ಟಿಕೆಟ್ ದರ ಏರಿಕೆ ಕುರಿತು ಸ್ಪಷ್ಟನೆ ನೀಡಿದ 'ಬ್ರೋ' ಚಿತ್ರದ ನಿರ್ಮಾಪಕ!

Untitled design (85) (1)
Published on

ಆಂಧ್ರಪ್ರದೇಶ: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಸುಪ್ರೀಮ್ ಹೀರೋ ಸಾಯಿ ಧರಮ್ ತೇಜ್ ಮೊದಲ ಬಾರಿಗೆ ನಟಿಸಿರುವ ಫ್ಯಾಂಟಸಿ ಕಾಮಿಡಿ ಜಾನರ್​ ಒಳಗೊಂಡ 'ಬ್ರೋ' ಚಿತ್ರವು ಇದೇ ಜುಲೈ 28, 2023 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲು ಸಜ್ಜಾಗಿದೆ. ಈ ನಡುವೆ ಇದೀಗ ಚಿತ್ರದ ಟಿಕೆಟ್​ ದರ ಏರಿಕೆಯ ಬಗ್ಗೆ ಗೊಂದಲ ಉಂಟಾಗಿದ್ದು, ಇದರ ಬಗ್ಗೆ ಸ್ವತಃ ನಿರ್ಮಾಪಕ ವಿಶ್ವ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

ಸಮುದ್ರಕನಿ ನಿರ್ದೇಶಿಸಿರುವ 'ಬ್ರೋ' ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತ ಟಿ.ಜಿ. ವಿಶ್ವ ಪ್ರಸಾದ್ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಈ ರೀತಿ ಹೇಳಿದ್ದಾರೆ. "ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡು ರಾಜ್ಯಗಳಲ್ಲಿಯೂ ಸಿನಿಮಾದ ಟಿಕೆಟ್​ ದರದಲ್ಲಿ ಏರಿಕೆ ಇದೆಯಾ ಎಂಬ ಪ್ರಶ್ನೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ ಗೊಂದಲ ಬೇಡ! ಟಿಕೆಟ್ ದರವನ್ನು ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ" ಎಂದು ಹೇಳುವ ಮುಖೇನ ಸ್ಪಷ್ಟನೆ ನೀಡಿದ್ದಾರೆ.

ಚಿತ್ರದಲ್ಲಿ ಕೇತಿಕಾ ಶರ್ಮಾ ಮತ್ತು ಪ್ರಿಯಾ ಪ್ರಕಾಶ್ ವಾರಿಯರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಬ್ರಹ್ಮಾನಂದಂ, ರೋಹಿಣಿ ಮೊಲ್ಲೇಟಿ, ಸುಬ್ಬರಾಜು, ತಣಿಕೆಲ್ಲ ಭರಣಿ ಮತ್ತು ರಾಜಾ ಚೆಂಬೋಲು ಇತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್​ನಲ್ಲಿ ಅರಳಿರುವ ಈ ಚಿತ್ರಕ್ಕೆ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net