚಂದ್ರಿಕಾ ಬೆಳ್ವೆ, ಸದಸ್ಯ ಕೆ.ಸಂಜೀವ ಆರ್ಡಿ, ಸಹಶಿಕ್ಷಕ ವೃಂದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಕಿಶನ್‌ರಾಜ್ ಶೆಟ್ಟಿ ಬೆಳ್ವೆ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಣ್ಣಯ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಜಯಶ್ರೀ ವಂದಿಸಿದರು.