ನಂಬಿ... ನಾನಿನ್ನೂ ಸಿಂಗಲ್: ರಿಲೇಷನ್​ಶಿಪ್ ಸ್ಟೇಟಸ್ ಬಗ್ಗೆ ರಶ್ಮಿಕಾ ಕೊಟ್ಟ ಉತ್ತರವಿದು

Rashmika 4 jan 20
Published on

ಬೆಂಗಳೂರು: ಸಿನಿಮಾ ಸೆಲೆಬ್ರಿಟಿಗಳೆಂದರೆ ಅಲ್ಲಿ ವದಂತಿಗಳಿಗೇ ಹೆಚ್ಚು ಜಾಗ. ಒಂದಲ್ಲ ಒಂದು ವಿಚಾರಕ್ಕೆ ಸ್ಟಾರ್​ಗಳು ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ಪ್ರೀತಿ, ಪ್ರೇಮ, ಡೇಟಿಂಗ್ ವಿಚಾರ ಇದ್ದರಂತೂ ಅಭಿಮಾನಿಗಳ ಪಾಲಿಗದು ಕೌತುಕದ ಮೂಟೆ ಇದ್ದಂತೆ. ಇದೀಗ ಅದೇ ವಿಚಾರದ ಬಗ್ಗೆ ಕನ್ನಡತಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದಾರೆ. ಒಬ್ಬಂಟಿನಾ ಅಥವಾ ಜಂಟಿನಾ ಎಂಬ ಬಗ್ಗೆ ಮಾತನಾಡಿದ್ದಾರೆ.

‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಖಾತೆ ತೆರೆದಿದ್ದ ನಟಿ ರಶ್ಮಿಕಾ ಮಂದಣ್ಣ ಸದ್ಯ ಕನ್ನಡಕ್ಕಿಂತ ಟಾಲಿವುಡ್​ನಲ್ಲಿಯೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸಾಲುಸಾಲು ಸ್ಟಾರ್ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅವರ ಜನಪ್ರಿಯತೆ ಹೆಚ್ಚಾದಂತೆ ಸಾಕಷ್ಟು ವದಂತಿಗಳೂ ಸೃಷ್ಟಿಯಾಗಿವೆ. ವಿಜಯ್ ದೇವರಕೊಂಡ ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ, ಇನ್ನೇನು ಈ ಜೋಡಿ ಮದುವೆಯನ್ನೇ ಆಗಲಿದೆ ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು. ಆ ಮಾತುಗಳನ್ನೆಲ್ಲ ರಶ್ಮಿಕಾ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

‘ನನ್ನ ಹೆಸರನ್ನು ಯಾರ್ಯಾರೋ ಜತೆಗೆ ತಳುಕು ಹಾಕುತ್ತಿದ್ದವರಿಗೆ ಇಲ್ಲಿದೆ ನನ್ನ ಉತ್ತರ. ನಾನು ಸಿಂಗಲ್. ಸಿಂಗಲ್ ಆಗಿರುವುದನ್ನು ನಾನು ಪ್ರೀತಿಸುತ್ತೇನೆ. ಪದೇಪದೆ ಆ ವಿಚಾರ ಪ್ರಸ್ತಾಪಿಸುವವರಿಗೆ ನಾನು ಹೇಳುವುದೇನೆಂದರೆ, ಅಯ್ಯೋ ನಾನು ಸಿಂಗಲ್ ಆಗಿದ್ದೇನಿ ಎಂದು ಕೊರಗಬೇಡಿ. ಅದನ್ನೇ ಎಂಜಾಯ್ ಮಾಡಿ’ ಎಂದಿದ್ದಾರೆ. ಸದ್ಯ ಕನ್ನಡ, ತೆಲುಗು ಸೇರಿ ಹಲವು ಭಾಷೆಗಳಲ್ಲಿ ಅಲ್ಲು ಅರ್ಜುನ್ ನಾಯಕತ್ವದ ‘ಪುಷ್ಪ’ ಸಿನಿಮಾ ತಯಾರಾಗುತ್ತಿದ್ದು. ಆ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಈಗಾಗಲೇ ಹೈದರಾಬಾದ್​ಗೆ ತೆರಳಿರುವ ಅವರು, ಸದ್ಯದಲ್ಲೇ ಶೂಟಿಂಗ್​ನಲ್ಲಿಯೂ ಭಾಗವಹಿಸುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net