More

    VIDEO|ಬಾಲು ಸರ್ ಲೈಫ್​ನಲ್ಲಿ ಮಾಡಿದ ದೊಡ್ಡ ಮಿಸ್ಟೇಕ್ ಇದೇನಾ?

    ಬೆಂಗಳೂರು: ನಾಡಿನ ಪ್ರೀತಿಯ ಬಾಲು ಸರ್ ಇನ್ನು ನೆನಪಿನಂಗಳದಲ್ಲಿ ಚಿರಸ್ಥಾಯಿ. ಅತ್ಯಂತ ದುಃಖಮಯ ಸನ್ನಿವೇಶ ಇದು. ಆದರೂ, ಇಷ್ಟು ಬೇಗ ಬದುಕು ಕೊನೆಗೊಳ್ಳುವುದಕ್ಕೇನು ಕಾರಣ? ದಿಢೀರ್ ಅನಾರೋಗ್ಯ ಕಾರಣವೇನು? ಬಾಲು ಸರ್ ಲೈಫ್​ನಲ್ಲಿ ಮಾಡಿದ ದೊಡ್ಡ ಮಿಸ್ಟೇಕ್ ಇದೇನಾ?

    ಈ ಕಾರ್ಯಕ್ರಮ ಅಟೆಂಡ್ ಮಾಡಿದ್ದೇ ಬಾಲು ಸರ್ ಬದುಕಿಗೆ ಮುಳುವಾಯ್ತು ಎಂಬರ್ಥದ ವಿಡಿಯೋ ಒಂದು ವೈರಲ್ ಆಗಿದೆ!. ಕಾರ್ಯಕ್ರಮ ಯಾವಾಗ ನಡೆಯಿತು ಎಂಬಿತ್ಯಾದಿ ವಿವರಗಳು ಸದ್ಯ ಲಭ್ಯವಿಲ್ಲ. ವಿಡಿಯೋದಲ್ಲಿರುವ ದೃಶ್ಯ ಪ್ರಕಾರ, ಟೋಕಿಯೋ ತಮಿಳು ಸಂಘ ಏರ್ಪಡಿಸಿದ ಕಾರ್ಯಕ್ರಮ ಅದು. ಬಾಲು ಸರ್ ಕಾರ್ಯಕ್ರಮಕ್ಕೆ ಮಾಸ್ಕ್, ಕೈಗವುಸು ಧರಿಸಿಕೊಂಡೇ ವೇದಿಕೆಯೇರಿದ್ದರು.

    ಆದರೆ ಹಾಡುವುದಕ್ಕೆ ಅಣಿಯಾದಾಗ ಅಲ್ಲಿನ ಸನ್ನಿವೇಶ ಹೀಗಿತ್ತು. ಮಾಸ್ಕ್ ಧರಿಸದ ನಿರೂಪಕ. ಆತ ಮುಟ್ಟಿದ ಸ್ಟ್ಯಾಂಡ್. ಬಾಲು ಸರ್ ಅಲ್ಲಿ ಒಂದು ಸ್ಟ್ಯಾಂಡ್​ನಲ್ಲಿದ್ದ ಟ್ಯಾಬ್ ಅನ್ನು ಮತ್ತೊಂದು ಸ್ಟ್ಯಾಂಡ್​ಗೆ ವರ್ಗಾಯಿಸುತ್ತಾರೆ. ನಂತರ ಪ್ರೇಕ್ಷಕರನ್ನು ನೋಡಿ ಕೈ ಮುಗಿಯುತ್ತಾರೆ. ವೇದಿಕೆಯಲ್ಲಿದ್ದವರಿಗೂ ಕೈ ಮುಗಿದು ನಂತರ ಮಾಸ್ಕ್ ಕೆಳಕ್ಕೆಳೆಯುತ್ತಾರೆ. ಇದು ಮೊದಲ ತಪ್ಪು ಎನ್ನುವ ಅಂಶವನ್ನು ಎಡಿಟ್ ಮಾಡಿದ ವಿಡಿಯೋದಲ್ಲಿ ಸೇರಿಸಲಾಗಿದೆ.

    ನಂತರ ಮೈಕ್ ಎತ್ತಿಕೊಂಡು ಮಾಸ್ಕ್ ಧರಿಸದ ನಿರೂಪಕನ ಸಮೀಪ ಬರುತ್ತಾರೆ. ಇದು ಎರಡನೇ ತಪ್ಪು ಎನ್ನುವುದು ಹೈಲೈಟ್ ಆಗುತ್ತದೆ. ಅದಾಗಿ ನಿರೂಪಕ ಬದಿಯಲ್ಲಿದ್ದ ಸ್ಟ್ಯಾಂಡ್ ಅನ್ನು ಪಕ್ಕಕ್ಕೆ ಸರಿಸಿ ಹಿಂದೆ ನಿಂತು ಶರ್ಟ್ ಸರಿಮಾಡಿಕೊಂಡು ಅದೇ ಕೈನಲ್ಲಿ ಮೂಗು ಒರೆಸಿಕೊಳ್ಳುತ್ತಾರೆ. ಇದು ಸಹಜವಾಗಿ ಘಟಿಸುವ ಮತ್ತೊಂದು ತಪ್ಪು ಎಂಬ ಅಂಶವಿರುವ ವಿಡಿಯೋ ವೈರಲ್ ಆಗಿದೆ. ಆದರೆ, ಇದುವೇ ಅವರ ಅನಾರೋಗ್ಯಕ್ಕೆ ಕಾರಣವಾಯಿತೆಂದು ದೃಢೀಕರಿಸುವ ಅಂಶ ಇನ್ನೂ ಲಭ್ಯವಾಗಿಲ್ಲ. ( ವಿಡಿಯೋ – ಸೋಷಿಯಲ್ ಮೀಡಿಯಾ)

    LIVE| ಗಾನ ಗಾರುಡಿಗನಿಗೆ ಅಂತಿಮ ನಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts