ವಿಷ ಸೇವಿಸಿ ಸಿಎಂ 'ಯೋಗಿ ಆದಿತ್ಯನಾಥ್' ಜನತಾ ದರ್ಬಾರ್​ಗೆ ಬಂದ ವ್ಯಕ್ತಿ| adityanath

yogi
Published on

ಲಕ್ನೋ: ಇಂದು (ಆ.21) ಲಕ್ನೋದಲ್ಲಿ ನಡೆದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 'ಜನತಾ ದರ್ಬಾರ್'ಗೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ. ಆ ವ್ಯಕ್ತಿಯನ್ನು ಗಾಜಿಯಾಬಾದ್ ಜಿಲ್ಲೆಯ ಸಿರೌಲಿ ಗ್ರಾಮದ 65 ವರ್ಷದ ಸತ್ಬೀರ್ ಗುರ್ಜರ್ ಎಂದು ಗುರುತಿಸಲಾಗಿದೆ.

ಅಲ್ಲಿ ಹಾಜರಿದ್ದ ಜನರು ಮತ್ತು ಅಧಿಕಾರಿಗಳಿಗೆ ತಮ್ಮ ಸಮಸ್ಯೆಯಿಂದ ಹತಾಶೆಗೊಂಡು ವಿಷ ಸೇವಿಸಿರುವುದಾಗಿ ಆತ ಹೇಳಿದ್ದಾನೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಗುರ್ಜರ್ ಅವರನ್ನು ತಕ್ಷಣವೇ ಲಕ್ನೋದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿಗಿದೆ. ಅಲ್ಲಿ ವೈದ್ಯರ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರ ಪ್ರಾಣಾಪಾಯಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net