More

    ಅತ್ತೆಯ ಸಮಾಧಾನಕ್ಕಾಗಿ ಸೊಸೆಯ ಹೆಣ ನೇಣಿಗೆ!

    ಟೆಹ್ರಾನ್: ಅತ್ತೆಯ ಸಮಾಧಾನಕ್ಕೆ ಸೊಸೆಯ ಹೆಣವನ್ನೇ ನೇಣಿಗೆ ಏರಿಸಿರುವ ಘಟನೆ ಇರಾನ್​ನಲ್ಲಿ ನಡೆದಿದೆ. ನೇಣು ಶಿಕ್ಷೆಗೆ ಗುರಿಯಾಗಿದ್ದ ಸೊಸೆಗೆ ಶಿಕ್ಷೆಗೆ ಕೆಲವು ಗಂಟೆ ಮುಂಚೆಯೇ ಹೃದಯಾಘಾತವಾಗಿದ್ದರಿಂದಾಗಿ ಈ ಘಟನೆ ನಡೆದಿರುವುದಾಗಿ ತಿಳಿಸಲಾಗಿದೆ.

    ಜಹ್ರಾ ಇಸ್ಮಾಯಿಲಿ ಹೆಸರಿನ ಮಹಿಳೆಯೊಂದಿಗೆ ಆಕೆಯ ಗಂಡ ಅಸಭ್ಯವಾಗಿ ವರ್ತನೆ ಮಾಡಿದ್ದನಂತೆ. ಅದೇ ಸಿಟ್ಟಿನಿಂದ ಆಕೆ ಗಂಡನನ್ನೇ ಕೊಲೆ ಮಾಡಿದ್ದಳು. ಆಕೆಗೆ ಇರಾನ್​ನ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಮಗನನ್ನು ಕೊಂದ ಸೊಸೆ ನೇಣಿಗೆ ಏರುವುದನ್ನು ತಾನು ನೋಡಬೇಕೆಂದು ಅತ್ತೆ ಕಾಯಲಾರಂಭಿಸಿದ್ದಳು.

    ಸೊಸೆಯನ್ನು ನೇಣಿಗೆ ಹಾಕುವ ದಿನವೂ ಬಂದಿತ್ತು. ಆದರೆ ಅದೇ ದಿನ ಅಪರಾಧಿ ಮಹಿಳೆಗೆ ಹೃದಯಾಘಾತವಾಗಿದೆ. ಆದರೆ ಆಕೆಯ ನೇಣು ಶಿಕ್ಷೆಗಾಗಿ ಕಾಯುತ್ತಿದ್ದ ಅತ್ತೆಗಾಗಿ ಜೈಲಿನ ಅಧಿಕಾರಿಗಳು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಹೃದಯಾಘಾತದಿಂದ ಸತ್ತಿದ್ದ ಅಪರಾಧಿ ಮಹಿಳೆಯ ದೇಹವನ್ನೇ ಮತ್ತೊಮ್ಮೆ ನೇಣಿಗೆ ಹಾಕಿ, ಅತ್ತೆ ನಿಟ್ಟುಸಿರು ಬಿಟ್ಟಿದ್ದಾರೆ. (ಏಜೆನ್ಸೀಸ್​)

    ಹಳದಿ ಕಲ್ಲಂಗಡಿ ಬೆಳೆಯಲ್ಲಿ ಸಾಧನೆ ತೋರಿದ ಕಲಬುರಗಿ ಯುವಕ; ವೈವಿಧ್ಯತೆ ಹುಡುಕಿದರೆ ಲಾಭವಿದೆಯೆಂದ ಕೃಷಿಕ

    ಕಾರ್ಟೂನ್​ನಲ್ಲಿ ಕಾಣಿಸಿಕೊಳ್ಳುವ ಮಹಿಳಾ ಪಾತ್ರಕ್ಕೂ ಹಿಜಾಬ್​ ಕಡ್ಡಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts