IPL-2025: ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ಆರ್​ಸಿಬಿ!

RCB
Published on

ಬೆಂಗಳೂರು: ಐಪಿಎಲ್​ 18ನೇ ಆವೃತ್ತಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದು ಬೀಗುತ್ತಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇದೀಗ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದಿದೆ. ಇನ್​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಐಪಿಎಲ್​ ತಂಡವೆಂಬ ಹೆಗ್ಗಳಿಕೆಗೆ ಆರ್​ಸಿಬಿ ಪಾತ್ರವಾಗಿದೆ.

ಆರ್​ಸಿಬಿ ಈಗ 17.8 ದಶಲಕ್ಷ ಹಿಂಬಾಲಕರನ್ನು ಪಡೆದುಕೊಂಡಿದೆ. ಈ ಮೂಲಕ ಚೆನ್ನೈ ಸೂಪರ್​ಕಿಂಗ್ಸ್​ (17.7 ದಶಲಕ್ಷ) ತಂಡವನ್ನು ಹಿಂದಿಕ್ಕಿದೆ. ಮುಂಬೈ ಇಂಡಿಯನ್ಸ್​ (16.2 ದಶಲಕ್ಷ), ಕೆಕೆಆರ್​ (7 ದಶಲಕ್ಷ), ಸನ್​ರೈಸರ್ಸ್​ (5.1 ದಶಲಕ್ಷ) ಮತ್ತು ರಾಜಸ್ಥಾನ ರಾಯಲ್ಸ್​ (4.7 ದಶಲಕ್ಷ) ನಂತರದ ಸ್ಥಾನದಲ್ಲಿವೆ.

ಆರ್​ಸಿಬಿ ತಂಡ ಇನ್ನು ತನ್ನ 3ನೇ ಹಾಗೂ ತವರಿನಲ್ಲಿ ಮೊದಲ ಪಂದ್ಯವನ್ನು ಬುಧವಾರ ಗುಜರಾತ್​ ಟೈಟಾನ್ಸ್​ ಎದುರು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಆರ್​ಸಿಬಿ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ (271 ದಶಲಕ್ಷ) ಈಗಾಗಲೆ ಇನ್​ಸ್ಟಾಗ್ರಾಂನಲ್ಲಿ ಸರ್ವಾಧಿಕ ಹಿಂಬಾಲಕರನ್ನು ಹೊಂದಿರುವ ಕ್ರಿಕೆಟಿಗ ಎನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net