ಐಪಿಎಲ್ ಆರಂಭಕ್ಕೂ ಮುನ್ನ ದೆಹಲಿ ಕ್ಯಾಪಿಟಲ್ಸ್​ಗೆ ಅಘಾತ: ಲುಂಗಿ ಎನ್‌ಗಿಡಿ ಔಟ್, ಬದಲಿಗೆ ಅಸೀಸ್​ ಆಟಗಾರ ಎಂಟ್ರಿ!

mubark
Published on

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಈ ಟೂರ್ನಿಯಿಂದ ದಕ್ಷಿಣಾ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್ ​ಡಿಗಿ ಹೊರಗುಳಿದಿದ್ದಾರೆ.

ಗಾಯದ ಕಾರಣ ಕೊಟ್ಟು ಐಪಿಎಲ್‌ 2024 ಟೂರ್ನಿಯಿಂದ ಲುಂಗಿ ಎನ್ ​ಡಿಗಿ ಹಿಂದೆ ಸರಿದಿರುವುದು ದೆಹಲಿ ಕ್ಯಾಪಿಟಲ್ಸ್​ ತಂಡಕ್ಕೆ ನುಂಗಲಾರದ ತುತ್ತಾಗಿದೆ. ತಂಡ ಇನಿಂಗ್ಸ್‌ ಆರಂಭಿಸುವ ಸಲುವಾಗಿ ಲುಂಗಿ ಎನ್​ ಡಿಗಿ ಅವರ ಸೇವೆಯನ್ನು ನೆಚ್ಚಿಕೊಂಡಿತ್ತು. ಇತ್ತೀಚೆಗಷ್ಟೇ ಅದೇ ತಂಡದ ಹ್ಯಾರಿ ಬ್ರೂಕ್ ಅವರು ಟೂರ್ನಿಯಿಂದ ಹೊರನಡೆದ ಬಳಿಕ ಎನ್​ ಡಿಗಿ ಅವರ ಅಲಭ್ಯತೆ ಡೆಲ್ಲಿಗೆ ದೊಡ್ಡ ಅಘಾತ ಎದುರಾಗಿದೆ.

ಲುಂಗಿ ಎನ್‌ಗಿಡಿ ಬದಲಿಗೆ ಆಲ್ ರೌಂಡರ್ ಜೇಕ್ ಟ್ರೇಸರ್-ಮೆಕ್‌ಗುರ್ಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಹೆಸರಿಸಿದೆ. ಅವರು 50 ಲಕ್ಷ ರೂ. ಗೆ ಡೆಲ್ಲಿಗೆ ಆಡಲಿದ್ದಾರೆ ಎಂದು ಐಪಿಎಲ್ ಹೇಳಿಕೆ ತಿಳಿಸಿದೆ.

ಆಸ್ಟ್ರೇಲಿಯಾದ ಆಟಗಾರ ಜೇಕ್ ಟ್ರೇಸರ್-ಮೆಕ್‌ಗುರ್ಕ್‌ ಇತ್ತೀಚೆಗೆ ಆಕರ್ಷಕ ಶತಕದೊಂದಿಗೆ ಸುದ್ದಿಯಾಗಿದ್ದರು. ಅಕ್ಟೋಬರ್ ನಲ್ಲಿ ಲಿಸ್ಟ್ ಎ ಪಂದ್ಯದಲ್ಲಿ ಅತ್ಯಂತ ವೇಗದ ಶತಕ ಬಾರಿಸಿ ವಿಶ್ವದಾಖಲೆ ಬರೆದಿದ್ದರು. ಕೇವಲ 29 ಎಸೆತಗಳಲ್ಲಿ ಶತಕ ಹೊಡೆದಿದ್ದರು.

17ನೇ ಸೀಸನ್ ನ ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಕೆಲವು ವಿದೇಶಿ ಆಟಗಾರರು ಕೂಟದಿಂದ ಹೊರ ಹೋಗುವ ನಿರ್ಧಾರ ಮಾಡುತ್ತಿದ್ದಾರೆ. ಇಂಗ್ಲೀಷ್ ಬ್ಯಾಟರ್ ಗಳಾದ ಜೇಸನ್ ರಾಯ್, ಹ್ಯಾರಿ ಬ್ರೂಕ್ಸ್ ಅವರು ಆಡದಿರಲು ನಿರ್ಧರಿಸಿದ ಬಳಿಕ, ಇದೀಗ ದಕ್ಷಿಣ ಆಫ್ರಿಕಾದ ಬೌಲರ್ ಲುಂಗಿ ಎನ್ ಡಿಗಿ ಕೂಡಾ ಐಪಿಎಲ್ ನಿಂದ ಹೊರಗುಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net