ಇರಾನ್​ ಬಂದರಿನಲ್ಲಿ ಭಾರೀ ಸ್ಫೋಟ; 28 ಸಾವು, 1000ಕ್ಕೂ ಅಧಿಕ ಮಂದಿಗೆ ಗಾಯ | Iran Port Fire

ವಿಜಯವಾಣಿ (89)
Published on

Iran Port Fire: ಏ.26ರಂದು ಇರಾನ್‌ನ ಅಬ್ಬಾಸ್ ನಗರದ ಶಾಹಿದ್ ರಾಜೀ ಬಂದರಿನಲ್ಲಿ ಭಾರಿ ಸ್ಫೋಟದಲ್ಲಿ 28 ಮಂದಿ ಸಾವನ್ನಪ್ಪಿದ್ದು, ಬೆಂಕಿ ಅವಘಡದಲ್ಲಿ 1000ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎನ್​ಡಿಟಿವಿ ವರದಿ ಉಲ್ಲೇಖಿಸಿದೆ.

ಬಂದರಿನಲ್ಲಿ ಸಂಭವಿಸಿದ ಸ್ಫೋಟದ ಶಬ್ದ 50 ಕಿ.ಮೀ ದೂರದವರೆಗೂ ವ್ಯಾಪಿಸಿದೆ. ಇರಾನ್‌ನ ಅತಿದೊಡ್ಡ ವಾಣಿಜ್ಯ ಬಂದರು ಇದ್ದಾಗಿದ್ದು, ಉಸಿರುಗಟ್ಟಿಸುವ ದಟ್ಟ ಹೊಗೆ ಆವರಿಸಿಕೊಂಡು ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂಬುದನ್ನು ಅರಿತ ಅಧಿಕಾರಿಗಳು, ಮುನ್ನೆಚ್ಚರಿಕೆಯ ಸಲುವಾಗಿ ತುರ್ತು ಕಾರ್ಯಾಚರಣೆಯತ್ತ ಗಮನಹರಿಸಲು ರಕ್ಷಣಾ ಪಡೆಗೆ ಸೂಚನೆ ನೀಡಿದ್ದಾರೆ.

ದಟ್ಟ ಹೊಗೆ ಆವರಿಸಿಕೊಂಡ ಹಿನ್ನೆಲೆ 23 ಕಿಲೋಮೀಟರ್ ಪೂರ್ವಕ್ಕೆ ಹಾರ್ಮೊಜ್ಗನ್​ ಪ್ರಾಂತ್ಯದ ರಾಜಧಾನಿ ಬಂದರ್ ಅಬ್ಬಾಸ್‌ನಲ್ಲಿರುವ ಎಲ್ಲಾ ಶಾಲಾ-ಕಾಲೇಜುಗಳು ಮತ್ತು ಕಚೇರಿಗಳನ್ನು ಭಾನುವಾರ ಸಂಪೂರ್ಣವಾಗಿ ಮುಚ್ಚುವಂತೆ ಆದೇಶಿಸಲಾಗಿದೆ. ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್​ಗಳಿಂದ ನೀರನ್ನು ಹಾಕಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net