ನನ್ನ ಟ್ವೀಟ್​​ಗಳೇನಿದ್ದರೂ ಮಾನವೀಯತೆ ಬಗ್ಗೆ … ಕಂಗನಾ ಕಾಲೆಳೆದ ಇರ್ಫಾನ್

Irfan and Kangana - Final
Published on

ಮುಂಬೈ: ಸೋಷಿಯಲ್​ ಮೀಡಿಯಾದಲ್ಲಿ ಕಂಗನಾ ರಣಾವತ್​ ಹಾಕುವ ಪೋಸ್ಟ್​ಗಳ ಬಗ್ಗೆ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಇತ್ತೀಚೆಗಷ್ಟೇ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ಮತ್ತೊಮ್ಮೆ ಮಾತನಾಡಿರುವ ಅವರು, ಕಂಗನಾ ಟ್ವೀಟ್​ಗಳೇನಿದ್ದರೂ ದ್ವೇಷ ಸಾಧಿಸುವುದಕ್ಕೆ ಇದ್ದರೆ, ತಮ್ಮ ಟ್ವೀಟ್​ಗಳು ಮಾನವೀಯತೆಯನ್ನು ಸಾರುವುದಕ್ಕಿರುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.

ಗುರುವಾರ ಹೊಸ ಟ್ವೀಟ್​ ಮಾಡಿರುವ ಇರ್ಫಾನ್​ ಪಠಾಣ್​, ಒಂದು ಟ್ವೀಟ್​ ಹಿಂದೆ ತಮ್ಮ ಉದ್ದೇಶವೇನಿರುತ್ತದೆ ಮತ್ತು ಕಂಗನಾ ಅವರ ಉದ್ದೇಶಗಳೇನಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನನ್ನ ಎಲ್ಲ ಟ್ವೀಟ್​ಗಳು ಮಾನವೀಯತೆ ಅಥವಾ ಈ ದೇಶದ ಪ್ರಜೆಗಳ ಹಿತಾಸಕ್ತಿಯಲ್ಲಿ ಇರುತ್ತವೆ. ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದವನು ಮತ್ತು ನನ್ನ ಜವಾಬ್ದಾರಿಗಳೇನಿರಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಆದೇ ಕಂಗನಾ ತರಹದವರು ಸೋಷಿಯಲ್​ ಮೀಡಿಯಾದಲ್ಲಿ ಹೇಗಿರಬೇಕು ಎಂಬ ಜವಾಬ್ದಾರಿಯನ್ನು ಅರಿಯದೆ, ಬರೀ ದ್ವೇಷ ಸಾಧಿಸಿ ಬ್ಯಾನ್​ ಆಗುತ್ತಾರೆ ಎಂದು ಟ್ವೀಟ್​ ಮಾಡಿದ್ದಾರೆ ಇರ್ಫಾನ್​.

ಇರ್ಫಾನ್​ ಹೀಗೊಂದು ಟಾಂಗ್​ ಕೊಟ್ಟಿದ್ದರೂ, ಕಂಗನಾ ಮಾತ್ರ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಕಳೆದ ವಾರವಷ್ಟೇ ಕರೊನಾ ಪಾಸಿಟಿವ್​ ಆಗಿದ್ದ ಕಂಗನಾ, ಮುಂಬೈನಲ್ಲಿ ತಮ್ಮ ಮನೆಯಲ್ಲೇ ಕ್ವಾರಂಟೈನ್​ನಲ್ಲಿದ್ದಾರೆ. ಇರ್ಫಾನ್​ಗೆ ಕಂಗನಾ ಯಾವ ತರಹ ಪ್ರತಿಕ್ರಿಯಿಸುತ್ತಾರೋ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net