ಇಸ್ರೋ ಡಿಸೆಂಬರ್‌ನಲ್ಲಿ ಗಗನಯಾನ ಪರೀಕ್ಷಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ; ವಿ. ನಾರಾಯಣನ್| Isro

V Narayanan
Published on

ನವದೆಹಲಿ: ಮೊದಲ ಗಗನಯಾನ ಪರೀಕ್ಷಾ ಮಿಷನ್ ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಘೋಷಿಸಿದ್ದಾರೆ. ಈ ಮಿಷನ್ ಭಾರತದ ಮೊದಲ ಯೋಜಿತ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಯಾದ ಗಗನಯಾನ 2025 ರ ಭಾಗವಾಗಿದೆ.

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮೊದಲ ಬಾರಿಗೆ, ಆಯ್ಕೆಯಾದ ಭಾರತೀಯ ಗಗನಯಾತ್ರಿಗಳಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಿ. ನಾಯರ್ ಮಾಧ್ಯಮಗಳೊಂದಿಗೆ ಸಂವಾದ ನಡೆಸಲಾಯ್ತು.

ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಸಂಸ್ಥೆಯ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರದಿಂದ ಭಾರಿ ಪ್ರೋತ್ಸಾಹ ದೊರೆತಿದೆ ಎಂದು ಹೇಳಿದರು. ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ದಕ್ಷಿಣ ಏಷ್ಯಾದ ಉಪಗ್ರಹವನ್ನು ನಿರ್ಮಿಸಿ, ಉಡಾವಣೆ ಮಾಡಿ, ದಕ್ಷಿಣ ಏಷ್ಯಾದ ದೇಶಗಳಿಗೆ ಕೊಡುಗೆ ನೀಡಿದರು. ಅವರ ನಾಯಕತ್ವದಲ್ಲಿ, ನಾವು ಜಿ20 ಉಪಗ್ರಹವನ್ನು ಸಹ ಸಾಕಾರಗೊಳಿಸಿದ್ದೇವೆ. 10 ವರ್ಷಗಳ ಹಿಂದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ನಮಗೆ ಒಂದೇ ಒಂದು ಸ್ಟಾರ್ಟ್ಅಪ್ ಕಂಪನಿ ಇತ್ತು. ಇಂದು ನಾವು ಬಾಹ್ಯಾಕಾಶ ಉದ್ಯಮದಲ್ಲಿ 300 ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳನ್ನು ಹೊಂದಿದ್ದೇವೆ. ಖಾಸಗಿ ಕಂಪನಿಗಳು ಎರಡು ಸಬ್ ಆರ್ಬಿಟಲ್ ಕಾರ್ಯಾಚರಣೆಗಳನ್ನು ಮಾಡುತ್ತವೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಹೇಳಿದರು.

(ಏಜೆನ್ಸೀಸ್)

2015 ರಿಂದ 2025 ರವರೆಗೆ ಪೂರ್ಣಗೊಂಡ ಕಾರ್ಯಾಚರಣೆಗಳು 2005 ರಿಂದ 2015 ರವರೆಗಿನ ಕಾರ್ಯಾಚರಣೆಗಳಿಗಿಂತ ಎರಡು ಪಟ್ಟು ಹೆಚ್ಚಿದೆ. ಕಳೆದ 6 ತಿಂಗಳುಗಳಲ್ಲಿ, ಮೂರು ಪ್ರಮುಖ ಕಾರ್ಯಾಚರಣೆಗಳನ್ನು ಸಾಧಿಸಲಾಗಿದೆ. ಆಕ್ಸಿಯಮ್-4 ಮಿಷನ್ ಒಂದು ಪ್ರತಿಷ್ಠಿತ ಕಾರ್ಯಾಚರಣೆಯಾಗಿದೆ. ಮೊದಲ ಭಾರತೀಯನನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯಲಾಯಿತು ಮತ್ತು ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲಾಯಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net