Mpox Case ಭಾರತದಲ್ಲಿ ಎಂಪಾಕ್ಸ್ ಪ್ರಕರಣ ದೃಢ; ಕೇಂದ್ರದ ಸ್ಪಷ್ಟನೆ ಏನು?

mpox
Published on

ನವದೆಹಲಿ: ಭಾರತದಲ್ಲಿ ಎಂಪಾಕ್ಸ್ ವೈರಸ್​ ಪ್ರತ್ಯೇಕ ಪ್ರಕರಣ ಪತ್ತೆಯಾಗಿದ್ದು, ಇತ್ತೀಚೆಗೆ ವಿದೇಶದಲ್ಲಿ ಪ್ರಯಾಣ ಮಾಡಿ ಭಾರತಕ್ಕೆ ಬಂದಿದ್ದ ವ್ಯಕ್ತಿಗೆ ಎಂಪಾಕ್ಸ್ ಸೋಂಕು ತಗಲಿರುವುದು ಖಚಿತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ವೈರಸ್‌ಗಿಂತ ಭಿನ್ನವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಶಂಕಿತ ಎಂಪಾಕ್ಸ್ ಪ್ರಕರಣ ದೃಢಪಟ್ಟಿದ್ದು, ಪ್ರಯಾಣ ಸಂಬಂಧಿತ ಸೋಂಕು ಎಂದು ಪರಿಶೀಲಿಸಲಾಗಿದೆ. ಪ್ರಯೋಗಾಲಯದ ಪರೀಕ್ಷೆಯಲ್ಲಿ ರೋಗಿಯಲ್ಲಿ ಪಶ್ಚಿಮ ಆಫ್ರಿಕಾದ ಕ್ಲೇಡ್- 2 ನ ಎಂಪಾಕ್ಸ್ ವೈರಸ್ ಇರುವಿಕೆಯನ್ನು ದೃಢಪಡಿಸಿದೆ. ಜುಲೈ 2022 ರಿಂದ ಭಾರತದಲ್ಲಿ ವರದಿಯಾದ ಹಿಂದಿನ 30 ಪ್ರಕರಣಗಳಂತೆ ಇದು ಒಂದು ಪ್ರತ್ಯೇಕ ಪ್ರಕರಣವಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಭಾಗವಲ್ಲ ಸಚಿವಾಲಯ ಹೇಳಿದೆ.

ಇದು ಎಂಪಾಕ್ಸ್‌ನ ಕ್ಲೇಡ್-1ಗೆ ಸಂಬಂಧಿಸಿದೆ. ಎಂಪಾಕ್ಸ್‌ ಸೋಂಕಿತ ವ್ಯಕ್ತಿಯನ್ನು ಎಂಪಾಕ್ಸ್ ಕಾಯಿಲೆ ಚಿಕಿತ್ಸೆಗೆ ಮೀಸಲಾಗಿಟ್ಟಿರುವ ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿರಸಲಾಗಿದೆ. ಆತನ ಆರೋಗ್ಯ ಸ್ಥಿರವಾಗಿದೆ. ಮತ್ತು ಯಾವುದೇ ಕೊಮೊರ್ಬಿಡಿಟಿಗಳನ್ನು ಎದುರಿಸುತ್ತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೋಮವಾರ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜಾಗತಿಕ ಎಂಪಾಕ್ಸ್ ಸೋಂಕು ಹರಡುವಿಕೆ ಕುರಿತು ಸಲಹೆಯನ್ನು ನೀಡಿದೆ. ರಾಜ್ಯ ಅಧಿಕಾರಿಗಳು ಮುನ್ನೆಚ್ಚರಿಕೆಗಳನ್ನು ಕಾಪಾಡಿಕೊಳ್ಳಲು ಮತ್ತು ಎಂಪಾಕ್ಸ್​ನ ತಡಗಟ್ಟುವಿಕೆಯ ಬಗ್ಗೆ ಹರಡುವಂತೆ ಒತ್ತಾಯಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಸೋಂಕು ಸಾರ್ವಜನಿಕವಾಗಿ ಹರಡುವ ಯಾವುದೇ ಅಪಾಯವಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಎಂಪಾಕ್ಸ್ ವೈರಸ್ ಎಂದರೇನು?: ಎಂಪಾಕ್ಸ್ ವೈರಸ್ ಸಿಡುಬಿನ ವೈರಸ್‌ಗಳ ಕುಟುಂಬದ ಭಾಗವಾಗಿದೆ. ಇದನ್ನು ಮೊದಲು 1958 ರಲ್ಲಿ ಪ್ರಯೋಗಾಲಯ ಕೋತಿಗಳಲ್ಲಿ ಗುರುತಿಸಲಾಯಿತು. ನಂತರ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ದೇಶಗಳ ಉಷ್ಣವಲಯದ ಮಳೆ ಕಾಡುಗಳಲ್ಲಿ ಈ ವೈರಸ್ ಕಂಡು ಬಂದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net