ಸಿಡಿಲಬ್ಬರದ ಶತಕದ ಬಳಿಕ ಅಭಿಷೇಕ್​ ಪ್ರದರ್ಶಿಸಿದ ಪತ್ರದಲ್ಲಿ ಏನು ಬರೆದಿತ್ತು? ಆ ಸಂದೇಶ ಯಾರಿಗೆ? Abhishek Sharma

Abhishek Sharma
Published on

Abhishek Sharma : ನಿನ್ನೆ (ಏ. 12) ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ವೀರೋಚಿತ ಪ್ರದರ್ಶನ ನೀಡಿದರು. ಅಕ್ಷರಶಃ ರನ್‌ಗಳ ಸುನಾಮಿಯನ್ನೇ ಸೃಷ್ಟಿಸಿದರು. ತಮ್ಮ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ ಬಿಬ್ಬಿರಿದ ಅಭಿಶೇಕ್​, ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಶತಕ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಅಭಿಷೇಕ್​ ಅವರು ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಮಾಡಿದರು. ಪಂಜಾಬ್ ಬೌಲರ್‌ಗಳ ಬೆವರಿಳಿಸಿದರು. ಬೌಲರ್ ಯಾರೇ ಆಗಿರಲಿ, ಯಾವುದೇ ರೀತಿಯ ಚೆಂಡನ್ನು ಎಸೆಯಲಿ, ಫಲಿತಾಂಶ ಮಾತ್ರ ಬೌಂಡರಿಯಾಗಿತ್ತು. ಅಭಿಷೇಕ್​ ಕೇವಲ 40 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ಗಳು ಮತ್ತು 14 ಬೌಂಡರಿಗಳು ಬಂದವು. ಈ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕವನ್ನು ಗಳಿಸಿದ ನಂತರ, ಅಭಿಷೇಕ್ ಶರ್ಮ ಇಡೀ ಮೈದಾನಕ್ಕೆ ಒಂದು ಕಾಗದವನ್ನು ತೋರಿಸಿದರು. ಆ ಕಾಗದದಲ್ಲಿ, "ಇದು ಆರೆಂಜ್ ಆರ್ಮಿಗಾಗಿ" ಎಂದು ಬರೆಯಲಾಗಿತ್ತು.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಪಂಜಾಬ್​ ತಂಡದ ವಿರುದ್ಧ ನಿನ್ನೆ (ಏ.12) ನಡೆದ ಪ್ರಸಕ್ತ ಟೂರ್ನಿಯ 27ನೇ ಐಪಿಎಲ್​ ಪಂದ್ಯದಲ್ಲಿ ಸನ್ ರೈಸಸ್​ ​ಹೈದರಾಬಾದ್ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಪಂಜಾಬ್​ ಇಲೆವನ್​ ಕಿಂಗ್ಸ್​ ನಿಗದಿತ 20 ಒವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 254 ಬೃಹತ್​ ರನ್​ ಪೇರಿಸಿತು. ನಾಯಕ ಶ್ರೇಯಸ್ ಆಯ್ಯರ್​ 36 ಎಸೆತಗಳಲ್ಲಿ ಆರು ಸಿಕ್ಸರ್​ ಹಾಗೂ 6 ಬೌಂಡರಿ ಬಾರಿಸುವ ಮೂಲಕ 82 ರನ್​ ಗಳಿಸಿ ಅಬ್ಬರಿಸಿದರು.

245 ಬೃಹತ್​ ರನ್​ಗಳ ಗುರಿ ಬೆನ್ನಟ್ಟಿದ SRH​ ತಂಡ, ಓಪನರ್​ಗಳಾದ ಟ್ರಾವಿಸ್​ ಹೆಡ್ 66 ರನ್​(37 ಎಸೆತ, 9 ಫೋರ್​, 3 ಸಿಕ್ಸ್​)ಗೆ ಔಟ್​ ಆದರು. ಅಬ್ಬರದ ಬ್ಯಾಟಿಂಗ್​ ಮುಂದುವರೆಸಿದ ಅಭಿಷೇಕ್​ ಶರ್ಮ, 40 ಎಸೆತಗಳಲ್ಲಿ ಶತಕ ಪೂರೈಸಿ ಸಂಭ್ರಮಿಸಿದರು. 54 ಎಸೆತಗಳಲ್ಲಿ 141 ರನ್​ಗಳಿಸಿ ಔಟ್ ಆದ​ ಶರ್ಮ ಗೇಮ್​ ಚೇಂಜರ್​ ಆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net