ಮಾಂಸಾಹಾರ ನಿಷೇಧಿಸಿದ ಜಗತ್ತಿನ ಏಕೈಕ ನಗರ ಭಾರತದ ಈ ಪಲಿಟಾನಾ..! ಇಲ್ಲಿ ಇಷ್ಟು ಕಟ್ಟುನಿಟ್ಟಿನ ಕ್ರಮವೇಕೆ? |Ban Meat

dk - 2025-06-10T142028.310
Published on

Ban Meat: ಭಾರತದಲ್ಲಿ ಅತಿ ಪುರಾತನ ಕಾಲದಿಂದಲೂ ಸಸ್ಯಹಾರ ಹಾಗೂ ಮಾಂಸಹಾರ ಬಗ್ಗೆ ವಿಭಿನ್ನ ಚರ್ಚೆಗಳು ನಡೆಸುತ್ತಲೇ ಬಂದಿದ್ದಾರೆ. ಇಲ್ಲಿ ಎಷ್ಟು ಜನ ಸಸ್ಯಹಾರಿ ಜನರಿದ್ದಾರೆ ಹಾಗೆಯೇ ಅದಕ್ಕಿಂತಲೂ ಅಧಿಕ ಮಾಂಸಾಹಾರಿಗಳಿದ್ದಾರೆ. ಹೀಗಾಗಿ ಸಸ್ಯಹಾರಿ ಹಾಗೂ ಮಾಂಸಹಾರಿಗಳು ಮಧ್ಯೆ ಭಿನ್ನ ಅಂಶಗಳನ್ನು ಮಂಡಿಸುತ್ತಲೇ ಇರುತ್ತಾರೆ. ಆದಗ್ಯೂ ಭಾರತದ ಕೆಲವೆಡೆ ಮಾಂಸಹಾರ ನಿಷೇಧ ಮಾಡಲಾಗಿದೆ. 2014ರಲ್ಲಿ ಗುಜರಾತ್​​ನ 'ಪಲಿಟಾನಾ' ನಗರವನ್ನು 'ಮಾಂಸ ಮುಕ್ತ ನಗರ' ಅಲ್ಲಿನ ಸರ್ಕಾರ ಘೋಷಿಸಿದೆ. ಅಂದಿನಿಂದ ಗುಜರಾತ್‌ನ ಪಲಿಟಾನಾ ನಗರವು ಮಾಂಸವನ್ನು ನಿಷೇಧಿಸಿರುವ ವಿಶ್ವದ ಏಕೈಕ ನಗರವಾಗಿದೆ.

ಈ ನಗರದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸುವುದು, ಮಾರಾಟ ಮಾಡುವುದು ಮತ್ತು ಹೊಂದಿರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರು ಸಹ ಮಾಂಸವನ್ನು ತರಲು ಅಥವಾ ತಿನ್ನಲು ಅವಕಾಶವಿಲ್ಲ. ಅಸಲೆಂಟಿ ನಗರವು ವಿಶಿಷ್ಟವಾಗಿದೆ. ಸರ್ಕಾರ ಏಕೆ ಅಂತಹ ನಿರ್ಧಾರ ತೆಗೆದುಕೊಂಡಿತು ಎಂಬುದನ್ನು ತಿಳಿಯೋಣ.

ಗುಜರಾತ್​​ನ ಭಾವನಗರ ಜಿಲ್ಲೆಯಲ್ಲಿರುವ ಪಲಿಟಾನಾ ನಗರ ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಇದು ರಾಜಧಾನಿ ಅಹಮದಾಬಾದ್​ ಬಳಿ ನೆಲೆಗೊಂಡಿದೆ. ಇನ್ನು ಈ ನಗರವನ್ನು ಜೈನ ದೇವಾಲಯ ಪಟ್ಟಣ ಎಂದು ಕರೆಯಲಾಗುತ್ತದೆ. ಹೀಗಾಗಿ ಈ ಪವಿತ್ರತೆಯನ್ನು ಮತ್ತಷ್ಟು ಕಾಪಾಡುವ ಸದುದ್ದೇಶದಿಂದ ಹಾಗೂ ಈ ವಿಶೇಷ ಸ್ಥಾನಮಾನ ಕಾಪಾಡಿಕೊಳ್ಳುವ ಉದ್ದೇಶದಿಂದ ಅಲ್ಲಿನ ರಾಜ್ಯ ಸರ್ಕಾರವು ಅಧಿಕೃತವಾಗಿ ಸಸ್ಯಹಾರ ನಗರವೆಂದು ಘೋಷಿಸಿದೆ. ಈ ನಗರದಲ್ಲಿ 900ಕ್ಕೂ ಅಧಿಕ ಜೈನ ದೇವಲಾಯಗಳಿದ್ದು, ಜಗತ್ತಿನಾದ್ಯಂತ ಹೆಚ್ಚಿನ ಪ್ರವಾಸಿಗರು ಇಲ್ಲಿ ಸೇರುತ್ತಾರೆ. ಜೈನ ಭಕ್ತರು ವರ್ಷವಿಡೀ ಇಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.

ವಿಶ್ವದ ಏಕೈಕ ಮಾಂಸ ಮುಕ್ತ ನಗರ

ಇಲ್ಲಿ ಜೈನರು ಅತಿಹೆಚ್ಚು ಇರುವುದರಿಂದ ಜೈನಧರ್ಮದ ಅತಿಮುಖ್ಯ ತತ್ವ ಎಂದ್ರೆ ಅದು ಅಹಿಂಸೆ. ಯಾವುದೇ ಜೀವಿಗಳಿಗೆ ಹಾನಿ ಮಾಡದಿರುವುದು ಇದರ ನಂಬಿಕೆ. ಸರ್ಕಾರ ಪಾಲಿಟಾನವನ್ನು ಮಾಂಸ ಮುಕ್ತ ನಗರ ಎಂದು ಘೋಷಿಸಿದೆ. ಅದರಂತೆ, ಮಾಂಸ, ಮೀನು ಮತ್ತು ಮೊಟ್ಟೆಗಳ ಮಾರಾಟ ಮತ್ತು ಸೇವನೆಯ ಮೇಲೆ ಸಂಪೂರ್ಣ ನಿಷೇಧವಿದೆ. ಸಂಪೂರ್ಣ ಸಸ್ಯಾಹಾರಿ ನಗರವೆಂದು ಘೋಷಿಸಲ್ಪಟ್ಟ ಪಾಲಿಟಾನದಲ್ಲಿ ಯಾವುದೇ ಕಸಾಯಿಖಾನೆಗಳು ಅಥವಾ ಮಾಂಸಾಹಾರಿ ರೆಸ್ಟೋರೆಂಟ್‌ಗಳನ್ನು ಹೊಂದಲು ಅನುಮತಿ ಇಲ್ಲ. ಪ್ರವಾಸಿಗರು ಮಾಂಸಾಹಾರಿ ಆಹಾರವನ್ನು ನಗರಕ್ಕೆ ತರುವುದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ.

ಇನ್ನು ಈ ನಗರದ ಆರ್ಥಿಕತೆಯು ಧಾರ್ಮಿಕ ಪ್ರವಾಸೋದ್ಯಮದ ಮೇಲೆ ಅಭಿವೃದ್ಧಿ ಹೊಂದುತ್ತಿದೆ, ವಾರ್ಷಿಕವಾಗಿ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಮತ್ತು ದೇವಾಲಯ ನಿರ್ವಹಣಾ ಚಟುವಟಿಕೆಗಳು, ಹೋಟೆಲ್‌ಗಳು ಮತ್ತು ಧರ್ಮಶಾಲೆಗಳ ಮೂಲಕ ಅನೇಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net