ಇರಾನ್​-ಇಸ್ರೇಲ್​ ಸಂಘರ್ಷ| 311 ಭಾರತೀಯರನ್ನು ಹೊತ್ತು ಇರಾನ್‌ನಿಂದ ದೆಹಲಿಗೆ ಬಂದಿಳಿದ ಮತ್ತೊಂದು ವಿಮಾನ| 311-citizens

delhi
Published on

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ದದಲ್ಲಿ ಅಮೆರಿಕ ಮಧ್ಯಪ್ರವೇಶಿಸಿದೆ. ಇರಾನ್‌ನ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದ ಕಾರಣ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಇರಾನ್‌ನ ಮಶಾದ್‌ ನಗರದಿಂದ ವಿಶೇಷ ವಿಮಾನದ ಮೂಲಕ ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಮೂಲಕ ಇದುವರೆಗೆ ಇರಾನ್‌ನಿಂದ ಭಾರತಕ್ಕೆ 1,428 ಭಾರತೀಯರು ಸ್ಥಳಾಂತರಗೊಂಡಿದ್ದಾರೆ.

ನವದೆಹಲಿ: ಆಪರೇಷನ್ ಸಿಂಧು ಅಡಿಯಲ್ಲಿ ಇಂದು (22) 311 ಭಾರತೀಯ ಪ್ರಜೆಗಳು ಇರಾನ್‌ನಿಂದ ಭಾರತಕ್ಕೆ ಮರಳಿದ್ದಾರೆ.

ಅಪರೇಷನ್‌ ಸಿಂಧು ವಿಮಾನ ನಾಗರಿಕರನ್ನು ತವರಿಗೆ ಕರೆತಂದಿದೆ. ಧಾರ್ಮಿಕ ಯಾತ್ರಿಕರು ಹಾಗೂ ವಿದ್ಯಾರ್ಥಿಗಳು ಸೇರಿ ಭಾರತದ ನಾಗರಿಕರನ್ನು ಕರೆತರಲಾಗಿದೆ.

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ, ಇರಾನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ಆಪರೇಷನ್ ಸಿಂಧುವನ್ನು ಪ್ರಾರಂಭಿಸಿದೆ.

ಈ ಸ್ಥಳಾಂತರ ಕಾರ್ಯದಲ್ಲಿ ನೇಪಾಳ ಹಾಗೂ ಶ್ರೀಲಂಕಾದ ಪ್ರಜೆಗಳು ಕೂಡ ಭಾಗಿಯಾಗಲಿದ್ದಾರೆ ಎಂದು ಇರಾನ್​​ನಲ್ಲಿರುವ ಭಾರತದ ರಾಯಭಾರಿ ಕಚೇರಿ ಹೇಳಿದೆ. ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಆಪರೇಷನ್ ರೈಸಿಂಗ್ ಲಯನ್ ಅಡಿಯಲ್ಲಿ ಟೆಹ್ರಾನ್ ಮೇಲೆ ದಾಳಿಯನ್ನು ನಡೆಸಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಪಶ್ಚಿಮ ಏಷ್ಯಾದಿಂದ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವ ನಿರ್ಣಾಯಕ ಕಾರ್ಯಾಚರಣೆಯಾದ ಆಪರೇಷನ್ ಸಿಂಧುವನ್ನು ಭಾರತ ಪ್ರಾರಂಭಿಸಿತ್ತು.

(ಏಜೆನ್ಸೀಸ್)

ಮೊದಲ ವಿಮಾನವು ಶುಕ್ರವಾರ ತಡರಾತ್ರಿ 290 ಭಾರತೀಯರೊಂದಿಗೆ ನವದೆಹಲಿಯಲ್ಲಿ ಇಳಿಯಿತು ಮತ್ತು ಎರಡನೇ ವಿಮಾನವು ಶನಿವಾರ ಮಧ್ಯಾಹ್ನ 310 ಭಾರತೀಯರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಲ್ಯಾಂಡ್​ ಆಯಿತು.

ಜೂನ್ 19ರಿಂದ ಈ ಕಾರ್ಯಚರಣೆ ನಡೆದಿದೆ. ಮೊದಲು ವಿಮಾನದಲ್ಲಿ ಉರ್ಮಿಯಾ ವಿಶ್ವವಿದ್ಯಾಲಯದ 110 ಭಾರತೀಯ ವಿದ್ಯಾರ್ಥಿಗಳು ದೆಹಲಿಯಲ್ಲಿ ಇಳಿದಿದ್ದಾರೆ. ಈ ವಿದ್ಯಾರ್ಥಿಗಳನ್ನು ಭೂ ಮಾರ್ಗದ ಮೂಲಕ ಅರ್ಮೇನಿಯಾಗೆ ಸ್ಥಳಾಂತರಿಸಲಾಯಿತು, ನಂತರ ಯೆರೆವಾನ್‌ನಿಂದ ನವದೆಹಲಿಗೆ ವಿಮಾನದಲ್ಲಿ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net