ಬಾಹ್ಯಾಕಾಶ ಸಂಶೋಧನೆಯಲ್ಲಿ ಇಸ್ರೋ ಮೈಲುಗಲ್ಲು

Untitled design (1)
ದೇವದುರ್ಗದ ಮುಕ್ತಾಯಕ್ಕ ಮಹಿಳಾ ಪಿಯು ಕಾಲೇಜಿನಲ್ಲಿ ಸಂಭ್ರಮಾಚಣೆ ನಡೆಸಲಾಯಿತು. ಉಪನ್ಯಾಸಕರಾದ ಕೆ.ವಿನೋದ್‌ಕುಮಾರ ನಾಯಕ, ಶಿವರಾಜ, ನಾಗರಾಜ್, ಸುಮಯ್ಯ, ಸಂಗೀತಾ, ಸುಮಂಗಲಾ, ಮದಿಯಾ ಇದ್ದರು.
Published on

ದೇವದುರ್ಗ: ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಜಗತ್ತಿನ ಮುಂದೆ ಹೊಸ ಮೈಲುಗಲ್ಲು ಸ್ಥಾಪಿಸಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ ಎಂದು ಉಪನ್ಯಾಸಕ ಕೆ.ವಿನೋದ್‌ಕುಮಾರ ನಾಯಕ ಹೇಳಿದರು.

ಇದನ್ನೂ ಓದಿ: ಇನ್ಮುಂದೆ ಆಗಸ್ಟ್​ 23 ರಾಷ್ಟ್ರೀಯ ಬಾಹ್ಯಾಕಾಶ ದಿನ: ಪ್ರಧಾನಿ ಮೋದಿ ಘೋಷಣೆ
ಪಟ್ಟಣದ ಮುಕ್ತಾಯಕ್ಕ ಮಹಿಳಾ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಚಂದ್ರಯಾನ-3 ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಇಸ್ರೋ ವಿಜ್ಞಾನಿಗಳ ನಿರಂತರ ಪರಿಶ್ರಮ ಚಂದ್ರಯಾನ-3 ಯಶಸ್ವಿಯಾಗಿದೆ.

ಬಾಹ್ಯಾಕಾಶ ಸಂಶೋಧನೆಯಲ್ಲಿ ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಭಾರತವಾಗಿದೆ. ವಿದ್ಯಾರ್ಥಿಗಳು ಆಕಾಶ ಕಾಯ, ರಾಕೆಟ್, ನಕ್ಷತ್ರ, ಗ್ರಹಗಳ ಬಗ್ಗೆ ಅಧ್ಯಯಯನ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net