ಸೌತ್​ ಬ್ಯೂಟಿ ತ್ರಿಷಾ ಹೆಸರಿನಲ್ಲಿದೆ ಒಂದು ಗ್ರಾಮ: ತಮಿಳುನಾಡಿನಲ್ಲಲ್ಲ, ಇದು ಇರುವುದು ಎಲ್ಲಿ ಗೊತ್ತಾ? Trisha

Trisha
Published on

Trisha : ಬಹುಭಾಷ ನಟಿ ತ್ರಿಷಾ ಅವರವನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್​, ಸೂರ್ಯ, ವಿಕ್ರಮ್, ಪ್ರಭಾಸ್​, ಚಿರಂಜೀವಿ, ಅಜಿತ್​, ಸಿಂಬು ಸೇರಿದಂತೆ ಸ್ಟಾರ್​ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಪವರ್​ಸ್ಟಾರ್​ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ತ್ರಿಷಾ ಭಾರತದ ಚಿತ್ರರಂಗದ ಸಾರ್ವಕಾಲಿಕ ರಾಣಿ. ಹೆಚ್ಚು ಗಾಸಿಪ್‌ಗಳಲ್ಲಿ ಕಾಣಿಸಿಕೊಳ್ಳದ ನಟಿ. 40 ವರ್ಷ ವಯಸ್ಸಾದರೂ ಇನ್ನೂ ಬ್ಯಾಚುಲರ್​ ಆಗಿಯೇ ಉಳಿದಿದ್ದಾರೆ. ತಮ್ಮದೇಯಾದ ಅಭಿಮಾನಿ ಬಳಗವನ್ನು ಹೊಂದಿರುವ ತ್ರಿಷಾ, ಇಂದಿಗೂ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಮೌನಂ ಪೇಸಿಯಾದೆ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ತ್ರಿಷಾ, ಪ್ರಸ್ತುತ ಮಾಸ್ ಹೀರೋಗಳ ಜೊತೆಗೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿದ್ದ ತ್ರಿಷಾ, ಕೆಲವು ವರ್ಷಗಳ ಕಾಲ ಸರಿಯಾದ ಕತೆಯ ಆಯ್ಕೆಗಳ ಕೊರತೆಯಿಂದ ಅವರು ನಟಿಸಿದ ಚಿತ್ರಗಳು ಹೀನಾಯವಾಗಿ ವಿಫಲವಾದ ಕಾರಣ, ತಮ್ಮ ಮಾರುಕಟ್ಟೆಯನ್ನು ಕಳೆದುಕೊಂಡರು. ಆದರೆ ಮಣಿರತ್ನಂ ನಿರ್ದೇಶನದ ಎರಡು ಭಾಗಗಳ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ತ್ರಿಷಾ ಅವರ ಕುಂಡವೈ ಪಾತ್ರವು ಹೆಚ್ಚಿನ ಗಮನ ಸೆಳೆಯಿತು. ಈ ಚಿತ್ರದ ಯಶಸ್ಸಿನೊಂದಿಗೆ ತ್ರಿಷಾ ಮತ್ತೆ ಬಿಜಿ ನಟಿಯಾದರು.

ತ್ರಿಷಾ ಅವರು ಮತ್ತೊಮ್ಮೆ ದಳಪತಿ ವಿಜಯ್ ಜೊತೆ ಲಿಯೋ ಚಿತ್ರದಲ್ಲಿ ಮತ್ತು ವಿಡಾಮುಯರ್ಚಿ ಚಿತ್ರದಲ್ಲಿ ಅಜಿತ್ ಜೊತೆ ನಟಿಸಿದರು. ಇದಾದ ನಂತರ, ಅಧಿಕ್ ರವಿಚಂದ್ರನ್ ನಿರ್ದೇಶನದ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದಲ್ಲಿ ಅಜಿತ್ ಎದುರು ನಟಿಸಿದರು. ಪ್ರಸ್ತುತ ಮಣಿರತ್ನಂ ನಿರ್ದೇಶನದ 'ಥಗ್​ ಲೈಫ್' ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ತಾಜಾ ಸಂಗತಿ ಏನೆಂದರೆ, ತ್ರಿಷಾ ಅವರ ಅಭಿಮಾನಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತ್ರಿಷಾ ಹೆಸರಿನ ಒಂದು ಗ್ರಾಮವನ್ನು ತೋರಿಸಲಾಗಿದ್ದು, ಪ್ರಸ್ತುತ ಜಾಲತಾಣದಲ್ಲಿ ಅನೇಕರ ಗಮನ ಸೆಳೆಯುತ್ತಿದೆ. ಅಭಿಮಾನಿಯೊಬ್ಬ ತ್ರಿಷಾ ಹೆಸರಿನ ಪಟ್ಟಣವನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ, ಆ ಪಟ್ಟಣದ ನಾಮಫಲಕದ ಮುಂದೆ ನಿಂತು ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ವೈರಲ್​ ಆಗಿದೆ.

ಆ ಗ್ರಾಮದ ಹೆಸರು 'ವಿಜಯಕ್ ತ್ರಿಷಾ'. ಈ ಗ್ರಾಮ ಲಡಾಖ್​​​ನ ನುಬ್ರಾ ಕಣಿವೆಯಿಂದ ವಿಶ್ವದ ಅತಿ ಎತ್ತರದ ಬೇಸ್ ಕ್ಯಾಂಪ್ ಎಂದು ಕರೆಯಲ್ಪಡುವ ಸಿಯಾಚಿನ್ ಬೇಸ್ ಕ್ಯಾಂಪ್​ಗೆ ಹೋಗುವ ದಾರಿಯಲ್ಲಿದೆ. ಈ ವಿಡಿಯೋ ಪ್ರಸ್ತುತ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅನೇಕರು ತ್ರಿಷಾ ಎಂಬ ಹೆಸರಿನ ಗ್ರಾಮವಿದೆಯೇ ಎಂದು ಆಶ್ಚರ್ಯ ಪಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net