More

    ಇರೋದ್ರಲ್ಲಿ ಸಕ್ಕರೆಗಿಂತ ಬೆಲ್ಲ ಒಳ್ಳೇದು ಅಂತಾರಲ್ಲ, ನಿಜವೇ?

    ಬೆಂಗಳೂರು: ಮಧುಮೇಹಿಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗುತ್ತಿದ್ದಂತೆಯೇ ಸಿಹಿ ತಿನ್ನುವವರ ಸಂಖ್ಯೆ ತನ್ನಿಂತಾನೇ ಕಡಿಮೆಯಾಗಿದೆ. ಆದರೂ ಮನಸ್ಸು ಕೇಳಬೇಕಲ್ಲ?! ಸಿಹಿ ತಿನ್ನಬೇಕೆನ್ನುವ ತುಡಿತ ಇದ್ದೇ ಇರುತ್ತದೆ. ಪ್ರತಿ ಬಾರಿ ಚಹಾ-ಕಾಫಿ ಕುಡಿಯುವಾಗ, ಸಿಹಿ ತಿಂಡಿ-ತಿನಿಸು ತಿನ್ನುವಾಗ ಇದು ಸಕ್ಕರೆಯದೋ, ಬೆಲ್ಲದ್ದೋ ಅಂತ ಒಮ್ಮೆ ಯೋಚಿಸುತ್ತೇವೆ. ಸಕ್ಕರೆ ಬದಲು ಬೆಲ್ಲದ್ದು ಕುಡಿದರೆ/ತಿಂದರೆ ಒಳ್ಳೆಯದು ಅಂತ ಯಾರೋ ಹೇಳಿದ್ದು ನೆನಪಾಗುತ್ತದೆ. ಹಾಗಾದರೆ ನಿಜವಾಗಿಯೂ ಸಕ್ಕರೆಗಿಂತ ಬೆಲ್ಲ ಒಳ್ಳೆಯದಾ? ಹೇಗೆ ಒಳ್ಳೆಯದು? ಎಷ್ಟರಮಟ್ಟಿಗೆ ಒಳ್ಳೆಯದು? ಇಲ್ಲಿದೆ ಸಂಪೂರ್ಣ ಮಾಹಿತಿ.

    ಇದನ್ನೂ ಓದಿ: ಹಲಸಿನಹಣ್ಣಿನ ಸೇವನೆ ಉತ್ತಮ ಆರೋಗ್ಯಕ್ಕೆ ಎಷ್ಟು ಮುಖ್ಯ ಗೊತ್ತಾ?; ಪ್ರಯೋಜನಗಳು ಇಂತಿವೆ..

    ಬೆಲ್ಲದಲ್ಲಿ ಸಕ್ಕರೆಗಿಂತ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಇರುವುದಂತೂ ಖಚಿತ. ರಕ್ತಹೀನತೆಯನ್ನು ತಡೆಯುತ್ತದೆಯೇ ಹೊರತು, ಆ ಸಮಸ್ಯೆ ಯಾರಿಗಾದರೂ ಇದ್ದರೆ ಅದು ಹೆಚ್ಚಾಗುವುದಕ್ಕೆ ಸಹಾಯ ಮಾಡುವುದಿಲ್ಲ. ಆದರೆ ಸಕ್ಕರೆ ಮಾತ್ರ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುವುದಿಲ್ಲ. ಬೆಲ್ಲವು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಸಕ್ಕರೆಯು ರಕ್ತ ಶುದ್ಧೀಕರಣಕ್ಕೆ ಸಹಾಯ ಮಾಡುವುದಿಲ್ಲ. ಬೆಲ್ಲವು ಸಕ್ಕರೆಗಿಂತ ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಆದರೆ ಸಕ್ಕರೆಯನ್ನು ರಕ್ತವು ತಕ್ಷಣವೇ ಹೀರಿಕೊಳ್ಳುತ್ತದೆ, ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಬೆಲ್ಲವು ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕವನ್ನು ಹೊಂದಿರುತ್ತದೆ. ಪ್ರತಿ 10ಗ್ರಾಂ ಬೆಲ್ಲದಲ್ಲಿ 16ಎಂಜಿ ಖನಿಜಗಳಿವೆ. ಆದ್ದರಿಂದ ದಿನದಲ್ಲಿ ಒಂದು ಬಾರಿ ಸೇವಿಸಿದಾಗ ದೇಹಕ್ಕೆ ಬೇಕಾದ ಶೇ. 4ರಷ್ಟು ಖನಿಜಗಳ ಅವಶ್ಯಕತೆ ಪೂರೈಕೆ ಆಗುತ್ತದೆ. ಆದರೆ ಸಕ್ಕರೆಯು ಖಾಲಿ ಕ್ಯಾಲೋರಿಗಳ ಮೂಲವಾಗಿದೆ. ಬೆಲ್ಲವು ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆಯಲ್ಲದೇ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸಕ್ಕರೆ ಹಾಗಲ್ಲ, ಅದರಿಂದ ಕೀಲು ನೋವೂ ನಿವಾರಣೆಯಾಗುವುದಿಲ್ಲ, ರಕ್ತದೊತ್ತಡ ನಿಯಂತ್ರಣಕ್ಕೂ ಬರುವುದಿಲ್ಲ. ಲಿವರ್‌ನಲ್ಲಿರುವ ವಿಷವನ್ನು ಹೊರಗೆ ಹಾಕಲು ಬೆಲ್ಲ ಸಹಾಯ ಮಾಡುತ್ತದೆ. ಈ ಕೆಲಸ ಸಕ್ಕರೆಯಿಂದ ಸಾಧ್ಯವಿಲ್ಲ. ಬೆಲ್ಲವು ರಕ್ತಹೀನತೆಯನ್ನು ತಡೆಯುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಈ ಕೆಲಸಗಳು ಸಕ್ಕರೆಯಿಂದ ಸಾಧ್ಯವಾಗುವುದಿಲ್ಲ. ಬೆಲ್ಲದ ತಯಾರಿಕೆ ಒಂದು ರೀತಿಯಲ್ಲಿ ಪರಿಸರ ಸ್ನೇಹಿ. ಆದರೆ ಸಕ್ಕರೆಯದು ಹಾಗಲ್ಲ. ಸಕ್ಕರೆ ಉದ್ಯಮ ಅಪಾರ ಪ್ರಮಾಣದಲ್ಲಿ ಗಾಳಿ, ನೀರು ಮತ್ತು ಮಣ್ಣನ್ನು ಕಲುಷಿತಗೊಳಿಸುತ್ತದೆ. ಇವು ಸಕ್ಕರೆ ಮತ್ತು ಬೆಲ್ಲದ ನಡುವೆ ಇರುವ ವ್ಯತ್ಯಾಸಗಳು. ಇದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಬಳಕೆದಾರರಿಗೆ ಬಿಟ್ಟಿದ್ದು.

    ದಾಳಿಂಬೆಯ ಸಲಾಡ್​ನಿಂದ ಎಷ್ಟೆಲ್ಲಾ ಉಪಯೋಗ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts