

Shreyas Iyer : ಗುರುವಾರ (ಮೇ 29) ಮುಲ್ಲನ್ಪುರದಲ್ಲಿ ಆರ್‌ಸಿಬಿ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 8 ವಿಕೆಟ್‌ಗಳಿಂದ ಸೋಲುಂಡಿತು. ಈ ಪಂದ್ಯದಲ್ಲಿ ಪಂಜಾಬ್‌ನ ಬ್ಯಾಟ್ಸ್‌ಮನ್‌ಗಳು ನಿರಾಸದಾಯಕ ಪ್ರದರ್ಶನವನ್ನು ನೀಡಿದರು. ಆರ್‌ಸಿಬಿ ಬೌಲರ್‌ಗಳ ದಾಳಿಗೆ ಪಂಜಾಬ್‌ನ ಬ್ಯಾಟ್ಸ್‌ಮನ್‌ಗಳು ತತ್ತರಿಸಿ ಹೋದರು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕೇವಲ 101 ರನ್ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ ಕೇವಲ ಹತ್ತು ಓವರ್ಗಳಲ್ಲಿ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸಿತು. ಆದರೆ, ಈ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ವಿರುದ್ಧ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಟಾಮ್ ಮೂಡಿ ಅವರು ಅಯ್ಯರ್ ಮೇಲೆ ಕೋಪಗೊಂಡು. ಅಯ್ಯರ್ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಆಡುವುದನ್ನು ಕಲಿಯಬೇಕು ಎಂದು ಹೇಳಿದರು. ನಿರ್ಣಾಯಕ ಸಮಯದಲ್ಲಿ ಕ್ರೀಸ್‌ಗೆ ಬಂದ ಅಯ್ಯರ್ ಯಾವುದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಜವಾಬ್ದಾರಿಯುತವಾಗಿ ಆಡಬೇಕಿದ್ದ ಶ್ರೇಯಸ್, ಹ್ಯಾಸಲ್‌ವುಡ್ ಬೌಲಿಂಗ್‌ನಲ್ಲಿ ದೊಡ್ಡ ಶಾಟ್ ಆಡಲು ಪ್ರಯತ್ನಿಸಿ, ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿದರು. ಶ್ರೇಯಸ್ ಅಯ್ಯರ್ ಕೇವಲ ಎರಡು ರನ್ ಗಳಿಸಿದ ನಂತರ ಪೆವಿಲಿಯನ್ ತಲುಪಿದರು.
ಅದೇ ರೀತಿ, ಹ್ಯಾಸಲ್‌ವುಡ್ ಟಿ20 ಪಂದ್ಯಗಳಲ್ಲಿ ಅಯ್ಯರ್ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದ ವೇಗಿ ನಾಲ್ಕು ಬಾರಿ ಅಯ್ಯರ್ ಅವರನ್ನು ಔಟ್ ಮಾಡಿದ್ದಾರೆ. ಅಯ್ಯರ್ ಅವರು ಔಟ್ ಆಗಲು ಕಾರಣವಾದ ಅಸಡ್ಡೆ ಹೊಡೆತಗಳನ್ನು ಟಾಮ್ ಮೂಡಿ ಟೀಕಿಸಿದ್ದಾರೆ.
ಶ್ರೇಯಸ್ ಅಯ್ಯರ್ ಆ ಪರಿಸ್ಥಿತಿಯಲ್ಲಿ ಆಡಲೇ ಇಲ್ಲ. ನಾಯಕನಾಗಿ ತಮ್ಮ ಜವಾಬ್ದಾರಿಯನ್ನೂ ಮರೆತರು. ಹ್ಯಾಸಲ್‌ವುಡ್ ಈ ಹಿಂದೆ ಹಲವು ಬಾರಿ ತಮ್ಮನ್ನು ಔಟ್ ಮಾಡಿದ್ದಾರೆ ಎಂದು ಅಯ್ಯರ್ ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ, ಎಚ್ಚರಿಕೆಯಿಂದ ಆಡುವ ಬದಲು ಅವರು ತಮ್ಮ ವಿಕೆಟ್ ಬಿಟ್ಟುಕೊಟ್ಟರು. ಕೆಲವೊಮ್ಮೆ ನಾವು ನಮ್ಮ ಅಹಂಕಾರವನ್ನು ನಮ್ಮ ಜೇಬಿನಲ್ಲಿ ಇಟ್ಟು ಆಡಬೇಕಾಗುತ್ತದೆ. ಆಗ ಮಾತ್ರ ನಾವು ಯಶಸ್ಸನ್ನು ಸಾಧಿಸಬಹುದು ಎಂದು ಮೂಡಿ ಹೇಳಿದರು.
ಈ ಸೀಸನ್ನಲ್ಲಿ ತಮ್ಮ ನಾಯಕತ್ವ ಮತ್ತು ಬ್ಯಾಟಿಂಗ್‌ನಿಂದ ಪ್ರಭಾವಿತರಾಗಿರುವ ಶ್ರೇಯಸ್, ನಿರ್ಣಾಯಕ ಪಂದ್ಯದಲ್ಲಿ ವಿಫಲವಾದ ನಂತರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮೊದಲ ಕ್ವಾಲಿಫೈಯರ್ನಲ್ಲಿ ಸೋತ ಬಳಿಕ ನಾಳೆ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದವರು ಜೂನ್ 3ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ಜತೆ ಸೆಣಸಾಡಲಿದೆ. (ಏಜೆನ್ಸೀಸ್)