'ಕರ್ನಾಟಕ ಭವನವೇನು ನಿಮ್ಮ​ ಬೆಡ್​ ರೂಮಾ?' ಬಿಜೆಪಿ ನಾಯಕರಿಗೆ ಕಾಂಗ್ರೆಸ್​ ಪ್ರಶ್ನೆ

ramesh
Published on

ಬೆಂಗಳೂರು: ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಸೆಕ್ಸ್ ವಿಡಿಯೋ ಸಿಡಿ ಬಹಿರಂಗವಾಗಿರುವ ಬೆನ್ನಲ್ಲೇ ಕಾಂಗ್ರೆಸ್​ ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದೆ. ಆ ವಿಡಿಯೋ ದೆಹಲಿಯ ಕರ್ನಾಟಕ ಭವನದಲ್ಲಿ ಮಾಡಿರುವುದು ಎನ್ನಲಾಗಿದ್ದು, ಬಿಜೆಪಿ ನಾಯಕರು ಕರ್ನಾಟಕ ಭವನವನ್ನು ಬೆಡ್​ ರೂಂ ಎಂದುಕೊಂಡಿದ್ದಾರಾ ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

ಯುವಸಮುದಾಯಕ್ಕೆ ಉದ್ಯೋಗ ಕೊಡಿ ಎಂದರೆ, ಉದ್ಯೋಗ ಕೇಳಿ ಬಂದವರಿಗೆ ನೀವು ಏನನ್ನ ಕೊಡಲು ಹೊರಟಿದ್ದೀರಿ? ಎಂದು ರಾಜ್ಯದ ಕಾಂಗ್ರೆಸ್​ ಟ್ವಿಟ್ಟರ್ ಖಾತೆಯಿಂದ ಬಿಜೆಪಿಗೆ ಪ್ರಶ್ನೆ ಕೇಳಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯ ಆವರಣದಲ್ಲಿ ಪೊಲೀಸ್‌ ಅಧಿಕಾರಿಯ ಮೇಲೆಯೇ ಕೈ ಎತ್ತಿದ್ದ ಫೋಟೋವೊಂದನ್ನು ಶೇರ್​ ಮಾಡಿದ್ದ ಬಿಜೆಪಿ, ಕಾಂಗ್ರೆಸ್‌ ನಾಯಕರು ಹೇಳಿದಂತೆ ಕೇಳಲು ಪೊಲೀಸರೇನು ಅಂದು ಕಾಂಗ್ರೆಸ್​ ಪಕ್ಷದ ಮನೆಯ ಆಳುಗಳಾಗಿದ್ದರೇ!? ಎಂದು ಪ್ರಶ್ನೆ ಕೇಳಿತ್ತು. ಆ ಟ್ವೀಟ್​ನ್ನು ರಿಟ್ವೀಟ್​ ಮಾಡಿರುವ ಕಾಂಗ್ರೆಸ್​ ದೆಹಲಿಯ ಕರ್ನಾಟಕ ಭವನವೇನು ನಿಮ್ಮ ಬೆಡ್​ ರೂಮಾ ಎಂದು ಮರುಪ್ರಶ್ನೆ ಕೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net