More

    ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಸಿಂಧು ಮೆನನ್​ ಈಗ ಹೇಗಿದ್ದಾರೆ? ಇಲ್ಲಿವೆ ಫೋಟೋಗಳು…

    ಬೆಂಗಳೂರು: ನಟ ದೇವರಾಜ್​ ನಟನೆಯ ಹುಲಿಯಾ ಸಿನಿಮಾ ಮೂಲಕ ಬಾಲನಟಿಯಾಗಿ ಗುರುತಿಸಿಕೊಂಡ ನಟಿ ಸಿಂಧು ಮೆನನ್​ ಕನ್ನಡಿಗರಿಗೆ ಚಿರಪರಿಚಿತ.

    ನಟ ಕಿಚ್ಚ ಸುದೀಪ್​ ಅಭಿನಯದ ನಂದಿ ಮತ್ತು ದರ್ಶನ್​ ಅಭಿನಯದ ಧರ್ಮ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಸಿಂಧು ಮೆನನ್​ ತುಂಬಾ ಹತ್ತಿರವಾದರು. ಇಷ್ಟೇ ಅಲ್ಲದೆ, ಕನ್ನಡದಲ್ಲಿ ಜೇಷ್ಠ, ಖುಷಿ, ಮಾರಿ ಕಣ್ಣು ಹೋರಿ ಮ್ಯಾಗೆ ಮತ್ತು ಯಾರೇ ನೀ ಹುಡುಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಸಿಂಧು, ತೆಲಗು, ತಮಿಳು ಮತ್ತು ಮಲಯಾಳಂನಲ್ಲೂ ನಟಿಸಿದ್ದಾರೆ. ಕನ್ನಡಕ್ಕಿಂತ ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಮೋಹನ್​ ಲಾಲ್​, ಜಯರಾಮ್​ ಮತ್ತು ಮುಮ್ಮಟ್ಟಿಯಂತಹ ಸ್ಟಾರ್​ ನಟರೊಂದಿಗೆ ನಟಿಸಿದ್ದಾರೆ.

    1985ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸಿಂಧು, ಸುಮಾರು 60 ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ 2010ರಲ್ಲಿ ಡೊಮಿನಿಕ್​ ಪ್ರಭು ಎಂಬುವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ವೃತ್ತಿಪರರಾದ ಪ್ರಭು ಅವರನ್ನು 2010ರ ಏಪ್ರಿಲ್​ 25ರಂದು ವಿವಾಹವಾದರು. ದಂಪತಿಗೆ ಒಬ್ಬ ಮಗಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.

    ಸದ್ಯ ಯುನೈಟೆಡ್​ ಕಿಂಗ್​ಡಮ್​ನಲ್ಲಿ ತಮ್ಮ ಪತಿಯೊಂದಿಗೆ ಸಿಂಧು ನೆಲೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಿಂಧು ಅವರು ಆಗಾಗ ತಮ್ಮ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿ ನಂತರ ಮರೆಯಾದ ನಟಿ ಈಗ ಹೇಗಿದ್ದಾರೆ ಎಂದು ನೋಡುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ. ಸಿಂಧು ಮೆನನ್​ ಇನ್​ಸ್ಟಾಗ್ರಾಂ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಇತ್ತೀಚಿನ ಫೋಟೋಗಳನ್ನು ನೀವಿಲ್ಲಿ ನೋಡಬಹುದು. (ಏಜೆನ್ಸೀಸ್​)

    ಸ್ವರ್ಗದಂತಿರುವ ಲಕ್ಷದ್ವೀಪಕ್ಕೆ ತಲುಪೋದು ಹೇಗೆ? ಯಾವೆಲ್ಲ ದಾಖಲೆಗಳು ಬೇಕು? ಇಲ್ಲಿದೆ ಪ್ರಮುಖ ಸಲಹೆಗಳು

    ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 20 ವರ್ಷ ಜೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts