ಸಲಾರ್ ಟೀಸರ್ ಬಿಡುಗಡೆ ಸಮಯಕ್ಕೂ ಕೆಜಿಎಫ್ 2 ಕ್ಲೈಮ್ಯಾಕ್ಸ್ ದೃಶ್ಯಕ್ಕೂ ಲಿಂಕ್ ಇದೆಯೇ?

salaar
Published on

ಆಂಧ್ರಪ್ರದೇಶ: ಜುಲೈ 6 ರಂದು ಬೆಳಗ್ಗೆ 5:12ಕ್ಕೆ ಬಿಡುಗಡೆಯಾಗುತ್ತಿರುವ ಸಲಾರ್ ಟೀಸರ್ ಬಿಡುಗಡೆಯ ಸಮಯವನ್ನು ಕೇಳಿ ಅನೇಕರು ಆಶ್ಚರ್ಯವ್ಯಕ್ತಪಡಿಸಿದ್ದಾರೆ. ಹೌದು, ಟೀಸರ್​​​​ ಅನ್ನು ಆ ಸಮಯದಲ್ಲಿಯೇ ಬಿಡುಗಡೆ ಮಾಡುತ್ತಿರುವ ಬಗ್ಗೆ ಈಗ ಚರ್ಚೆಯಾಗುತ್ತಿದೆ.

ಮುಂಬರುವ ಈ ಆಕ್ಷನ್ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಆದ್ದರಿಂದ ನಿರೀಕ್ಷೆಗಳು ಸ್ವಲ್ಪ ಹೆಚ್ಚೇ ಇದೆ. ಚಿತ್ರದಲ್ಲಿ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಈಗ ಸಲಾರ್​​​​ ಟೀಸರ್ ಬಿಡುಗಡೆಯ ಸಮಯ ಮತ್ತು ಕೆಜಿಎಫ್ 2 ಕ್ಲೈಮ್ಯಾಕ್ಸ್‌ಗೆ ಲಿಂಕ್ ಮಾಡಿ ಚರ್ಚೆ ನಡೆಯುತ್ತಿದೆ.

ಚಿತ್ರೋದ್ಯಮದ ಟ್ರ್ಯಾಕರ್ ಮನೋಬಲ ವಿಜಯಬಲನ್ ಅವರು ಇದೀಗ 'ಕೆಜಿಎಫ್ 2' ಕ್ಲೈಮ್ಯಾಕ್ಸ್​​​​ಗೂ ಸಲಾರ್ ಟೀಸರ್ ಬಿಡುಗಡೆಯ ಸಮಯಕ್ಕೂ ಕನೆಕ್ಟ್ ಮಾಡಿ ಒಂದು ಸುಳಿವು ನೀಡಿದ್ದಾರೆ. ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ, ಮನೋಬಲ ವಿಜಯಬಲನ್ ಅವರು 'ಕೆಜಿಎಫ್: ಅಧ್ಯಾಯ 2' ರಲ್ಲಿ ಕ್ಲೈಮ್ಯಾಕ್ಸ್‌ ದೃಶ್ಯದಲ್ಲಿ ರಾಕಿ ಭಾಯ್ ಸಮುದ್ರದಲ್ಲಿ ಮುಳುಗುವ ಮೊದಲು 5:12 ಕ್ಕೆ ದಾಳಿ ಮಾಡುತ್ತಾರೆ ಎಂದು ಕೆಜಿಎಫ್ 2 ಚಿತ್ರದ ದೃಶ್ಯ ಹಂಚಿಕೊಂಡಿದ್ದಾರೆ.

ಯಶ್ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ ಕೆಜಿಎಫ್​​​​ನಿಂದ ಖ್ಯಾತಿ ಗಳಿಸಿದ ಪ್ರಶಾಂತ್ ನೀಲ್, ಪ್ರಭಾಸ್ ಅಭಿನಯದ ಟೀಸರ್ ಬಿಡುಗಡೆ ಮಾಡಲು ಈಗ ಅದೇ ಸಮಯವನ್ನು ಆರಿಸಿಕೊಂಡಿದ್ದಾರೆ. ಕೆಲವರು ಮನೋಬಲ ವಿಜಯಬಲನ್ ಅವರ ಟ್ವೀಟ್ ಅನ್ನು ನಿರಾಕರಿಸಿದರೆ, ಮತ್ತೆ ಕೆಲವರು ಒಪ್ಪಿದ್ದಾರೆ. ಒಳ್ಳೆಯ ಸಮಯ ನೋಡಿದ ನಂತರ ತಯಾರಕರು ಇದನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಅದೇನೇ ಇರಲಿ ಈ ಎಲ್ಲಾ ಪ್ರಶ್ನೆಗಳಿಗೆ ಜುಲೈ 6ರ ಬೆಳಗ್ಗೆ ಮೊದಲು ಉತ್ತರ ಸಿಗುತ್ತದೆಯೇ ಎಂದು ನೋಡೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net